ಬಂಟ್ವಾಳ : ಬಿ ಸಿ ರೋಡಿನ ಅಜ್ಜಿಬೆಟ್ಟು ಎಂಬಲ್ಲಿ ದಿನಸಿ ಅಂಗಡಿಯೊಂದರ ಮಾಲೀಕ ಮಹಿಳೆಯ ಸರ ಕಿತ್ತುಕೊಂಡ ಆರೋಪದ ಮೇಲೆ ಮಂಗಳೂರಿನ ಇಬ್ಬರನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.
ಬೈಕಂಪಾಡಿಯ ಅಶೋಕ (34) ಮತ್ತುದಂಬೆಲ್ ನ ಸಚಿನ್ (34) ಎಂದು ತಿಳಿದುಬಂದಿದೆ.ಖರೀದಿ ಮಾಡುವ ನೆಪದಲ್ಲಿ ಇಬ್ಬರು ಅಂಗಡಿಗೆ ಆಗಮಿಸಿ ಚೇಂಜ್ ಪಡೆಯಲು ಹಣದ ಡ್ರಾಯರ್ ಕಡೆಗೆ ಬಾಗಿದ ಮಾಲೀಕ ಸರೋಜಿನಿ ಅವರ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಆರೋಪಿಗಳಿಬ್ಬರೂ ತಮ್ಮ ಗುರುತು ಮರೆಮಾಚಲು ಹೆಲ್ಮೆಟ್ ಧರಿಸಿದ್ದರು.


