ಪ್ಯಾರೀಸ್ : 15 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆಯನ್ನು ನಿಷೇಧಿಸಿದ ಫ್ರಾನ್ಸ್ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಆ ಮೂಲಕ ಜಗತ್ತಿನಲ್ಲಿಆಸ್ಟ್ರೇಲಿಯಾ ಯಾದ ಬಳಿಕ ಅಪ್ರಾಪ್ತ ವಯಸ್ಸಿನವರಿಗೆ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಿರುವ 2 ನೇ ರಾಷ್ಟç ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಕ್ಕಳು ಅತಿಯಾಗಿ ಸೋಷಿಯಲ್ ಮೀಡಿಯಾ ಬಳಕೆ ಮಾಡುವುದರಿಂದ ಮಾನಸಿಕ ಆರೋಗ್ಯ ಸಮಸ್ಯೆ ಮತ್ತು ಸೇರಿದಂತೆ ಹಲವು ತೊಂದರೆ ಎದುರಿಸುತ್ತಿದ್ದಾರೆ. ಹೀಗಾಗಿ ಇಮ್ಯಾನ್ಯುಯಲ್ ಮ್ಯಾಕ್ರಾನ್ ನೇತೃತ್ವದ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಅಧಿವೇಶನದಲ್ಲಿ ಸೋಮವಾರದಿಂದ ಮಂಗಳವಾರದ ಮಧ್ಯರಾತ್ರಿವರೆಗೂ ನಡೆದ ಸುದೀರ್ಘ ಚರ್ಚೆ ಬಳಿಕ ೧೩೦ ಮತಗಳೊಂದಿಗೆ ಮಸೂದೆ ಅಂಗೀಕರಿಸಲಾಗಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಆಸ್ಟೆçÃಲಿಯಾದಲ್ಲಿ ಮಕ್ಕಳಿಗೆ ಸಾಮಾಜಿಕ ತಾಣ ನಿಷೇಧಿಸಲಾಗಿತ್ತು.
ಗೋವಾದಲ್ಲೂ ಚಿಂತನೆ : ಇನ್ನು ಆಂಧ್ರಪ್ರದೇಶದಲ್ಲೂ 15 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ದಾವೋಸ್ನಲ್ಲಿ ಆಂಧ್ರ ಸರ್ಕಾರದ ಸಚಿವರೊಬ್ಬರು ಸುಳಿವು ನೀಡಿದ್ದರು. ಇದೀಗ ಇದೇ ರೀತಿಯಲ್ಲಿ ಗೋವಾದಲ್ಲೂ ಜಾಲತಾಣದ ನಿರ್ಬಂಧಕ್ಕೆ ಸರ್ಕಾರ ಸಿದ್ಧತೆ ನಡೆಸಿದೆ ಎನ್ನಲಾಗಿದೆ.


