ಪೋರ್ಟ್‌ಲ್ಯಾಂಡ್ : ಆಕಾಶದಲ್ಲಿ ವಿಮಾನ ಹಾರಾಟ ನಡೆಸಿದ ಕೆಲವೇ ನಿಮಿಷದಲ್ಲಿ ಬಾಗಿಲು ದಿಢೀರ್ ಓಪನ್ ಆದ ಘಟನೆ ಅಲಾಸ್ಕಾ ಏರ್ಲೈನ್ಸ್ನ ಬೋಯಿಂಗ್ ಕಂ. 737 ಮ್ಯಾಕ್ಸ್ ಜೆಟ್ ಯುನೈಟೆಡ್ ಸ್ಟೇಟ್ಸ್‌ನ ಒರೆಗಾನ್‌ನ ಪೋರ್ಟ್‌ಲ್ಯಾಂಡ್ ವಿಮಾನ ನಿಲ್ದಾಣದಲ್ಲಿ ನಡೆದಿದೆ ಇದನ್ನು ತಿಳಿದ ಪೈಲಟ್ ತುರ್ತು ಭೂಸ್ಪರ್ಶ ಮಾಡಿದ್ದಾರೆ.
ಬೋಯಿಂಗ್ ಕಂ. 737 ಮ್ಯಾಕ್ಸ್ ವಿಮಾನ, ಪೋರ್ಟ್‌ಲ್ಯಾಂಡ್ ನಿಲ್ದಾಣದಿಂದ ಹಾರಾಟ ನಡೆಸಿದ ಕೆಲವೇ ನಿಮಿಷದಲ್ಲಿ ಇದರ ಬಾಗಿಲು ದಿಢೀರ್ ಓಪನ್ ಆಗಿದೆ. ಇದನ್ನು ಗಮನಿಸಿದ ಪೈಲಟ್ ತಕ್ಷಣ ವಿಮಾನವನ್ನು ಅದೇ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದಾರೆ. ಇದೀಗ ಈ ಬಗ್ಗೆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಮಾನದ ಮಧ್ಯದ ಕ್ಯಾಬಿನ್ ನಿರ್ಗಮದ ಬಾಗಿಲು ತೆರೆದುಕೊಂಡಿದೆ. ವಿಮಾನ ಹಾರಾಟ ನಡೆಸುತ್ತಿದ್ದ ಕಾರಣ ಜೋರಾಗಿ ಬೀಸುತ್ತಿದ್ದ ಗಾಳಿಗೆ ಆ ಬಾಗಿಲು ವಿಮಾನದಿಂದ ಬೇರ್ಪಟ್ಟಿದೆ.
ಈ ವಿಮಾನದಲ್ಲಿ 171 ಪ್ರಯಾಣಿಕರಿದ್ದು, 6 ವಿಮಾನ ಸಿಬ್ಬಂದಿಗಳಿದ್ದರು. ಪೈಲೆಟ್ ಸೇರಿದಂತೆ ಎಲ್ಲರು ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. 2023ರಲ್ಲಿ ವಿಮಾನದಲ್ಲಿ ಅಸುರಕ್ಷಿತ ಘಟನೆಗಳು ನಡೆದಿದೆ. ಇದೀಗ 2024ರಲ್ಲೂ ಇಂತಹ ಕೆಲವೊಂದು ಘಟನೆಗಳು ನಡೆಯುತ್ತಿದೆ ಎಂದು ಜಾಲತಾಣದಲ್ಲಿ ಚರ್ಚೆಯಾಗಿದೆ,ಇನ್ನು ಈ ಘಟನೆ ಬಗ್ಗೆ ವಿಮಾನದಲ್ಲಿದ್ದ ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿ ಅಲಾಸ್ಕಾ ಏರ್‌ಲೈನ್ಸ್ ತಿಳಿಸಿದೆ. ಈ ಘಟನೆ ವೇಳೆ ವಿಮಾನವು ಭೂಮಿಯಿಂದ 16,325 ಅಡಿ ಎತ್ತರದಲ್ಲಿತ್ತು ಎಂದು ಹೇಳಲಾಗಿದೆ.