Saturday, July 25, 2026
Homeಜಿಲ್ಲೆಪುತ್ತೂರು : ಸಾರಂಗ ಬೇಟೆಯಾಡುತ್ತಿದ್ದ ಮೂವರ ಬಂಧನ.

ಪುತ್ತೂರು : ಸಾರಂಗ ಬೇಟೆಯಾಡುತ್ತಿದ್ದ ಮೂವರ ಬಂಧನ.

ಪುತ್ತೂರು : ಉಪ್ಪಿನಂಗಡಿ ಸಮೀಪದ ಪಟ್ರಮೆ ಎಂಬಲ್ಲಿನ ಮೀಸಲು ಅರಣ್ಯದಲ್ಲಿ ಸಾರಂಗವನ್ನು ಬೇಟೆಯಾಡಿದ ಆರೋಪದ ಮೇಲೆ ಮೂವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಸಾರಂಗದ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ.

ಆ.23ರಂದು ಬುಧವಾರ ರಾತ್ರಿ ಕಪಿಲಾ ನದಿಯ ಬಳಿ ರಾತ್ರಿ ಗಸ್ತಿನಲ್ಲಿದ್ದ ಅರಣ್ಯಾಧಿಕಾರಿಗಳಿಗೆ ಕಾಡಿನಲ್ಲಿ ಗುಂಡಿನ ಸದ್ದು ಕೇಳಿಸಿತು. ತಕ್ಷಣ ಸ್ಥಳಕ್ಕೆ ಧಾವಿಸಿ ಸಾರಂಗವನ್ನು ಗುಂಡಿಕ್ಕಿ ಕೊಂದ ಮೂವರನ್ನು ಬಂಧಿಸಿದ್ದಾರೆ.

ಕೋಟಿಯಪ್ಪ ಗೌಡ, ಸುದೇಶ ಮತ್ತು ಪುನೀತ್ ಬಂಧಿತರು. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.
RELATED ARTICLES

LEAVE A REPLY

Please enter your comment!
Please enter your name here

Most Popular