ಪುತ್ತೂರು : ಅನುಮಾನಾಸ್ಪದ ರೀತಿಯಲ್ಲಿ ಹರಿಯುವ ತೋಡಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆ ಪುತ್ತೂರು ನಗರದ ರೋಟರಿಪುರದಲ್ಲಿ ನಡೆದಿದೆ.
ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ವ್ಯಕ್ತಿಯನ್ನು ಪುತ್ತೂರು ನಿವಾಸಿ ನಂದಕುಮಾರ್ (61) ಎಂದು ತಿಳಿದುಬಂದಿದೆ.
ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ನಂದ ಕುಮಾರ್ ರವರ ಮೃತದೇಹ ನೀರು ಹರಿಯುವ ತೋಡಿನಲ್ಲಿ ಪತ್ತೆಯಾಗಿದೆ ಸಾವನ್ನಪ್ಪುವ ಮೊದಲು ಪುತ್ತೂರಿನ ಸೊಸೈಟಿಯೊಂದರಿಂದ 1.40 ಲಕ್ಷ ಡ್ರಾ ಮಾಡಿದ್ದೂ ಶವದ ಬಳಿ ಹಣ ಕೊಂಡೊಯ್ದ ಖಾಲಿ ಚೀಲ ಮಾತ್ರ ಪತ್ತೆಯಾಗಿದೆ. ಯಾರೋ ಹಣವನ್ನು ಲೂಟಿಹೊಡೆದು ಕೊಲೆನಡೆಸಿರೋ ಶಂಕ್ಯೆ ವ್ಯಕ್ತವಾಗಿದೆ. ಪುತ್ತೂರು ನಗರ ಪೊಲೀಸರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.