ಪಣಜಿ : ಗೋವಾ ಅಗ್ನಿ ದುರಂತ ಬೆನ್ನಲ್ಲೇ ಥಾಯ್ಲೆಂಡ್‌ಗೆ ಪರಾರಿಯಾಗಿದ್ದ ನೈಟ್‌ಕ್ಲಬ್ ಮಾಲೀಕರನ್ನು ಅಲ್ಲಿನ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ. ನೈಟ್‌ಕ್ಲಬ್ ನಡೆಸುತ್ತಿದ್ದ ಸೌರವ್ ಲುತ್ರಾ ಮತ್ತು ಗೌರವ್ ಲುತ್ರಾ ವಿರುದ್ದ ಇಂಟರ್‌ಪೋಲ್ ಮತ್ತು ಬ್ಯೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ಥಾಯ್ಲೆಂಡ್‌ನ ಫುಕೆಟ್ ನಗರದಲ್ಲಿ ಇಬ್ಬರನ್ನೂ ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದು, ಭಾರತಕ್ಕೆ ಕರೆತರಲು ಸರ್ವ ರೀತಿಯ ಯತ್ನ ನಡೆದಿದೆ.
ಡಿಸೆಂಬರ್ 6 ರ ತಡರಾತ್ರಿ ಗೋವಾ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಅಗ್ನಿ ದುರಂತ ಮರುದಿನವೇ ಇಬ್ಬರೂ ಮಾಲೀಕರು ಥಾಯ್ಲೆಂಡ್‌ಗೆ ಪರಾರಿಯಾಗಿದ್ದರು. ದುರಂತದಲ್ಲಿ 25 ಜನ ಮೃತಪಟ್ಟಿದ್ದರು ಹಾಗೂ ಹಲವರಿಗೆ ಗಾಯಗಳಾಗಿದ್ದವು. ಇನ್ವೆಸ್ಟರ್ ಅಜಯ್ ಗುಪ್ತಾ ೭ ದಿನ ಕಸ್ಟಡಿಗೆ: ಇನ್ನು ಕ್ಲಬ್‌ನ ಇನ್ವೆಸ್ಟರ್ ಅಜಯ್ ಗುಪ್ತಾ ಅವರನ್ನು ೭ ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಗೋವಾ ಕೋರ್ಟ್ ಗುರುವಾರ ಆದೇಶಿಸಿದೆ. ಪ್ರಕರಣದ ವಿಚಾರಣೆನಡೆಸುತ್ತಿರುವ ತನಿಖಾ ತಂಡ ಗುಪ್ತಾ ದೆಹಲಿಯಿಂದ ಹೆಚ್ಚಿನ ವಿಚಾರಣೆಗೆಂದು ಗೋವಾದ ಅಂಜುನಾ ಪೊಲೀಸ್ ಠಾಣೆಗೆ ಕರೆತರಲಾಗಿತ್ತು.


