ನ್ಯೂಯಾರ್ಕ್ : ಸುಮಾರು ೩೭೫ ವರ್ಷಗಳಿಂದ ನಾಪತ್ತೆಯಾಗಿದ್ದು ಸರಳ ದೃಷ್ಟಿಗೆ ಕಾಣಸಿಗದ 8 ನೇ ಖಂಡವನ್ನು ಭೂವಿಜ್ಞಾನಿಗಳು ಕಂಡುಹಿಡಿದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಝೀಲ್ಯಾಂಡಿಯಾ ಅಥವಾ `ತೆರಿಯುವ ಮಾವಿ’ ಎಂದು ಹೆಸರಿಸಲಾದ ಈ ಖಂಡದ ಹೊಸದಾಗಿ ಪರಿಷ್ಕರಿಸಿದ ನಕ್ಷೆಯನ್ನು ಭೂವಿಜ್ಞಾನಿಗಳು ಮತ್ತು ಭೂಕಂಪಶಾಸ್ತçಜ್ಞರ ಸಣ್ಣತಂಡವು ರಚಿಸಿದೆ. ಸಾಗರ ತಳದಿಂದ ಮೇಲೆತ್ತಿದ ಕಲ್ಲಿನ ಮಾದರಿಗಳಿಂದ ಪಡೆದ ಡೇಟಾವನ್ನು ಬಳಸಿಕೊಂಡು ಸಂಶೋಧಕರು ಇದನ್ನು ಕಂಡುಹಿಡಿದಿದ್ದಾರೆ.
ಸAಶೋಧನೆಯ ವಿವರ `ಟೆಕ್ಟಾನಿಕ್ಸ್’ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಝೀಲ್ಯಾಂಡಿಯಾವು ಸುಮಾರು 4.9 ದಶಲಕ್ಷ ಚದರ ಮೈಲು ವಿಸ್ತೀರ್ಣದ ಖಂಡವಾಗಿದ್ದು ಮಡಗಾಸ್ಕರ್ ದೇಶಕ್ಕಿಂತ ಸುಮಾರು ೬ ಪಟ್ಟು ದೊಡ್ಡದಾಗಿದೆ. ವಾಸ್ತವವಾಗಿ ೮ ಖಂಡಗಳಿವೆ ಎAದು ವಿಜ್ಞಾನಿಗಳು ಹೇಳುತ್ತಿದ್ದರು.
ಇದೀಗ ಶೋಧಿಸಲಾಗಿರುವ ವಿಶ್ವದ ಅತ್ಯಂತ ಚಿಕ್ಕ, ತೆಳುವಾದ ಮತ್ತು ಕಿರಿಯ ಖಂಡವೆAಬ ದಾಖಲೆಗೆ ಪಾತ್ರವಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ. ನ್ಯೂಝಿಲ್ಯಾಂಡ್ ರೀತಿಯಲ್ಲೇ ಕೆಲವು ದ್ವೀಪಗಳ ಸಮೂಹವಾಗಿರುವ ಹೊಸ ಖಂಡದ 94%ದಷ್ಟು ಭಾಗ ನೀರಿನೊಳಗಿದೆ. ಬಹಳ ಸ್ಪಷ್ಟವಾದ ಸಂಗತಿಯನ್ನು ಬಹಿರಂಗಪಡಿಸಲು ಸ್ಪಲ್ಪ ಸಮಯ ತೆಗೆದುಕೊಳ್ಳಬಹುದು ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ ಎಂದು ಹೊಸ ಖಂಡ ಪತ್ತೆಹಚ್ಚಿದ ಭೂವಿಜ್ಞಾನಿಗಳ ತಂಡದಲ್ಲಿದ್ದ `ನ್ಯೂಝಿಲ್ಯಾಂಡ್ ಕ್ರೌನ್ ರಿಸರ್ಚ್ ಇನ್ಸ್ಟಿಟ್ಯೂಟ್ ‘ನ ಭೂವಿಜ್ಞಾನಿ ಆಯಂಡಿ ಟುಲೋಚ್º ಹೇಳಿದ್ದಾರೆ ಝೀಲ್ಯಾಂಡಿಯ ಮೂಲತಃ ಪ್ರಾಚೀನ ಮಹಾಖಂಡ ಗೊAಡ್ವಾನಾದ ಭಾಗವಾಗಿತ್ತು. ಇದು ಸುಮಾರು550 ದಶಲಕ್ಷ ವರ್ಷಗಳ ಹಿಂದೆ ರೂಪುಗೊಂಡಿತು ಮತ್ತು ಮೂಲಭೂತವಾಗಿ ದಕ್ಷಿಣ ಗೋಳಾರ್ಧದ ಭೂಮಿಗಳನ್ನು ಒಟ್ಟುಗೂಡಿಸಿದೆ
ಎಂದು ಭೂವಿಜ್ಞಾನಿಗಳ ವರದಿ ಹೇಳಿದೆ.