Tuesday, July 21, 2026
Homeರಾಜ್ಯನೆಲಮಂಗಲ : ಮೀಟರ್ ಬಡ್ಡಿ ಕೊಟ್ಟಿಲ್ಲವೆಂದು ಸಾಲಗಾರನ ಪುತ್ರಿ ಮೇಲೆ ಅತ್ಯಾಚಾರ,ಆರೋಪಿಯ ಬಂಧನ..!

ನೆಲಮಂಗಲ : ಮೀಟರ್ ಬಡ್ಡಿ ಕೊಟ್ಟಿಲ್ಲವೆಂದು ಸಾಲಗಾರನ ಪುತ್ರಿ ಮೇಲೆ ಅತ್ಯಾಚಾರ,ಆರೋಪಿಯ ಬಂಧನ..!

ಬೆಂಗಳೂರು : ಇತ್ತಿಚ್ಚಿನ ದಿನಗಳಲ್ಲಿ ಮೀಟರ್ ಬಡ್ಡಿ ನೀಡುವವರ ಕಿರುಕುಳದಿಂದ ಅದೆಷ್ಟೋ ಕುಟುಂಬಗಳು ಬೀದಿ ಪಾಲಾಗಿ ಸಾವನ್ನಪ್ಪಿದೆ. ರಾಜ್ಯದಲ್ಲಿ ಮೀಟರ್ ಬಡ್ಡಿ ದಂದೆಕೋರರ ಅವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಪೊಲೀಸ್ ಇಲಾಖೆ ಕೂಡ ಮೌನ ಮುರಿದಿದೆ.

ಕಷ್ಟದ ಸಮಯದಲ್ಲಿ ಆರೋಪಿ ಬಳಿ 70 ಸಾವಿರ ರೂ. ಹಣ ಪಡೆದಿದ್ದರು. ಈ ಹಿಂದೆ 30 ಸಾವಿರ ರೂ. ಸಾಲ ಕೂಡ ತೀರಿಸಿದ್ದರು. ಇನ್ನುಳಿದ 40 ಸಾವಿರ ರೂ. ಜೊತೆಗೆ ಬಡ್ಡಿ ಹಣ ನೀಡದಿದ್ದಕ್ಕೆ ರವಿಕುಮಾರ್ ಪೀಡಿಸುತ್ತಿದ್ದರು.ಆದರೆ 40 ಸಾವಿರ ಅಸಲು, ಬಡ್ಡಿ ಕೊಟ್ಟಿಲ್ಲವೆಂದು ಸಾಲಗಾರನ ಪುತ್ರಿ ಮೇಲೆ ಬಡ್ಡಿ ಮಗ ಪಾಪಿ ಅತ್ಯಾಚಾರ ಮಾಡಿದ್ದಾನೆ.ಹಾಡಹಗಲೇ 17 ವರ್ಷದ ಬಾಲಕಿ ಮೇಲೆ ದುರುಳನಿಂದ ಅತ್ಯಾಚಾರ ಮಾಡಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದು ಬಲವಂತವಾಗಿ ಬಾಲಕಿಗೆ ರವಿಕುಮಾರ್ ಕಿಸ್​ ಕೊಟ್ಟು ಕಿಸ್​ ಕೊಟ್ಟಿರುವುದನ್ನು ಫೋಟೋ ತೆಗೆದಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಆರೋಪಿ ರವಿಕುಮಾರ್(39) ನನ್ನು ಬಾಲಕಿ ನೀಡಿದ ದೂರಿನ ಮೇರೆಗೆ ಬಂಧಿಸಲಾದ್ದು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular