ನವದೆಹಲಿ : ಪ್ರಾನ್ಸ್ನಿಂದ 26 ರಫೇಲ್ ಯುದ್ಧ ವಿಮಾನ ಖರೀದಿ ಸಂಬAಧ ಬರೋಬ್ಬರಿ 63,000 ಕೋಟಿ ರೂ.ಗಳ ಒಪ್ಪಂದಕ್ಕೆ ಭಾರತ ಮತ್ತು ಫ್ರಾನ್ಸ್ ದೆಹಲಿಯಲ್ಲಿ ಸಹಿ ಹಾಕಲು ಮುಂದಾಗಿವೆ.
ಭಾರತೀಯ ರಕ್ಷಣಾ ಸಚಿವಾಲಯದ ಅಧಿಕಾರಿಗಳು ಮತ್ತು ಭಾರತದಲ್ಲಿನ ಫ್ರೆಂಚ್ ರಾಯಭಾರಿ ಸಹಿ ಹಾಕುವ ಕಾರ್ಯಕ್ರಮದಲ್ಲಿ ಉಭಯ ದೇಶಗಳ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರು ಭಾರತವನ್ನು ಪ್ರತಿನಿಧಿಸುವ ಸಾಧ್ಯತೆಯಿದೆ, ಫ್ರೆಂಚ್ ಮತ್ತು ಭಾರತೀಯ ರಕ್ಷಣಾ ಸಚಿವರು ವರ್ಚುವಲ್ಮಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಈ ಮೊದಲು, ಫ್ರೆಂಚ್ ರಕ್ಷಣಾ ಸಚಿವರು ವೈಯಕ್ತಿಕವಾಗಿ ಸಹಿ ಹಾಕಬೇಕಿತ್ತು ಆದರೆ ವೈಯಕ್ತಿಕ ಕಾರಣಗಳಿಂದಾಗಿ ಅವರ ಭೇಟಿಯನ್ನು ರದ್ದುಗೊಳಿಸಬೇಕಾಗಿದೆ ಎಂದು ಮೂಲಗಳು ಮಾಹಿತಿ ಹಂಚಿಕೊAಡಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭದ್ರತೆ ಕುರಿತ ಸಚಿವ ಸಂಪುಟ ಸಭೆ ಈ ತಿಂಗಳ ಆರಂಭದಲ್ಲಿ ಒಪ್ಪಂದಕ್ಕೆ ಹಸಿರು ನಿಶಾನೆ ತೋರಿತ್ತು. ಭಾರತೀಯ ವಿಮಾನವಾಹಕ ನೌಕೆಗಳಲ್ಲಿ, ವಿಶೇಷವಾಗಿ ಈಗ ಸೇವೆಯಲ್ಲಿರುವ ಐಎನ್ಎಸ್ ವಿಕ್ರಾಂತ್ ನಿಯೋಜಿಸಲು ೨೬ ರಫೇಲ್ ಮೆರೈನ್ ಫೈಟರ್ ಜೆಟ್ಗಳು ತುರ್ತಾಗಿ ಅಗತ್ಯವಿದೆ.
ನಿರ್ವಹಣೆ ಸಂಬAಧಿತ ಸಮಸ್ಯೆಗಳಿಂದಾಗಿ ಅಸ್ತಿತ್ವದಲ್ಲಿರುವ ಮಿಗ್ -29 ಕೆ ಯುದ್ಧ ವಿಮಾನಗಳ ನೌಕಾಪಡೆಯು ಕಳಪೆಯಾಗಿದೆ ಎಂದು ವರದಿಯಾಗಿದ್ದು ಇದರ ಬೆನ್ನಲ್ಲೇ 26 ರಫೇಲ್ ಯುದ್ದ ವಿಮಾನ ಖರೀದಿಸಲು ಭಾರತ ಮುಂದಾಗಿದೆ. ರಫೇಲ್ ಯುದ್ದ ವಿಮಾನಗಳನ್ನು ಭಾರತದ ಅಗತ್ಯತೆಗಳನ್ನು ಪೂರೈಸಲು ಕಸ್ಟಮೈಸ್ ಮಾಡಲಾಗುವುದು ಮತ್ತು ಐಎನ್ಎಸ್ ವಿಕ್ರಾಂತ್ಗೆ ಸಂಯೋಜಿಸಲಾಗುತ್ತಿದೆ ಎAದು ಭಾರತೀಯ ರಕ್ಷಣಾ ಇಲಾಖೆಯ ಅಧಿಕಾರಿಗಳ ಮೂಲಗಳು ಮಾಹಿತಿ ಹಂಚಿಕೊAಡಿವೆ.


