Sunday, July 19, 2026
Homeವಿದೇಶನವದೆಹಲಿ :`ಹಿಂದೂ ದೇವರುಗಳು ಸುಳ್ಳು, ಅಮೆರಿಕ ಕ್ರೈಸ್ತರ ದೇಶ' : ರಿಪಬ್ಲಿಕನ್ ಪಾರ್ಟಿ ನಾಯಕ ಅಲೆಕ್ಸಾಂಡರ್...

ನವದೆಹಲಿ :`ಹಿಂದೂ ದೇವರುಗಳು ಸುಳ್ಳು, ಅಮೆರಿಕ ಕ್ರೈಸ್ತರ ದೇಶ’ : ರಿಪಬ್ಲಿಕನ್ ಪಾರ್ಟಿ ನಾಯಕ ಅಲೆಕ್ಸಾಂಡರ್ ಡಂಕನ್ ..!

ನವದೆಹಲಿ : ಅಮೆರಿಕದಲ್ಲಿ ಸಕ್ಕರೆ ನಾಡೆಂದು ಖ್ಯಾತಿ ಪಡೆದಿರುವ ಟೆಕ್ಸಾಸ್‌ನಲ್ಲಿ 90 ಅಡಿ ಎತ್ತರದ ಹನುಮಂತನ ಪ್ರತಿಮೆಯನ್ನು ವರ್ಷದ ಹಿಂದೆ ಸ್ಥಾಪನೆ ಮಾಡಿರುವುದಕ್ಕೆ ಸ್ಥಳೀಯ ರಿಪಬ್ಲಿಕನ್ ಪಾರ್ಟಿ ನಾಯಕ ಅಲೆಕ್ಸಾಂಡರ್ ಡಂಕನ್ ಈಗ ಆಕ್ಷೇಪ ಮಾಡಿದ್ದಾರೆ. ಇದನ್ನು ಅಮೆರಿಕ ಒಕ್ಕೂಟದ ವಿಗ್ರಹವೆಂದೂ ಕರೆಯಲಾಗುತ್ತಿದೆ. ಡಂಕನ್ ಅವರು ಟೆಕ್ಸಾಸ್‌ನಿಂದ ಸೆನೆಟ್ ಚುನಾವಣೆಗೆ ಸ್ಪರ್ಧಿಸಿರುವುದರಿಂದ ಅವರ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಅಮೆರಿಕ ಕ್ರಿಶ್ಚಿಯನ್ನರ ದೇಶ. ಇಲ್ಲಿ ಸುಳ್ಳು ಹಿಂದೂ ದೇವರ ಸುಳ್ಳು ವಿಗ್ರಹ ಸ್ಥಾಪಿಸಿರುವುದಕ್ಕೆ ಏಕೆ ಅನುಮತಿ ನೀಡಿದ್ದೇವೆ ಎಂದವರು ಪ್ರಶ್ನಿಸಿರುವುದು ಅನೇಕರಲ್ಲಿ ಅಸಮಾಧಾನ ಉಂಟು ಮಾಡಿದೆ. ಪಟ್ಟಣದ ಅಷ್ಟಲಕ್ಷ್ಮಿ ದೇವಸ್ಥಾನದಲ್ಲಿರುವ ಈ ವಿಗ್ರಹದ ವಿಡಿಯೋವನ್ನು ಅವರು ತಮ್ಮ ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಬೈಬಲ್‌ನಲ್ಲಿನನ್ನ ಹೊರತು ಬೇರೆ ಯಾರೂ ದೇವರು ಇರಬಾರದು. ನೀವು ಯಾವುದೇ ರೀತಿಯ ವಿಗ್ರಹವನ್ನು ಭೂಮಿಯಲ್ಲಾಗಲಿ, ಸ್ವರ್ಗದಲ್ಲಾಗಲಿ ಅಥವಾ ಸಮುದ್ರದಲ್ಲಿ ಸ್ಥಾಪಿಸಬಾರದು ”ಎಂದಿರುವುದನ್ನೂ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ. ಡಂಕನ್ನರ ಈ ಪೋಸ್ಟ್, ಹಿಂದೂ ವಿರೋಧಿ ಹಾಗೂ ಪ್ರಚೋದನಕಾರಿ ಎಂದು ಸಾಮಾಜಿಕ ತಾಣದಲ್ಲಿ ಭಾರೀ ಆಕ್ಷೇಪ ವ್ಯಕ್ತವಾಗಿದೆ.

ಅಮೆರಿಕದ ಸಂವಿಧಾನವು ಯಾವುದೇ ಧರ್ಮ ಆಚರಿಸುವ ಸ್ವಾತಂತ್ರ್ಯ ನೀಡಿರುವುದನ್ನು ಹಲವರು ಈ ನಾಯಕನಿಗೆ ನೆನಪಿಸಿದ್ದಾರೆ. ಹಿಂದೂ ಅಮೆರಿಕನ್ ಫೌಂಡೇಶನ್ ಸಂಸ್ಥೆಯು ಡಂಕನ್ ಪ್ರತಿನಿಧಿಸುವ ರಿಪ್ಲಬಿಕನ್ ಪಾರ್ಟಿಗೆ ಈ ವಿಷಯ ಕುರಿತು ವರದಿ ಮಾಡಿದ್ದಲ್ಲದೆ, ವಿವಾದ ಬಗೆಹರಿಸುವಂತೆ ಒತ್ತಾಯಿಸಿದೆ.

ಎಕ್ಸ್ ಬಳಕೆದಾರರೊಬ್ಬರು ` ಯೇಸು ಭೂಮಿಗೆ ಬರುವ 2೦೦೦ ವರ್ಷಗಳ ಮೊದಲೇ ಅಸಾಧಾರಣ ಗ್ರಂಥವಾದ ವೇದಗಳನ್ನು ಬಗೆರಹಿಸಲಾಗಿದೆ. ನಿಮ್ಮ
ಧರ್ಮಕ್ಕಿಂತ ಹಿಂದಿನ ಹಾಗೂ ಪ್ರಭಾವ ಬೀರುವ ಧರ್ಮವನ್ನು ಗೌರವಿಸುವುದು ನಿಮ್ಮ ಬುದ್ಧಿವಂತಿಕೆಯಾಗಿರುತ್ತದೆ’ ಎಂದು ಡಂಕನ್‌ಗೆ ನೇರವಾಗಿ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular