Monday, October 20, 2025
Flats for sale
Homeವಿದೇಶನವದೆಹಲಿ : "ಮೋದಿ ಯಾವಾಗಲು ನನ್ನ ಮಿತ್ರನೇ'' ಮತ್ತೆ ಯೂಟರ್ನ್ ಹೊಡೆದ ಅಮೆರಿಕ ಅಧ್ಯಕ್ಷ ಟ್ರಂಪ್,ಒಂದಾಗುವ...

ನವದೆಹಲಿ : “ಮೋದಿ ಯಾವಾಗಲು ನನ್ನ ಮಿತ್ರನೇ” ಮತ್ತೆ ಯೂಟರ್ನ್ ಹೊಡೆದ ಅಮೆರಿಕ ಅಧ್ಯಕ್ಷ ಟ್ರಂಪ್,ಒಂದಾಗುವ ಸುಳಿವು…!

ನವದೆಹಲಿ : ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಾಗಿ ನಿಂದಲೂ ಏನಾದರೊಂದು ನೆಪ ತೆಗೆದು ಭಾರತದ ಮೇಲೆ ಕೆಂಡಕಾರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್,ಕಳೆದೆರಡು ತಿಂಗಳಿಂದ ಸುಂಕ ಸಮರ ಸಾರಿ ಮೋ ದಿ ವಿರುದ್ಧ ಶೀತಲ ಸಮರ ಶುರು ಮಾಡಿದ್ದರು. ಆದರೆ ಇದ್ಯಾವುದಕ್ಕೂ ಮೋದಿ ಕ್ಯಾರೆ ಎಂದಿರಲಿಲ್ಲ . ಬದಲಾಗಿ ಟ್ರಂಪ್ ವಿರೋಧಿಸುವ ರಷ್ಯಾ-ಚೀನಾ ಅಧ್ಯಕ್ಷರ ಜತೆ ತಮ್ಮ ಸಂಬಂಧ ವನ್ನು ನಿಕಟಗೊಳಿಸಿಕೊಂಡಿದ್ದರು . ಇದರ ಪರಿಣಾಮಗಳನ್ನು ಅರಿತ ಅಮೆರಿಕ ಅಧ್ಯಕ್ಷ ಈಗ ಮತ್ತೆ ಯೂಟರ್ನ್ ಹೊಡೆದಿದ್ದಾರೆ.

`ಮೋದಿ ಒಬ್ಬ ಅದ್ಭುತ ಪ್ರಧಾನಿ. ನಾನು ಯಾವಾಗಲೂ ಮೋದಿಯ ಸ್ನೇಹಿತನಾಗೇ ಇರುತ್ತೇ ನೆ . ಆದರೆ ಅವರು ರಷ್ಯಾ ಜತೆ ಈಗ ಏನು ಮಾಡುತ್ತಿದ್ದಾರೋ ಅದರ ಬಗ್ಗೆಯಷ್ಟೇ ನನಗೆ ಬೇಸರವಿ ದೆ ‘ ಎಂದು ಹೇಳಿದ್ದಾರೆ. ಆ ಮೂಲಕ ಮಗದೊಮ್ಮೆ ಮೋದಿಗೆ ಹತ್ತಿರವಾಗುವತ್ತ ಮೊದಲ ಹೆಜ್ಜೆಯನ್ನು ಇಟ್ಟಿದ್ದಾರೆ. ಟ್ರಂಪ್ ಹೇಳಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಪ್ರಧಾನಿ ಮೋದಿ, ಅವರು(ಟ್ರಂಪ್) ಯಾವಾಗಲೂ ತಮ್ಮ ¨ಬಾವನೆಗಳನ್ನು ಮನಸ್ಸು ಬಿಚ್ಚಿ ಹೇಳುತ್ತಾರೆ. ಭಾರತ-ಅಮೆರಿಕ ಸಂಬAಧ ಸುಧಾರಣೆಗೆ ಟ್ರಂಪ್ ಅವರ ಸಕಾರತ್ಮಕ ನಡೆ ಶ್ಲಾಘನೀಯ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular