Wednesday, October 7, 2026
Homeರಾಜಕೀಯನವದೆಹಲಿ : ಮೋದಿ ಅಧಿಕಾರಕ್ಕೆ ಬಂದು 25 ವರ್ಷ: ಸಿಎಂನಿಂದ ಪ್ರಧಾನಿವರೆಗೆ ಸುದೀರ್ಘ ರಾಜಕೀಯ ಪಯಣ.

ನವದೆಹಲಿ : ಮೋದಿ ಅಧಿಕಾರಕ್ಕೆ ಬಂದು 25 ವರ್ಷ: ಸಿಎಂನಿಂದ ಪ್ರಧಾನಿವರೆಗೆ ಸುದೀರ್ಘ ರಾಜಕೀಯ ಪಯಣ.

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಪಯಣಕ್ಕೆ ಬುಧವಾರ 25 ವರ್ಷ ಪೂರ್ಣಗೊಂಡಿದೆ. 2001ರ ಅಕ್ಟೋಬರ್ 7ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೋದಿ, ಸುಮಾರು 12 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ, 2014ರಲ್ಲಿ ದೇಶದ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.

ಗುಜರಾತ್‌ನಲ್ಲಿ ಬಿಜೆಪಿಯ ಸಂಘಟನೆ ಬಲಪಡಿಸುವಲ್ಲಿ ತಳಮಟ್ಟದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮೋದಿ ಅವರನ್ನು 2001ರಲ್ಲಿ ಪಕ್ಷವು ಗುಜರಾತ್ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿತ್ತು. ಆಗ ಅವರು ಶಾಸಕರಾಗಿರಲಿಲ್ಲ. ಬಳಿಕ ಉಪಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದ ಅವರು, ಸತತ ನಾಲ್ಕು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದರು.

ಪ್ರಧಾನಿಯಾಗಿ ಮೂರು ಬಾರಿ ಗೆಲುವು.

2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನು ಘೋಷಿಸಿತು. ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮೇ 26, 2014ರಂದು ಮೋದಿ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ನಂತರ 2019 ಮತ್ತು 2024ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವು ಸಾಧಿಸಿದ್ದು, ಮೋದಿ ಸತತ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. 2026ರ ಜೂನ್ 10ರಂದು ನರೇಂದ್ರ ಮೋದಿ ಅವರು ಭಾರತದ ದೀರ್ಘಕಾಲ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಮಂತ್ರಿಗಳ ಪೈಕಿ ಮೊದಲ ಸ್ಥಾನಕ್ಕೇರಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೋದಿ ಅಧಿಕಾರದ ಹಾದಿ

ಅ.7, 2001: ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ

ಡಿ.22, 2002: ಗುಜರಾತ್‌ನಲ್ಲಿ ಎರಡನೇ ಬಾರಿ ಅಧಿಕಾರ.

ಡಿ.25, 2007: ಮೂರನೇ ಬಾರಿ ಗುಜರಾತ್ ಸಿಎಂ.

ಡಿ.26, 2012: ನಾಲ್ಕನೇ ಬಾರಿ ಗುಜರಾತ್ ಸಿಎಂ.

ಮೇ 26, 2014: ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕಾರ.

ಮೇ 30, 2019: ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರ.

ಜೂ.9, 2024: ಸತತ ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ.

RELATED ARTICLES

LEAVE A REPLY

Please enter your comment!
Please enter your name here

Most Popular