Friday, March 13, 2026
Flats for sale
Homeವಿದೇಶನವದೆಹಲಿ ; ಮೋದಿಜಿ ಗೆ ಮತ್ತೊಂದು ಸೋಲು ಎಂದು ಕೇಜ್ರಿವಾಲ್ ಜಾಮೀನಿಗೆ ಟ್ವೀಟ್ ಮಾಡಿ ಸಂಭ್ರಮಿಸಿದ...

ನವದೆಹಲಿ ; ಮೋದಿಜಿ ಗೆ ಮತ್ತೊಂದು ಸೋಲು ಎಂದು ಕೇಜ್ರಿವಾಲ್ ಜಾಮೀನಿಗೆ ಟ್ವೀಟ್ ಮಾಡಿ ಸಂಭ್ರಮಿಸಿದ ಪಾಕಿಸ್ತಾನಿಯರು.

ನವದೆಹಲಿ ; ಇಂಡಿಯಾ ಒಕ್ಕೂಟದ ನಾಯಕರಿಗೆ ಪಾಕಿಸ್ಥಾನದವರೆಂದರೆ ಎಲ್ಲಿಲ್ಲದ ನಂಟು,ಅದೇ ರೀತಿ ಅಭಕಾರಿ ಅಗರಣದಲ್ಲಿ ಲೂಟಿ ಹೊಡೆದು ಜೈಲು ಸೇರಿದ ಆಪ್ ನಾಯಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದಾರೆ. ಅವರು ಜೈಲಿನಿಂದ ಹೊರಬಂದ ಖುಷಿಯನ್ನು ಪಾಕಿಸ್ತಾನದಲ್ಲಿ ಸಂಭ್ರಮಿಸಿದ್ದರೆಂಬುಂದು ಆಶ್ಚರ್ಯಕಾರಿ ಸಂಗತಿ .

ಕೇಜ್ರಿವಾಲ್ ಜಾಮೀನಿಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.ಆಪ್, ವಿಪಕ್ಷ ನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಪಾಕಿಸ್ತಾನದಲ್ಲೂ ಕೇಜ್ರಿವಾಲ್ ಜಾಮೀನಿಗ ಸಂಭ್ರಮ ಶುರುವಾಗಿದೆ. ಪಾಕಿಸ್ತಾನ ಮಾಜಿ ಸಚಿವ ಫಾವದ್ ಚೌಧರಿ, ಕೇಜ್ರಿವಾಲ್ ಜಾಮೀನಿಗೆ ಸಂತಸ ವ್ಯಕ್ತಪಡಿಸಿದ್ದು, ಮತ್ತೊಂದು ಹೋರಾಟದಲ್ಲಿ ಮೋದಿಗೆ ಸೋಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಅರವಿಂದ್ ಕೇಜ್ರಿವಾಲ್ ಬಿಡುಗಡೆ ಆಧುನಿಕ ಭಾರತಕ್ಕೆ ಸಿಕ್ಕಿದ ಗುಡ್ ನ್ಯೂಸ್ ಎಂದಿದ್ದಾರೆ. ಫಾವದ್ ಚೌಧರಿ ಟ್ವೀಟ್‌ಗೆ ಪಾಕಿಸ್ತಾನದ ಹಲವು ನಾಗರೀಕರು ಪ್ರತಿಕ್ರಿಯೆ ನೀಡಿದ್ದಾರೆ. ನಿಜಕ್ಕೂ ಇದು ಗುಡ್ ನ್ಯೂಸ್, ಭಾರತದಲ್ಲಿ ಕೋರ್ಟ್ ಕಾರ್ಯನಿರ್ವಹಿಸುತ್ತಿದೆ ಅನ್ನೋದು ಖಾತ್ರಿಯಾಯಿತು. ಭಾರತದಲ್ಲಿ ನ್ಯಾಯಕ್ಕೆ ಸತತ ಹೋರಾಟದ ಅವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು ಮೋದಿಜಿ ಮತ್ತೊಂದು ಹೋರಾಟದಲ್ಲಿ ಮುಗ್ಗರಿಸಿದ್ದಾರೆ
ಎಂದು ಪಾಕಿಸ್ಥಾನ್ ಸಚಿವ ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿಯನ್ನು ಹೊಗಳಿ ಟ್ವೀಟ್ ಮಾಡಿದ್ದ ಫಾವದ್ ಚೌಧರಿ, ಸಂಪತ್ತು ಹಂಚಿಕೆ ಆಜೆಂಡಾವನ್ನು ಹೊಗಳಿದ್ದರು. ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷ ನಾಯಕರನ್ನು ಹೊಗಳಿ ಅಟ್ಟಕ್ಕೇರಿಸುತ್ತಿರುವ ಪಾಕಿಸ್ತಾನ ಮಾಜಿ ಸಚಿವ ಇದೀಗ ಕೇಜ್ರಿವಾಲ್ ಪರ ಬ್ಯಾಟ್ ಬೀಸಿದ್ದಾರೆ.ಇಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಪಾಕಿಸ್ತಾನ ಖುಷಿಪಡುವುದರಲ್ಲಿ ಸಂದೇಹವೇ ಇಲ್ಲವೆಂಬುದು ಮಾಹಿತಿ.ಮೋದಿ ಹಾಗೂ ಬಿಜೆಪಿ ವಿರುದ್ದ ಸದಾ ದ್ವೇಷ ಕಾರುವು ಫಾವದ್ ಚೌಧರಿ ಇದೀಗ ಭಾರತದ ಲೋಕಸಭಾ ಚುನಾವಣೆ ವೇಳೆ ವಿಪಕ್ಷಗಳ ಪರ ಬ್ಯಾಟ್ ಬೀಸುತ್ತಿದ್ದಾರೆ. ಇಂಡಿಯಾ ಒಕ್ಕೂಟ ಆಡಳಿಕ ಚುಕ್ಕಾಣಿ ಹಿಡಿಯಲು ತಮ್ಮದೇ ರೀತಿಯಲ್ಲಿ ಕೊಡುಗೆ ಸಲ್ಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular