Friday, March 13, 2026
Flats for sale
Homeವಿದೇಶನವದೆಹಲಿ : ಭಾರತದ ಆಹಾರದಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕ ಪತ್ತೆ : ಯುರೋಪಿಯನ್ ಫುಡ್ ಸೇಫ್ಟಿ...

ನವದೆಹಲಿ : ಭಾರತದ ಆಹಾರದಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕ ಪತ್ತೆ : ಯುರೋಪಿಯನ್ ಫುಡ್ ಸೇಫ್ಟಿ ಅಥಾರಿಟಿ.

ನವದೆಹಲಿ : ಯುರೋಪಿಯನ್ ಫುಡ್ ಸೇಫ್ಟಿ ಅಥಾರಿಟಿ ಕಳೆದ ಎರಡು ವರ್ಷದೊಳಗೆ ಭಾರತಕ್ಕೆ ಸಂಬಂದಿಸಿದ 527 ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್ ಸಂಬಂದಿತ ರಾಸಾಯನಿಕಗಳನ್ನು ಪತ್ತೆ ಹೆಚ್ಚಿದೆ.

ಸೆಪ್ಟೆಂಬರ್ 2020 ರಿಂದ ಏಪ್ರಿಲ್ 2024 ರವರೆಗೆ ಎಥಿಲೀನ್ ಆಕ್ಸೈಡ್ ಪತ್ತೆಯಾದ ವಸ್ತುಗಳಲ್ಲಿ, ಒಣ ಹಣ್ಣುಗಳು ಮತ್ತು ಬೀಜಗಳು ಮೊದಲ ಸ್ಥಾನದಲ್ಲಿವೆ. ಒಣ ಹಣ್ಣುಗಳು ಮತ್ತು ಬೀಜಗಳಿಗೆ ಸಂಬಂದಿಸಿದ 313 ವಸ್ತುಗಳಲ್ಲಿ ಈ ರಾಸಾಯನಿಕ ಕಂಡುಬಂದಿದೆ . ಇದರ ಬಳಿಕ ಈ ರಾಸಾಯನಿಕವು ಗಿಡಮೂಲಿಕೆಗಳು ಮತ್ತು ಮಸಾಲೆಗಳಿಗೆ ಸಂಬಂದಿಸಿದ 60 ವಸ್ತುಗಳಲ್ಲಿ, ಆಹಾರಕ್ಕೆ ಸಂಬಂದಿಸಿದ 48 ಆಹಾರ ಪದಾರ್ಥಗಳಲ್ಲಿ ಹಾಗೂ 34 ಇತರ ಆಹಾರ ಪದಾರ್ಥಗಳಲ್ಲಿ ಕಂಡುಬಂದಿದೆ .

ಪ್ರಾಧಿಕಾರದ ಪ್ರಕಾರ, ಗಡಿಯಲ್ಲಿಯೇ 87 ಸರಕುಗಳನ್ನು ತಿರಸ್ಕರಿಸಲಾಗಿದೆ. ಉಳಿದ ವಸ್ತುಗಳು ಮಾರುಕಟ್ಟೆಯನ್ನು ತಲುಪಿದ್ದರೂ, ನಂತರ ಅವುಗಳನ್ನು ಮಾರುಕಟ್ಟೆಯಿಂದ ತೆಗೆದುಹಾಕಲಾಯಿತು.

ಎಥಿಲೀನ್ ಆಕ್ಸೈಡ್ ಕೀಟಗಳನ್ನು ಕೊಲ್ಲಲು ಕೃಷಿಯಲ್ಲಿ ಬಳಸುವ ಕೀಟನಾಶಕವಾಗಿದೆ. ಇದು ಕ್ರಿಮಿನಾಶಕ ಏಜೆಂಟ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಆಹಾರ ಮತ್ತು ಪಾನೀಯಗಳಲ್ಲಿ ಮಿಶ್ರಣ ಮಾಡುವುದನ್ನು ನಿಷೇಧಿಸಲಾಗಿದೆ. ವೈದ್ಯಕೀಯ ಉಪಕರಣಗಳನ್ನು ಕ್ರಿಮಿನಾಶಕಗೊಳಿಸುವುದು ಇದರ ಮುಖ್ಯ ಕಾರ್ಯವಾಗಿದ್ದು, ಇದನ್ನು ಮಸಾಲೆಗಳಲ್ಲಿ ಸೀಮಿತ ಪ್ರಮಾಣದಲ್ಲಿ ಬಳಸಲಾಗುತ್ತಿದೆ.

ಎಥಿಲೀನ್ ಆಕ್ಸೈಡ್ ನ ಅತಿಯಾದ ಹೊಟ್ಟೆ ಮತ್ತು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಎಥಿಲೀನ್ ಆಕ್ಸೈಡ್ ಅನ್ನು ಯಾವುದೇ ರೂಪದಲ್ಲಿ ದೀರ್ಘಕಾಲದವರೆಗೆ ಸೇವಿಸಿದರೆ, ಅದು ಹೊಟ್ಟೆಯ ಸೋಂಕು, ಹೊಟ್ಟೆಯ ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗುತ್ತದೆ.

ಇದು ಡಿಎನ್‌ಎ, ಮೆದುಳು ಮತ್ತು ನರಮಂಡಲವನ್ನು ಸಹ ಹಾನಿಗೊಳಿಸುತ್ತದೆ. ಯುಎಸ್ ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಪ್ರಕಾರ, ಇದರ ಬಳಕೆಯು ಲಿಂಫೋಮಾ ಮತ್ತು ಲ್ಯುಕೇಮಿಯಾದಂತಹ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular