Tuesday, March 10, 2026
Flats for sale
Homeರಾಜಕೀಯನವದೆಹಲಿ : ಪ್ರಧಾನಿ ಮೋದಿ ಇರಾನ್ - ಇಸ್ರೇಲ್ ಗೆ ಒಂದೇ ಒಂದು ಕರೆ ಮಾಡಿದರೆ...

ನವದೆಹಲಿ : ಪ್ರಧಾನಿ ಮೋದಿ ಇರಾನ್ – ಇಸ್ರೇಲ್ ಗೆ ಒಂದೇ ಒಂದು ಕರೆ ಮಾಡಿದರೆ ಸಾಕು ಸಮಸ್ಯೆ ಬಗೆಹರಿಯುತ್ತೆ : ಯುಎಇ ರಾಯಭಾರಿ ಹುಸೇನ್ ಹಸನ್ ಮಿರ್ಜಾ.

ನವದೆಹಲಿ : ಇರಾನ್ ವಿರುದ್ಧ ಇಸ್ರೇಲ್, ಅಮೆರಿಕ ನಡೆಸುತ್ತಿರುವ ಯುದ್ಧದಲ್ಲಿ ನಾವು ಭಾಗಿಯಾಗುವುದಿಲ್ಲ. ನಮ್ಮ ನೆಲವನ್ನು ಉಪಯೋಗಿಸಿಕೊಂಡು ಯಾರ ವಿರುದ್ಧವೂ ದಾಳಿ ಮಾಡಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಭಾರತದಲ್ಲಿರುವ ಯುಎಇ ರಾಯಭಾರಿ ಹುಸೇನ್ ಹಸನ್ ಮಿರ್ಜಾ ಹೇಳಿದರು.

ಈ ಕುರಿತು ರಾಷ್ಟ್ರೀಯ ಸುದ್ದಿ ವಾಹಿನಿ ಜತೆ ಮಾತನಾಡಿರುವ ಅವರು, ಪ್ರಾಮಾಣಿಕವಾಗಿ ಹೇಳುತ್ತೇನೆ. ಈ ಯುದ್ಧದಲ್ಲಿ ನಮ್ಮನ್ನು ಏಕೆ ಎಳತರಲಾಗುತ್ತಿದೆ ಎಂದು ತಿಳಿದಿಲ್ಲ. ಯುದ್ಧದಲ್ಲಿ ಭಾಗಿಯಾಗಲು ನಮಗೆ ಯಾವುದೇ ಕಾರಣವೂ ಇಲ್ಲ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಯುಎಇ ನಾಯಕರು ಉತ್ತಮ ಸಂಬಂಧ ಹೊAದಿದ್ದಾರೆ. ಕೇವಲ ಯುಎಇ ನಾಯಕರು ಅಷ್ಟೇ ಅಲ್ಲ ಸಾರ್ವಜನಿಕರು ಹಾಗೂ ಉದ್ಯಮಿಗಳಿಗೆ ಮೋದಿ ಅವರ ಬಗ್ಗೆ ಗೌರವವಿದೆ. ಪ್ರಧಾನಿ ಮೋದಿ ಅವರು ಇರಾನ್ ಮತ್ತು ಇಸ್ರೇಲ್‌ಗೆ ಒಂದೇ ಒಂದು ಫೋನ್ ಮಾಡಿದರೇ ಸಾಕು ಸಮಸ್ಯೆ ಬಗೆಹರಿಯುತ್ತದೆ. ಎರಡು ದೇಶಗಳು ನಮ್ಮ ನೆಲದಲ್ಲಿ ಯುದ್ಧ ನಡೆಸಿವೆ. ಮೋದಿ ಅವರು ಒಂದು ಫೋನ್ ಮಾಡಿದರೂ ಯುದ್ಧ ನಿಲ್ಲುತ್ತದೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular