ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡುವಂತೆ ಉತ್ತೇಜಿಸಿ ನೀಡಿದ್ದ ಹೇಳಿಕೆಗೆ ಗೇಲಿ ಮಾಡಿದ್ದ ಮಾಲ್ಡೀವ್ಸ್ನ ಮೂವರು ಉಪಸಚಿವರನ್ನು ಅಮಾನತುಗೊಳಿಸಲಾಗಿದೆ.
ಮರಿಯಂ ಶಿಯುನಾ, ಮಾಲ್ಶಾ ಷರೀಫ್ ಮತ್ತು ಮಜೂಮ್ ಮಜೀದ್ ಅಮಾನತುಗೊಂಡವರು. ಮೋದಿ ಅವರಿಗೆ ಅಪಮಾನವಾಗುವಂತೆ ಹೇಳಿಕೆಗಳನ್ನು ನೀಡಿದ ಉಪ ಸಚಿವರನ್ನು ಅವರ ಹುದ್ದೆಗಳಿಂದ ತಕ್ಷಣವೇ ಜಾರಿಯಾಗುವಂತೆ ಅಮಾನತುಗೊಳಿಸಲಗಿದೆ ಎಂದು ಮಾಲ್ಡೀವ್ಸ್ ಸರ್ಕಾರದ ವಕ್ತಾರ ಇಬ್ರಾಹಿಂ ಖಲೀಲ್ ಸ್ಪಷ್ಟಪಡಿಸಿದ್ದಾರೆ.
ಆದರೆ ತಮ್ಮನ್ನು ವಜಾ ಮಾಡಿಲ್ಲ, ಈ ಸುದ್ದಿ ಸುಳ್ಳು ಎಂದು ಅಲ್ಲಿನ ಸಚಿವರು ಸ್ಪಷ್ಟೀಕರಣ ನೀಡಿದ್ದಾರೆ. ನಿಜ ಸಂಗತಿ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಅವರ ಈ ನಿಲುವು ಮತ್ತು ಹೇಳಿಕೆಗಳು ಅಲ್ಲಿನ ಸರ್ಕಾರಕ್ಕೆ ಭಾರಿ ಮುಜುಗರ ಮತ್ತು ಸಮಸ್ಯೆ ತಂದಿರುವುದAತೂ ನಿಜ. ಕೆಲವು ತಿಂಗಳುಗಳ ಹಿಂದೆ ನಡೆದ ಚುನಾವಣೆಯಲ್ಲಿ ಮಾಲ್ಡೀವ್ಸ್ ಅಧ್ಯಕ್ಷರಾಗಿ ಮೊಹಮ್ಮದ್ ಮುಯಿಝು ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದಿನ ಅಧ್ಯಕ್ಷರಿಗಿಂತ ಭಿನ್ನವಾದ ನೀತಿ ಅನುಸರಿಸುತ್ತಿರುವ ಮುಯಿಝು ಭಾರತಕ್ಕಿಂತ ಚೀನಾಗೆ ಪ್ರಾಧಾನ್ಯತೆ ನೀಡುತ್ತಿದ್ದಾರೆ. ಮಾಲ್ಡೀವ್ಸ್ನಲ್ಲಿರುವ ಭಾರತದ ಮಿಲಿಟರಿ ತುಕಡಿಯನ್ನು ವಾಪಸ್ ಕಳುಹಿಸುವುದಾಗಿ ಕೂಡ ಹೇಳಿಕೆ ನೀಡಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತಮಾಲ್ಡೀವ್ಸ್ ಸಂಬAಧ ಹದಗೆಡುತ್ತಿದ್ದು, ಆ ನಡುವೆಯೇ ಈ ಬೆಳವಣಿಗೆ ಆಗಿದೆ.
ನರೇಂದ್ರ ಮೋದಿ ಅವರ ಲಕ್ಷದ್ವೀಪ ಭೇಟಿ ಹಾಗೂ ಆ ದ್ವೀಪದ ಸೌಂದರ್ಯವನ್ನು ಆವರು ಕೊಂಡಾಡಿರುವುದು ಈಗ ಭಾರತ ಮತ್ತು ಮಾಲ್ಡೀವ್ಸ್ ದೇಶಗಳ ನಡುವೆ ವಿರಸಕ್ಕೆ ಕಾರಣವಾಗಿದೆ.ಮಾಲ್ಡೀವ್ಸ್ಗ ಲಕ್ಷದ್ವೀಪವನ್ನು ಹೋಲಿಸಿರುವುದಕ್ಕೆ ಅಲ್ಲಿನ ಮೂವರ ಸಚಿವರು ಗೇಲಿ ಸ್ವರೂಪದ ಟೀಕೆ ಮಾಡಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಮಾಲ್ಡೀವ್ಸ್ ರಾಜಕಾರಣಿಗಳ ಈ ಹೇಳಿಕೆ ಭಾರತದಲ್ಲಿ ಖಾರವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆ ದ್ವೀಪರಾಷ್ಟçಕ್ಕೆ ಪ್ರವಾಸವನ್ನು ರದ್ದುಪಡಿಸತೊಡಗಿದ್ದಾರೆ. ಇದನ್ನು ಮಾಲ್ಡೀವ್ಸ್ ಸರ್ಕಾರದ ಭಾಗವಾಗಿರುವ ಕೆಲವು ಸಚಿವರು ಗೇಲಿಮಾಡಿದ್ದರು. ಅಲ್ಲಿನ ಪಿಪಿಎಂ ಪಕ್ಷದ ಸಂಸತ್ ಸದಸ್ಯರಾದ ರಹೀದ್ ರಯೀಜ್
ಎಂಬುವರು ಒಂದು ಹೆಜ್ಜೆ ಮುಂದೆ ಹೋಗಿ ಇದಕ್ಕೆ ಜನಾಂಗೀಯ ಬಣ್ಣ ನೀಡಿದ್ದರು.
”ಮಾಲ್ಡೀವ್ಸ್ ಹಾಗೂ ಲಕ್ಷದ್ವೀಪಕ್ಕೆ ಎಲ್ಲಿಂದೆಲ್ಲಿಯ ಹೋಲಿಕೆ ? ನಾವು ಪ್ರವಾಸಿಗರಿಗೆ ಇಲ್ಲಿ ನೀಡುತ್ತಿರುವ ಗುಣಮಟ್ಟದ ಸೇವೆಯನ್ನು ಅವರು ನೀಡಬಲ್ಲರೆ ? ಅಲ್ಲಿ ನಮ್ಮಷ್ಟು ಶುಚಿತ್ವ ಎಲ್ಲಿದೆ. ಅಲ್ಲಿನ ಹೋಟೆಲ್ಕೊ ಠಡಿಗಳು ಗಬ್ಬು ನಾರುತ್ತವೆ” ಎಂದೆಲ್ಲ ಮಾತನಾಡಿದ್ದರು.
ಇದಕ್ಕೆ ಭಾರತದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಾಲ್ಡೀವ್ಸ್ಗೆ ಪ್ರವಾಸವನ್ನು ಬಹಿಷ್ಕರಿಸಿ ಎಂಬಲ್ಲಿಗೆ ಈ ವಿವಾದ ತಲುಪಿದೆ. ಅಷ್ಟು ಮಾತ್ರವಲ್ಲದೆ ಸಾಕಷ್ಟು ಸಂಖ್ಯೆಯ ಪ್ರವಾಸಿಗರು ಮಾಲ್ಡೀವ್ಸ್ ಪ್ರವಾಸಕ್ಕೆಂದು ಮಾಡಲಾಗಿದ್ದ ಸುಮಾರು 8೦೦೦ ಜನರು ಹೋಟೆಲ್ ಬುಕ್ಕಿಂಗ್ 2500 ಜನ ವಿಮಾನ ಬುಕ್ಕಿಂಗ್ಗಳನ್ನು ರದ್ದು ಮಾಡತೊಡಗಿದ್ದಾರೆ.ಈ ಬಗ್ಗೆ ಕ್ರಿಕೆಟ್ ಆಟಗಾರರು,ಚಲನಚಿತ್ರ ನಟರು ಮಾಲ್ಡೀವ್ಸ್ ವಿರುದ್ಧ ಬಾಯ್ಕಾಟ್ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.
ಪ್ರಧಾನಿ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ಅಭಿಪ್ರಾಯಗಳು ಬಂದಿವೆ. ಅದು ಭಾರತ ಸರ್ಕಾರದ ಅಭಿಪ್ರಾಯ ಅಲ್ಲ. ಆದರೆ ಮಾಲ್ಡೀವ್ಸ್ ಪರವಾಗಿ ಅಲ್ಲಿನ ಸಚಿವರೇ ಹೇಳಿಕೆ ನೀಡಿ ಸರ್ಕಾರವನ್ನು ಅನಗತ್ಯವಾಗಿ ಈ ವಿವಾದದಲ್ಲಿ ಎಳೆದು ತಂದಿದ್ದಾರೆ. ಇದು ಸರಿಯಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.


