ನವದೆಹಲಿ : ಪಾಕಿಸ್ತಾನ ಅಂದರೆ ಭಯೋತ್ಪಾದನೆಯ ಮೂಲ ಎಂಬುದು ಎಲ್ಲಾರಿಗೂ ತಿಳಿದ ವಿಷಯ ,ಪಾಕಿಸ್ತಾನದಲ್ಲಿ ಅಲ್ಲಿನ ಸರಕಾರ ಅಭಿವೃದ್ಧಿ ಬಿಟ್ಟು ಐಸಿಸ್ ನಂತಹ ಭಯೋತ್ಪದಕರಿಗೆ ಹೆಚ್ಚು ಹೊತ್ತು ಕೊಡುವುದರಿಂದ ಇಂತಹ ಪರಿಸ್ಥಿತಿ ಬಂದದ್ದು ಅಂತೂ ನಿಜ. ARY ನ್ಯೂಸ್‌ನ ವರದಿಯ ಪ್ರಕಾರ, 2023-24 ರ ಆರ್ಥಿಕ ವರ್ಷದಲ್ಲಿ ಕಳೆದ ವರ್ಷದ ನವೆಂಬರ್ ಅಂತ್ಯದ ವೇಳೆಗೆ ಪಾಕಿಸ್ತಾನದ ಮೇಲಿನ ಒಟ್ಟು ಸಾಲದ ಹೊರೆ 63,399 ಟ್ರಿಲಿಯನ್ ಪಾಕಿಸ್ತಾನಿ ರೂಪಾಯಿಗಳಿಗೆ (PKR) ಹೆಚ್ಚಾಗಿದೆ.
ಈರುಳ್ಳಿಯನ್ನು ಪ್ರತಿ ಕಿಲೋಗ್ರಾಂಗೆ PKR 230 ರಿಂದ 250 ಕ್ಕೆ ಮಾರಾಟ ಮಾಡಲಾಗುತ್ತಿದೆ, ಇದು ಪ್ರತಿ ಕಿಲೋಗ್ರಾಂಗೆ PKR 175 ರ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಾಗಿದೆ. ಒಂದು ಕೆಜಿ ಚಿಕನ್ ಬೆಲೆ 615 ರೂ. ತಲುಪಿದೆ 12 ಮೊಟ್ಟೆಯ ಬೆಲೆ 400 ರೂ.ಗೆ ತಲುಪಿದ್ದು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗೆ ಒಂದು ತಿಂಗಳಿಗಿಂತ ಕಡಿಮೆ ಸಮಯವಿದ್ದು, ದೇಶದ ಸ್ಥಿತಿ ಇನ್ನಷ್ಟು ಗಂಭೀರವಾಗುತ್ತಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದಲ್ಲಿ ಆರ್ಥಿಕ ಸಮಸ್ಯೆ ನಿರಂತರವಾಗಿ ಉಲ್ಬಣಗೊಳ್ಳುತ್ತಲೇ ಇದೆ. ಸಾಮಾನ್ಯ ಜನರಿಗೆ ಎರಡು ಹೊತ್ತಿನ ಊಟ ಸಿಗುವುದೇ ದುಸ್ತರವಾಗಿದೆ. ಪಾಕಿಸ್ತಾನದ ವಿವಿಧ ನಗರಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿದೆ. ಪಾಕಿಸ್ತಾನದ ಲಾಹೋರ್ ನಗರದಲ್ಲಿ ಒಂದು ಮೊಟ್ಟೆಯ ಬೆಲೆ 33 ರೂ.ಗೆ ತಲುಪಿದೆ ಜನವರಿ 15 ರಂದು, ಲಾಹೋರ್ ಪಂಜಾಬ್‌ನಲ್ಲಿ ಒಂದು ಡಜನ್ ಮೊಟ್ಟೆಗಳ ಬೆಲೆ 400 ಪಾಕಿಸ್ತಾನಿ ರೂಪಾಯಿಗಳನ್ನು ದಾಟಿದೆ. ಸರ್ಕಾರದ ದರ ಪಟ್ಟಿಯನ್ನು ಅನುಷ್ಠಾನಗೊಳಿಸುವಲ್ಲಿ ಸ್ಥಳೀಯ ಅಧಿಕಾರಿಗಳು ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದೆ.
ಪಾಕಿಸ್ತಾನದ ಒಟ್ಟು ಸಾಲವು 12.430 ಟ್ರಿಲಿಯನ್ PKR ಗಿಂತ ಹೆಚ್ಚಾಗಿದ್ದು . ಒಟ್ಟು ಸಾಲದ ಹೊರೆಯು PKR 63.390 ಟ್ರಿಲಿಯನ್‌ಗೆ ಏರಿದೆ , ಇದರಲ್ಲಿ PKR 40.956 ಟ್ರಿಲಿಯನ್ ದೇಶೀಯ ಸಾಲ ಮತ್ತು PKR 22.434 ಟ್ರಿಲಿಯನ್ ಅಂತಾರಾಷ್ಟ್ರೀಯ ಸಾಲವನ್ನು ಒಳಗೊಂಡಿದ್ದು ಇತ್ತೀಚೆಗಷ್ಟೇ ವಿಶ್ವಬ್ಯಾಂಕ್ ವರದಿಯೊಂದು ಪಾಕಿಸ್ತಾನದ ಆರ್ಥಿಕ ಅಭಿವೃದ್ಧಿಯು ಗಣ್ಯ ವರ್ಗಕ್ಕೆ ಸೀಮಿತವಾಗಿದೆ.


