Monday, October 20, 2025
Flats for sale
Homeಕ್ರೀಡೆನವದೆಹಲಿ : ಗಾಯದಿಂದಾಗಿ ಏಷ್ಯಾ ಕಪ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿಯುವ...

ನವದೆಹಲಿ : ಗಾಯದಿಂದಾಗಿ ಏಷ್ಯಾ ಕಪ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿಯುವ ಸಾಧ್ಯತೆ..!

ನವದೆಹಲಿ : ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಗಾಯದಿAದಾಗಿ ಏಷ್ಯಾ ಕಪ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಇಂಗ್ಲೆAಡ್ ಪ್ರವಾಸದ ಸಮಯದಲ್ಲಿ ಅವರ ಕಾಲಿನ ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ. 2025 ರ ಏಷ್ಯಾ ಕಪ್ ಸೆಪ್ಟೆಂಬರ್ 9 ರಿಂದ ಆರಂಭವಾಗಲಿದೆ. ಇಂಗ್ಲೆAಡ್ ಪ್ರವಾಸದಲ್ಲಿ ಗಾಯಗೊಂಡಿದ್ದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಅವರು ಈ ಪಂದ್ಯಾವಳಿಯಿAದ
ಹೊರಗುಳಿದಿದ್ದಾರೆ.

ಇAಗ್ಲೆAಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಕ್ರಿಸ್ ವೋಕ್ಸ್ ಅವರ ಚೆಂಡಿನಿAದ ಪಂತ್ ಕಾಲಿಗೆ ಬಡಿದ ಪರಿಣಾಮ ಅವರಿಗೆ ಮೂಳೆ ಮುರಿತ ಉಂಟಾಗಿದೆ. ಈ ಮುರಿತದಿಂದಾಗಿ, ಸರಣಿಯ ಕೊನೆಯ ಪಂದ್ಯವನ್ನು ಸಹ ಆಡಲು ಸಾಧ್ಯವಾಗಲಿಲ್ಲ. ಮುರಿತದಿಂದಾಗಿ ಅವರು ೬ ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗುತ್ತದೆ ಎಂದು ಹೇಳಲಾಗುತ್ತಿತ್ತು. ವರದಿಯ ಪ್ರಕಾರ, ಏಷ್ಯಾ ಕಪ್ ಹೊರತುಪಡಿಸಿ, ಅಕ್ಟೋಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ ಭಾಗವಹಿಸಲು ಸಾಧ್ಯವಾಗುವುದಿಲ್ಲ.

2025 ರ ಏಷ್ಯಾ ಕಪ್ ಯುಎಇಯಲ್ಲಿ ಸೆಪ್ಟೆಂಬರ್ 9 ರಿಂದ 28 ರವರೆಗೆ ನಡೆಯಲಿದೆ. ಇದರ ನಂತರ, ಭಾರತ ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ತವರಿನಲ್ಲಿ ಆಡಬೇಕಾಗುತ್ತದೆ. ಈ ಸರಣಿಯ ಮೊದಲ ಪಂದ್ಯ ಅಕ್ಟೋಬರ್ ೨ ರಂದು ನಡೆಯಲಿದೆ. ಪಂತ್ ಈ ಸರಣಿಯಿಂದ ಹೊರಗುಳಿದಿದ್ದರೆ, ಅವರು ಆಸ್ಟೆçÃಲಿಯಾ ಪ್ರವಾಸಕ್ಕೆ ಮರಳಬಹುದು, ಅಲ್ಲಿ ಭಾರತ ೩ ಪಂದ್ಯಗಳ ಏಕದಿನ ಮತ್ತು 5 ಪಂದ್ಯಗಳ ಟಿ2೦ ಸರಣಿಯನ್ನು ಆಡಬೇಕಾಗುತ್ತದೆ.

ಈ ಸರಣಿಯಲ್ಲೂ ಪಂತ್‌ಗೆ ಅವಕಾಶ ಸಿಗದಿದ್ದರೆ, ನವೆಂಬರ್‌ನಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ತವರಿನಲ್ಲಿ ಆಡಬೇಕಾಗುತ್ತದೆ, ಪಂತ್ ಅದರಲ್ಲಿಯೂ ಮರಳಬಹುದು. ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಕ್ರಿಸ್ ವೋಕ್ಸ್ ಚೆಂಡಿನ ಮೇಲೆ ರಿವರ್ಸ್ ಸ್ವೀಪ್ ಶಾಟ್ ಹೊಡೆಯಲು ಪ್ರಯತ್ನಿಸುವಾಗ ರಿಷಭ್ ಪಂತ್ ಗಾಯಗೊAಡರು. ವೋಕ್ಸ್ ಚೆಂಡನ್ನು ನೇರವಾಗಿ ಪಂತ್ ಕಾಲಿಗೆ ಬಡಿದ ಕಾರಣ ಪಂತ್ ತುಂಬಾ ನೋವಿನಿಂದ ಬಳಲುತ್ತಿದ್ದರು, ಅವರು ತಮ್ಮ ಪಾದಗಳನ್ನು ಮೈದಾನದಲ್ಲಿ ಇಡಲು ಸಹ ಸಾಧ್ಯವಾಗಲಿಲ್ಲ, ಅವರನ್ನು ಮೈದಾನದಲ್ಲಿದ್ದ ಮಿನಿ ಆಂಬ್ಯುಲೆನ್ಸ್ ಮೂಲಕ ಹೊರಗೆ ಕರೆದೊಯ್ಯಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular