Wednesday, March 18, 2026
Flats for sale
Homeದೇಶನವದೆಹಲಿ : ಗಗನಕ್ಕೆ ಏರಿದ ಈರುಳ್ಳಿ ದರ 100 ರೂ. ಮುಟ್ಟುವ ಸಂಭವ .

ನವದೆಹಲಿ : ಗಗನಕ್ಕೆ ಏರಿದ ಈರುಳ್ಳಿ ದರ 100 ರೂ. ಮುಟ್ಟುವ ಸಂಭವ .

ನವದೆಹಲಿ : ದೇಶದಲ್ಲಿ ಅತಿವೃಷ್ಟಿಯಿಂದಾಗಿ ಬೆಳೆನಷ್ಟ ಉಂಟಾದ ಪರಿಣಾಮ ಕಳೆದೆರಡು ತಿಂಗಳಿನಿಂದ ದೇಶಾದ್ಯಂತ ಈರುಳ್ಳಿ ಬೆಲೆ ಏರುತ್ತಲೇ ಇದೆ. ಸದ್ಯ ಸಗಟು ಮಾರುಕಟ್ಟೆಯಲ್ಲಿ ಕೆ.ಜಿ ಈರುಳ್ಳಿಗೆ 48 ರೂ.ಗಳಲ್ಲಿದೆ. ಚಿಲ್ಲರೆ ದರ ದೆಹಲಿಯಲ್ಲಿ 83 ರೂ. ಗಳವರೆಗೂ ಹೋಗಿದೆ. ಇದೇ ಪರಿಸ್ಥಿತಿ ಇನ್ನೂ ಎರಡು ತಿಂಗಳು ಮುಂದುವರಿಯಲಿದ್ದು, ನೂರು ರೂ. ಮುಟ್ಟಿದರೂ ಆಶ್ಚರ್ಯವಿಲ್ಲ. ಡಿಸೆಂಬರ್‌ನಲ್ಲಿ ಹಿಂಗಾರು ಬೆಳೆ ಮಾರುಕಟ್ಟೆಗೆ ಬಂದ ನಂತರ ಈರುಳ್ಳಿ ಬೆಲೆ ಇಳಿಮುಖವಾಗಲಿದೆ ಎಂದು ಕೇಂದ್ರದ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.

ಈರುಳ್ಳಿ ಬೆಳೆಯುವುದರಲ್ಲಿ ಮಹಾರಾಷ್ತ್ರ ನಂಬರ್ ಒನ್, ಈರುಳ್ಳಿ ಉತ್ಪಾದನೆ ಹೆಚ್ಚಿರುವ ಮಹಾರಾಷ್ಟçದಲ್ಲಿ ಅತಿವೃಷ್ಟಿಯ ಪರಿಣಾಮ ಬೆಳೆ ಕೈಗೆ ಬಾರದೆ ರೈತರಿಗೆ ಅಪಾರ ನಷ್ಟವಾಗಿದೆ. ಇದರ ಪರಿಣಾಮ ಇಳುವರಿ ಕುಸಿದು ಅಳಿದುಳಿದ ಬೆಳೆಯೂ ವಿಳಂಬವಾಗಿದೆ. ವಾಸ್ತವವಾಗಿ ಇಷ್ಟು ಹೊತ್ತಿಗೆ ಹಿಂಗಾರು ಬೆಳೆ ಮಾರುಕಟ್ಟೆ ಪ್ರವೇಶಿಸಬೇಕಿತ್ತು. ವಿಳಂಬವಾಗಿದ್ದರಿAದ ಈರುಳ್ಳಿ ಬೆಲೆ ದಿಢೀರ್ ಏರಿದೆ. ಜೊತೆಗೆ ಹಬ್ಬದ ಋತುವಿನಲ್ಲಿ ಬೇಡಿಕೆ ಹೆಚ್ಚಿರುವುದೂ ಬೆಲೆ ಏರುಗತಿಯಲ್ಲಿದೆ. ಬೆಲೆ ಏರಿಕೆ ಗಮನದಲ್ಲಿಟ್ಟುಕೊಂಡು ಸರ್ಕಾರ ಎನ್‌ಸಿಸಿಎಫ್ ಮತ್ತು ನಾಫೆಡ್ ಸಂಸ್ಥೆಗಳ ಮೂಲಕ ಎಲ್ಲೆಡೆ ಈರುಳ್ಳಿ ಖರೀದಿಸಿ 25 ರೂ.ಗಳ ರಿಯಾಯ್ತಿ ದರದಲ್ಲಿ ದೆಹಲಿ ಮೊದಲಾದೆಡೆ ಮಾರಾಟ ಮಾಡತ್ತಿದೆ. ಈವರೆಗೆ ಮೀಸಲು ದಾಸ್ತಾನಿನಿಂದ 1.7 ಲಕ್ಷ ಟನ್ ಈರುಳ್ಳಿಯನ್ನು 22 ರಾಜ್ಯಗಳ ವಿವಿಧ ಪ್ರಾಂತ್ಯಗಳಿಗೆ ಸರಬರಾಜು ಮಾಡುವ ಮೂಲಕ ದರ ಏರಿಕೆ ಬಿಸಿ ತಗ್ಗಿಸಲು ಪ್ರಯತ್ನಿಸಲಾಗಿದೆ ಎಂದು ಕೇAದ್ರ ಬಳಕೆದಾರ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ರೋಹಿತ್ ಕುಮಾರ್ ಹೇಳಿದ್ದಾರೆ.

ರಫ್ತು ನಿಷೇಧವಿದ್ದರೂ ತಗ್ಗದ ದರ: ದೇಶೀಯ ಬೇಡಿಕೆ ಗಮನದಲ್ಲಿಟ್ಟುಕೊಂಡು ಈರುಳ್ಳಿ ರಫ್ತಿನ ಮೇಲೆ ಕೇಂದ್ರ ನಿರ್ಬಂಧ ಹೇರಿದ್ದರೂ ದರ ಏರಿಕೆಗೆ ಕಡಿವಾಣ ಬಿದ್ದಿಲ್ಲ. ಸಗಟು ದರ 48 ಮತ್ತು 50 ರೂ. ಗಳಲ್ಲಿದೆ. ಆದರೆ ದೆಹಲಿಯಲ್ಲಿ ಚಿಲ್ಲರೆ ಮಾರಾಟ ದರ 65 ರಿಂದ 83 ರೂ.ಗಳಲ್ಲಿದೆ. ಬಹುತೇಕ ರಾಜ್ಯಗಳಲ್ಲಿ ಇದೇ ಪರಿಸ್ಥಿತಿ ಇದೆ.

ಈ ದರ ನೂರು ರೂ. ಮುಟ್ಟದಂತೆ ತಡೆಯಲು ಸರ್ಕಾರ ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿದೆ. ಆದರೆ ಡಿಸೆಂಬರ್ ನಂತರ ಏರಿಕೆ ನಿಯಂತ್ರಣಕ್ಕೆ ಬರಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular