Thursday, July 23, 2026
Homeಕ್ರೀಡೆನವದೆಹಲಿ ; ಐಪಿಎಲ್ ಬೆಟ್ಟಿಂಗ್ ಮೂವರ ಬಂಧನ .

ನವದೆಹಲಿ ; ಐಪಿಎಲ್ ಬೆಟ್ಟಿಂಗ್ ಮೂವರ ಬಂಧನ .

ನವದೆಹಲಿ : ದೇಶಾದ್ಯಂತ ಐಪಿಎಲ್ ಜ್ವರ ಹರಡಿದೆ .ಐಪಿಎಲ್ ಈಗಾಗಲೇ 45 ಪಂದ್ಯಗಳನ್ನು ಆಡಿದೆ. ಐಪಿಎಲ್ ದೇಶದ ಜನಪ್ರಿಯ ಕ್ರೀಕೆಟ್ ಟೂರ್ನಿಯಾಗಿದೆ. ಐಪಿಎಲ್ ಪಂದ್ಯಗಳ ಜೊತೆಗೆ ದೇಶದ ವಿವಿಧ ಭಾಗಗಳಲ್ಲಿ ಬೆಟ್ಟಿಂಗ್ ಕೂಡಾ ಆರಂಭವಾಗಿದೆ.

ಇದೀಗ ಐಪಿಎಲ್ ಪಂದ್ಯದ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಮೂವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯಕ್ಕಾಗಿ ಬೆಟ್ಟಿಂಗ್ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ದೆಹಲಿ ಪೊಲೀಸರ ತಂಡ ಐಪಿಎಲ್ ಬೆಟ್ಟಿಂಗ್ ಆರೋಪದ ಮೇಲೆ ಪ್ರದೀಪ್ ಶರ್ಮಾ ಅಲಿಯಾಸ್
ಬಾಬಿ (33), ಮೋಹಿತ್ ಅರೋರಾ (35) ಮತ್ತು ಮುಖೇಶ್ ಶರ್ಮಾ (44) ಅವರನ್ನು ಬಂಧಿಸಿದ್ದಾರೆ. ಆರೋಪಿಗಳಿAದ ಲ್ಯಾಪ್ ಟಾಪ್, ಆರು ಮೊಬೈಲ್ ಫೋನ್, ಎಲ್ ಇಡಿ ಟಿವಿ, ರೂಟರ್ ಹಾಗೂ 20,500 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಕೃಷ್ಣನಗರ ಪೊಲೀಸ್ ಠಾಣೆಯಲ್ಲಿ ಜೂಜು ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಬಂಧಿತ ವ್ಯಕ್ತಿಗಳ ವಿಚಾರಣೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular