ನವದೆಹಲಿ : ಅಮೆರಿಕ-ಇರಾನ್ ಯುದ್ಧ ಮುಂದುವರಿದಿರುವ ನಡುವೆ ದೇಶದ ಹಲವಾರು ನಗರ-ಪಟ್ಟಣಗಳಲ್ಲಿ ಅಡುಗೆ ಅನಿಲ(ಎಲ್ಪಿಜಿ) ಕೊರತೆ ಕಾಣಿಸಿಕೊಂಡಿದೆ. ಅನೇಕ ಕಡೆಗಳಲ್ಲಿ ನೂರಾರು ಜನರು ಖಾಲಿ ಎಲ್ಪಿಜಿ ಸಿಲಿಂಡರ್ಗಳನ್ನು ಹಿಡಿದು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕಂಡುಬAದಿವೆ.
ದೇಶದಲ್ಲಿ ಎಲ್ಪಿಜಿ ಬಿಕ್ಕಟ್ಟು ಉದ್ಭವಿಸಿರುವುದನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ. ದೇಶದಲ್ಲಿ ಎಲ್ಪಿಜಿ ಸರಬರಾಜು ಕೊರತೆ ಇಲ್ಲ ಎಂದಿರುವ ಸರ್ಕಾರ, ಹೆಚ್ಚುವರಿ ಸರಬರಾಜುಗಳಿಗಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ಹುಡುಕಾಟ ನಡೆಸಿದೆ. ಅಲ್ಜೀರಿಯಾ, ಆಸ್ಟೆçÃಲಿಯಾ, ಕೆನಡಾ ಹಾಗೂ ನಾರ್ವೆಯಂತಹ ದೇಶಗಳಿAದ ಎಲ್ ಪಿಜಿ ಆಮದು ಮಾಡಿಕೊಳ್ಳುವ ಸಂಭಾವ್ಯತೆಯನ್ನು ಪರಿಶೀಲಿಸುತ್ತಿದೆ. ಸರ್ಕಾರಿ ಮೂಲಗಳ ಪ್ರಕಾರ, ದೇಶದಲ್ಲಿ ಸಾಕಷ್ಟು ಅಡುಗೆ ಅನಿಲ ಸರಬರಾಜು ಇದೆ. ಯಾರೂ ಭಯ ಪಡುವ ಅಗತ್ಯವಿಲ್ಲ. ಅಕ್ರಮ ದಾಸ್ತಾನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೊಸ ಎಲ್ಪಿಜಿ ಬುಕ್ಕಿಂಗ್ಗಾಗಿ ಭಾರತೀಯ ತೈಲ ಸಂಸ್ಕರಣ ಘಟಕಗಳು ವಿಧಿಸುವ ಅವಧಿಯನ್ನು 25 ದಿನಗಳಿಗೆ ವಿಸ್ತರಿಸಿವೆ. ಆದಾಗ್ಯೂ ಕೆಲವು ಪೂರೈಕೆದಾರರು ಇರಾನ್ ಯುದ್ಧದಿಂದಾಗಿ ಎಲ್ಪಿಜಿ ಕೊರತೆ ಉಂಟಾಗಿದೆ ಎAಬ ವದಂತಿ ಹಬ್ಬಿಸಿ ಹೆಚ್ಚಿನ ಬೆಲೆ ಎಲ್ಪಿಜಿ ಅಡುಗೆ ಅನಿಲ ಮಾರಾಟ ಮಾಡುತ್ತಿರುವ ಬಗ್ಗೆ ವರದಿ ಯಾಗಿದೆ. ಕಾಳಧನ ಮಾರುಕಟ್ಟೆಯಲ್ಲಿ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ಗೆ 1500 ರೂ. ನೀಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ಕೆಲವು ಗ್ರಾಹಕರು ಆರೋಪಿಸುತ್ತಿದ್ದಾರೆ.
ಬಿಗಿ ಕ್ರಮ: ಮಧ್ಯಪ್ರಾಚ್ಯ ಯುದ್ಧ ಬಿಕ್ಕಟ್ಟು ದಿನೇ ದಿನೇ ಹೊಸಬಿಕ್ಕಟ್ಟನ್ನು ಸೃಷ್ಟಿಸಿರುವ ನಡುವೆ ಎಲ್ಪಿಜಿ ಸರಬ ರಾಜಿನಲ್ಲಾಗುವ ಅಡಚಣೆ ತೊಡೆದುಹಾಕುವ ಕುರಿತು ಸರ್ಕಾರ ಕ್ರಮ ಕೈಗೊಂಡಿದೆ. ಕಳೆದ ವಾರ ಎಲ್ಪಿಜಿ ಸಿಲಿಂಡರ್ ದರ ಏರಿಸಿರುವ ಸರ್ಕಾರ, ರಿಫಿಲ್ಲಿಂಗ್ಗೆ
ಸAಬAಧಿಸಿದ ನಿಯಮ ಬಿಗಿಗೊಳಿಸಿದೆ
ಇರಾನ್ ನೂತನ ಸುಪ್ರೀಂ ಲೀಡರ್ ಆಯ್ಕೆಯಾಗುತ್ತಿದ್ದಂತೆ ಕಚ್ಚಾ ತೈಲದ ದರ 120 ಡಾಲರ್ (11064 ರೂ.) ಮುಟ್ಟಿತು. 2022ರ ನಂತರ ಇದೇ ಮೊದಲ ಬಾರಿಗೆ 100 ಡಾಲರ್ ದಾಟಿದೆ. ತೈಲ ದರ ಹೆಚ್ಚಾಗುತ್ತಿದ್ದಂತೆ ನಿಯಂತ್ರಣಕ್ಕೆ ಮುಂದಾದ ಜಿ೭ ದೇಶಗಳು ತುರ್ತು ಸಭೆ ನಡೆಸಿದ್ದು, 30 ಕೋಟಿ ಬ್ಯಾರೆಲ್ ತೈಲ ಮಾರುಕಟ್ಟೆಗೆ ಬಿಡಲು ನಿರ್ಧರಿಸಿರುವುದಾಗಿ ವರದಿಯಾಗಿದೆ.


