ದಿ ಕಾಶ್ಮೀರ್ ಫೈಲ್ಸ್ ಕಾಶ್ಮೀರಿ ಪಂಡಿತರ ವಲಸೆ ಕುರಿತು ಇರುವ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಸಾಕಷ್ಟು ದೇಶಗಳಲ್ಲಿ ಬ್ಯಾನ್ ಆಗಿದೆ. ಅಷ್ಟೇ ಅಲ್ಲದೆ ಭಾರತದಲ್ಲಿ ರಾಜಕೀಯ ಪಕ್ಷದವರು ಈ ಸಿನಿಮಾ ವಿಷಯ ಇಟ್ಟುಕೊಂಡು ಸಾಕಷ್ಟು ಆರೋಪ, ಪ್ರತ್ಯಾರೋಪ ಮಾಡಿದ್ದರು. ಈ ಚಿತ್ರವು ದೇಶದಲ್ಲಿ ಭಾರೀ ಸಂಚಲನ ಮೂಡಿಸಿತ್ತು, ಈಗ ಈ ಚಿತ್ರವನ್ನು ಅಶ್ಲೀಲ ಎಂದು ಇಸ್ರೇಲ್ ಸಿನಿಮಾ ನಿರ್ಮಾಪಕ ನಡಾವ್ ಲಪಿಡ್ ಅವರು ಹೇಳಿದ್ದಾರೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ, ಕಾಶ್ಮೀರಿ ಪಂಡಿತರ ವಲಸೆ ಕುರಿತು ಇರುವ ಈ ಚಿತ್ರ ಸಾಕಷ್ಟು ದೇಶಗಳಲ್ಲಿ ಈ ಚಿತ್ರ ಬ್ಯಾನ್ ಆಗಿದೆ. ಅಷ್ಟೇ ಅಲ್ಲದೆ ಭಾರತದಲ್ಲಿ ರಾಜಕೀಯ ಪಕ್ಷದವರು ಈ ಸಿನಿಮಾ ವಿಷಯ ಇಟ್ಟುಕೊಂಡು ಸಾಕಷ್ಟು ಆರೋಪ, ಪ್ರತ್ಯಾರೋಪ ಮಾಡಿದ್ದರು.
ನಡಾವ್ ಲಪಿಡ್ ಹೇಳಿದ್ದೇನು?
“15ನೇ ಸಿನಿಮಾ ‘ದಿ ಕಾಶ್ಮೀರ್ ಫೈಲ್ಸ್ ಚಿತ್ರದಿಂದ ನಾವೆಲ್ಲ ಶಾಕ್ ಆಗಿದ್ದೇವೆ, ಡಿಸ್ಟರ್ಬ್ ಆಗಿದ್ದೇವೆ. ಇದು ಪ್ರಚಾರಕ್ಕಾಗಿ ಮಾಡಿದ್ದು, ಅಶ್ಲೀಲ ಸಿನಿಮಾ ಇದು. ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾತ್ಮಕ ವಿಭಾಗಕ್ಕೆ ಸೂಕ್ತವಲ್ಲದ ಚಿತ್ರವಿದು” ಎಂದು ಲಪಿಡ್ ಹೇಳಿದ್ದಾರೆ.