ತುಮಕೂರು ; ಜನಸಾಮಾನ್ಯರು ಯಾವ ರೀತಿಯ ಸಮಸ್ಯೆಯಲ್ಲಿದ್ದಾರೆ ಎಂದು ಈ ಸುದ್ದಿ ಓದಿದರೆ ತಿಳಿದು ಬರುತ್ತೆ. ಹಣದಾಸೆಗೆ ಚಿಕ್ಕ ಮಕ್ಕಳನ್ನ ಕಿಡ್ನಾಪ್ ಮಾಡಿ ಮಾರಾಟ ಮಾಡುವ ಹಲವು ಜಾಲವೊಂದನ್ನ ಪೊಲೀಸರು ಪತ್ತೆಹಚ್ಚಿ ಜೈಲಿಗೆ ಕಳುಹಿಸಿದ್ದಾರೆ.
ಈ ಕಾಲಮಾನದಲ್ಲಿ ಇಂತಹದೆಲ್ಲಾ ನಡೆಯುತ್ತಿರುವುದು ಆಶ್ಚರ್ಯ. ತುಮಕೂರಿನ ದಿಬ್ಬೂರು ನಿವಾಸಿಯಾದ ಚೌಡಮ್ಮ, ತನ್ನ ಮಗಳನ್ನ ಆಂಧ್ರ ಪ್ರದೇಶದ ಹಿಂದೂಪುರಕ್ಕೆ ತಂಗಿ ಸುಜಾತಳ ಮನೆಗೆ ಬಾಣಂತನಕ್ಕೆಂದು ಕಳಿಸಿದ್ದಳು. ಬಾಣಂತನ ಮುಗಿಸಿ ವಾಪಸ್ ಮಗಳು ಬರಲಿಲ್ಲ. ಹೀಗಾಗಿ ಚೌಡಮ್ಮ ಆಂಧ್ರ ಪ್ರದೇಶದ ಹಿಂದೂಪುರಕ್ಕೆ ಹೋದಾಗ ತನ್ನ ಮಗಳು ಇಲ್ಲದೆ ಇರುವುದು ತಿಳಿದಿದೆ. ಚೌಡಮ್ಮ, ಮಗಳ ಇಲ್ಲದನ್ನ ಕಂಡು ಗಾಬರಿಯಾಗಿದ್ದಾಳೆ. ಈ ವೇಳೆ ಸುಜಾತ ‘ನಾನು ಸಾಲ ಮಾಡಿಕೊಂಡಿದ್ದೆ ಸಾಲ ತೀರಿಸಲಾಗದೇ 35 ಸಾವಿರಕ್ಕೆ ಮಗಳನ್ನ ಜೀತಕ್ಕಾಗಿ ಮಾರಾಟ ಮಾಡಿರುವುದಾಗಿ ಹೇಳಿದ್ದಾಳೆ. ಈ ಬಗ್ಗೆ ತಲೆಕೆಡಿಸಿಕೊಂಡ ಬಾಲಕಿಯ ತಾಯಿ ಸಂಬಂಧಪಟ್ಟ ಇಲಾಖೆಗೆ ದೂರುನೀಡಿದ್ದಾರೆ.
ಈ ವಿಚಾರ ತಿಳಿದ ಚೌಡಮ್ಮ, ಒತ್ತೆಯಾಳಗಿಟ್ಟ ಸ್ಥಳಕ್ಕೆ ಹೊಗಿದ್ದರು ಅ ವೇಳೆ ಹಿಂದೂಪುರದ ಶ್ರೀರಾಮುಲು ಎಂಬ ವ್ಯಕ್ತಿ ಬಾತುಕೋಳಿ ಮೇಯಿಸಲು ತೋಟದಲ್ಲಿ ಇರಿಸಿಕೊಂಡಿದ್ದನು.
ಮಗಳನ್ನ ತನ್ನೊಂದಿಗೆ ಕಳಿಸುವಂತೆ ಬೇಡಿಕೊಂಡರೂ ಕೂಡ ಶ್ರೀ
ಒಪ್ಪಿರಲಿಲ್ಲ. ಹಣ ನೀಡಿ ಬಾಲಕಿಯನ್ನ ಕರೆದುಕೊಂಡು ಹೋಗು ಎಂದು ಹೇಳಿದ್ದನು.
ಹಿಂದೂಪುರದಲ್ಲಿ ಚೌಡಮ್ಮ ಮಗಳನ್ನು ಬಿಡುವಂತೆ ಅಂಗಲಾಚಿವದರೂ ಕರುಣೆ ತೋರದ ಕಾರಣ ವಾಪಸ್ ತುಮಕೂರಿಗೆ ಬಂದು ಮಗಳ ಸ್ಥಿತಿ ಬಗ್ಗೆ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಕಾರ್ಮಿಕ ಇಲಾಖೆ ಅಧಿಕಾರಿ ತೇಜಾವತಿ ಜಿಲ್ಲಾ ಎಸ್ಪಿ ಅಶೋಕ್ರವರಿಗೆ ಮಾಹಿತಿ ನೀಡಿ ಬಾಲಕಿಯನ್ನ ರಕ್ಷಿಸಿ ಕರೆತಂದಿದ್ದಾರೆ.ಈ ಘಟನೆ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.