Sunday, January 25, 2026
Flats for sale
Homeವಿದೇಶಢಾಕಾ : ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಯುವಕನ ಕಗ್ಗೊಲೆ.

ಢಾಕಾ : ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಯುವಕನ ಕಗ್ಗೊಲೆ.

ಢಾಕಾ : ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಯುವಕನನ್ನು ಬುಧವಾರ ರಾತ್ರಿ ಹೊಡೆದು ಕೊಲ್ಲಲಾಗಿದೆ. 29 ವರ್ಷದ ಅಮೃತ್ ಮಂಡಲ್ ಆಲಿಯಾಸ್ ಸಾಮ್ರಾಟ್ ಎಂಬಾತನನ್ನು ಉದ್ರಿಕ್ತ ಗುಂಪೊAದು ಹೊಡೆದು ಕೊಂದು ಹಾಕಿದೆ. ಕಾರ್ಖಾನೆ ಕಾರ್ಮಿಕ ದೀಪುಚಂದ್ ದಾಸ್ ನನ್ನು ದೇವನಿಂದನೆ ಆರೋಪ ಹೊರಿಸಿ ಅಮಾನುಷ ರೀತಿಯಲ್ಲಿ ಹತ್ಯೆ ಮಾಡಿದ ಕೆಲವೇ ದಿನಗಳಲ್ಲಿ ಈ ಹತ್ಯೆ ನಡೆದಿರುವುದರಿಂದ ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಮೃತ್‌ಮಂಡಲ್
ಮತ್ತಾವನ ಸಹಚರರು ರಾಜ್‌ಬಾರಿ ಉಪಜಿಲ್ಲೆಯಲ್ಲಿ ಉದ್ರಿಕ್ತ ಗುಂಪು ಆತನ ಮೇಲೆ ಹಲ್ಲೆ ಮಾಡಿದೆ. ಸ್ಥಳೀಯರು ಆರೋಪಿಸಿರುವಂತೆ ಮೃತ ಅಮೃತಮಂಡಲ್ ಶಾಹಿದುಲ್ ಇಸ್ಲಾಮ್ ಮನೆಗೆ ನುಗ್ಗಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆಗ ಶಾಹಿದುಲ್ ಇಸ್ಲಾಮ್ ಕುಟುಂಬದವರು ದರೋಡೆಕೋರರು ಎಂದು ಕೂಗಿದ್ದರಿಂದ ಹಳ್ಳಿಗರು ಒಟ್ಟುಗೂಡಿ ಆತನನ್ನು ಸಾಯುವವರೆಗೆ ಹೊಡೆದಿದ್ದಾರೆ.

ಈ ವೇಳೆ ಪೊಲೀಸರು ಅಮೃತ್ ಮಂಡಲ್‌ನನ್ನು ಸ್ಥಳೀಯ ಗುಂಪಿನ ಹಲ್ಲೆಯಿಂದ ತಪ್ಪಿಸಿ ಆಸ್ಪತ್ರೆಗೆ ಸಾಗಿಸಿದರೂ ಆತ ಬದುಕುಳಿಯಲಿಲ್ಲ. ಆದರೆ ಈ ಯುವಕನ ಜೊತೆಗಿದ್ದವರು ಗ್ರಾಮಸ್ಥರ ದಾಳಿಯಿಂದ ತಪ್ಪಿಸಿಕೊಂಡು ತಲೆ ಮರೆಸಿಕೊಂಡಿದ್ದಾರೆ. ಆದಾಗ್ಯೂ ಪರಮಾಪ್ತ ಮೊಹಮ್ಮದ್ ಸಲೀಂನನ್ನು ಪೊಲೀಸರು ಬಂಧಿಸಿ ಪಿಸ್ತೂಲ್ ಮತ್ತು ಇನ್ನೊಂದು ಗನ್‌ನನ್ನು ಆತನಿಂದವಶಪಡಿಸಿಕೊಂಡಿದ್ದಾರೆ.

ಪೊಲೀಸ್ ದಾಖಲೆಗಳ ಪ್ರಕಾರ, ಮೃತ ಸಾಮ್ರಾಟ್ ಕ್ರಿಮಿನಲ್‌ಗಳ ಗ್ಯಾಂಗ್‌ ಆಗಿರುವ ಅಮೃತ ವಾಹಿನಿಯ ನಾಯಕನಾಗಿದ್ದ. ಕೊಲೆ, ಸುಲಿಗೆಯಂತಹ ಅನೇಕ ಕ್ರಿಮಿನಲ್ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಕಳೆದ ವರ್ಷ ಶೇಖ್ ಹಸೀನಾ ಬೇಗಂ ಅವರ ಸರ್ಕಾರ ಪದಚ್ಯುತವಾದ ನಂತರ ಹೊಸೆನ್‌ದಂಗಾ ಗ್ರಾಮದಿಂದ ಪರಾರಿಯಾಗಿ ಇತ್ತೀಚೆಗಷ್ಟೇ ಹಿಂದಿರುಗಿದ್ದ.ಪಂಗಶಾ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಒಂದು ಕೊಲೆ ಸೇರಿದಂತೆ ಕನಿಷ್ಟ ಎರಡು ಪ್ರಕರಣಗಳು ದಾಖಲಾಗಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular