ಢಾಕಾ : ನೆರೆಯ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯಕ್ಕೆ ಸೇರಿದ ಮತ್ತೊಬ್ಬರ ಹತ್ಯೆ ನಡೆದಿದೆ. ಜೆಸ್ಸೋರ್ ಜಿಲ್ಲೆಯ ಮೊನಿರಾಂಪುರ್ ಉಪಜಿಲ್ಲಾದಲ್ಲಿ 45 ವರ್ಷದ ಹಿಂದೂ ಕಾರ್ಖಾನೆ ಮಾಲೀಕ ಮತ್ತು ಪತ್ರಕರ್ತ ರಾಣಾ ಪ್ರತಾಪ್ ಬೈರಾಗಿ ಅವರನ್ನು ಸೋಮವಾರ ಮಧ್ಯಾಹ್ನ ಸಾರ್ವಜನಿಕರೆದುರು ಗುಂಡಿಕ್ಕಿ ಕೊಲ್ಲಲಾಗಿದೆ.
ಜನದಟ್ಟಣೆಯ ಮಾರುಕಟ್ಟೆಯಾದ ಕೊಪಾಲಿಯಾ ಬಜಾರ್ನಲ್ಲಿ ಸಂಜೆ ೫:೪೫ ರ ಸುಮಾರಿಗೆ ಬೈರಾಗಿ ತಲೆಗೆ ಜನರ ದುಷ್ಕರ್ಮಿಗಳ ಗುಂಪೊAದು ಗುಂಡು ಹಾರಿಸಿ ಪರಾರಿಯಾಗಿದೆ. ನತದೃಷ್ಟ ಬೈರಾಗಿ ನರೈಲ್ ಮೂಲದ ದಿನಪತ್ರಿಕೆಯಾದ ಬಿಡಿ ಖೋಬೋರ್ನ ಹಂಗಾಮಿ ಸಂಪಾದಕರಾಗಿದ್ದಲ್ಲದೆ, ಸ್ಥಳೀಯ ಐಸ್ ಕಾರ್ಖಾನೆಯ ವ್ಯವಹಾರವನ್ನೂ ನೋಡಿಕೊಳ್ಳುತ್ತಿದ್ದರು.
ಇತ್ತೀಚಿನ ವಾರಗಳಲ್ಲಿ ಬಾಂಗ್ಲಾದೇಶದ ಹಿAದೂ ಸಮುದಾಯವನ್ನು ಗುರಿಯಾಗಿಸಿಕೊಂಡು
ನಡೆದಿರುವ ಹಿಂಸಾತ್ಮಕ ಘಟನೆಗಳ ಸರಣಿಯಲ್ಲಿ ಬೈರಾಗಿ ಹತ್ಯೆ ಇತ್ತೀಚಿನದು. ಡಿಸೆಂಬರ್ನಿAದ ಕನಿಷ್ಠ ಐವರು ಹಿಂದೂಗಳನ್ನು ಹತ್ಯೆ ಮಾಡಲಾಗಿದೆ.


