Saturday, January 17, 2026
Flats for sale
Homeವಿದೇಶಢಾಕಾ : ಬಾಂಗ್ಲಾದಲ್ಲಿ ಮತ್ತೆ ಉದ್ರಿಕ್ತ ಗುಂಪುಗಳಿಂದ ಹಿಂದೂಗಳ ಮನೆಗೆ ಬೆಂಕಿ,ಕಾಂಪೌಂಡ್ ಹಾರಿ ಪ್ರಾಣ ಉಳಿಸಿಕೊಂಡ...

ಢಾಕಾ : ಬಾಂಗ್ಲಾದಲ್ಲಿ ಮತ್ತೆ ಉದ್ರಿಕ್ತ ಗುಂಪುಗಳಿಂದ ಹಿಂದೂಗಳ ಮನೆಗೆ ಬೆಂಕಿ,ಕಾಂಪೌಂಡ್ ಹಾರಿ ಪ್ರಾಣ ಉಳಿಸಿಕೊಂಡ ಕುಟುಂಬದ ಸದಸ್ಯರು.

ಢಾಕಾ : ನೆರೆಯ ಬಾಂಗ್ಲಾದೇಶದಲ್ಲಿ ಫೆಬ್ರವರಿಯಲ್ಲಿ ಮಹಾ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವಾಗಲೇ ಹಿಂಸಾಚಾರ ಮರುಕಳಿಸಿದ್ದು, ಮಂಗಳವಾರವೂ ಮುಂದುವರಿದಿದೆ. ಚಟ್ಟೋಗ್ರಾಂ ನಲ್ಲಿ ಉದ್ರಿಕ್ತ ಗುಂಪು ಹಿಂದೂಗಳ ಮನೆಗೆ ಬೆಂಕಿ ಹಚ್ಚಿದ್ದು, ಕುಟುಂಬದ ಸದಸ್ಯರು ಕಾಂಪೌಂಡ್ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಒಳಗಿದ್ದ ಪ್ರಾಣಿಗಳು ಜೀವಂತವಾಗಿ ದಹನವಾಗಿದ್ದರೆ, ವಸ್ತುಗಳು ಸುಟ್ಟು ಹೋಗಿವೆ. ಈ ಘಟನೆಯಿಂದ ಪರಿಸ್ಥಿತಿ ಉದ್ವಿಗ್ನವಾಗಿದೆ. ನೀವು ಚಳವಳಿ ಮಾಡುವ ಮೂಲಕ ಇಸ್ಲಾಂ ಧರ್ಮ ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ಚಟುವಟಿಕೆಯ ಆರೋಪಿಗಳಾಗಿದ್ದೀರಿ. ನಿಮ್ಮ ಸಭೆ ಮತ್ತು ಚಟುವಟಿಕೆಗಳನ್ನು ನಿಲ್ಲಿಸದಿದ್ದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬ್ಯಾನರ್ ಹಾಕಿ ಬೆದರಿಸಲಾಗಿದೆ.

ವ್ಯಾಪಕ ಹಿಂಸಾಚಾರದ ಹಿನ್ನೆಲೆಯಲ್ಲಿ ಪ್ರೋಥೊಮ್ ಅಲೋ ಹಾಗೂ ದಿ ಡೈಲಿ ಸ್ಟಾರ್‌ನಂತಹ ಪತ್ರಿಕೆಗಳ ಸಂಪಾದಕರ ಸಹಿತ 20ಪ್ರಮುಖ ಗಣ್ಯರ ಭದ್ರತೆ ಹೆಚ್ಚಿಸಲಾಗಿದೆ. ಪ್ರಮುಖ ಪತ್ರಿಕೆಗಳ ಸಂಪಾದಕರು ಪತ್ರಿಕಾಗೋಷ್ಠಿ ನಡೆಸಿ, ಪತ್ರಕರ್ತರ ಬದುಕಿನ ಹಕ್ಕಿಗೇ ಧಕ್ಕೆ ಬಂದಿದೆ ಎಂದು ಆರೋಪಿಸಿದ್ದಾರೆ.

ಯುವ ನಾಯಕ ಉಸ್ಮಾನ್ ಹಾದಿ ಮರಣಾನಂತರ ಢಾಕಾ ಸೇರಿದಂತೆ ಹಲವು ಪ್ರದೇಶಗಳು ಬೂದಿಮುಚ್ಚಿದ ಕೆಂಡದAತಿವೆ. ಎಲ್ಲೆಡೆ ವಿಧ್ವಂಸಕ ಕೃತ್ಯಗಳು, ಬೆಂಕಿಹಚ್ಚುವಿಕೆ, ಗಲಭೆಗಳು ಮುಂದುವರಿದಿವೆ. ಛಾಯಾನೋಟ್, ಉಡಿಚಿ ಯಂತಹ ಸಾಂಸ್ಕೃತಿಕ ಸಂಸ್ಥೆಗಳು ಹಾಗೂ ಪತ್ರಿಕಾ ಕಚೇರಿಗಳ ಮೇಲೂ ದಾಳಿ ನಡೆಸಲಾಗುತ್ತ್ತಿದೆ. ಸೋಮವಾರ ಶರಿಯತ್‌ಪುರದಲ್ಲಿ ಬಿಎನ್‌ಪಿಯ ವಿದ್ಯಾರ್ಥಿ ವಿಭಾಗದ ಛಾತ್ರ ದಳದ ಕಾರ್ಯಕರ್ತರು ಜಾತಿಯಾ ನಾಗರಿಕೋ ಪಕ್ಷದ ಸದಸ್ಯರೊಂದಿಗೆ ಘರ್ಷಣೆ ನಡೆಸಿದರು.

ರಾಯಭಾರಿಗೆ ಬುಲಾವ್ : ಈ ನಡುವೆ ಬಾಂಗ್ಲಾ ಹಿAಸಾಚಾರ ತಡೆಗಟ್ಟಲು ವಿಫಲವಾಗಿರುವ ಪ್ರಧಾನ ಸಲಹೆಗಾರ ಮೊಹಮ್ಮದ್ ಯುನುಸ್ ಸರ್ಕಾರ ಢಾಕಾದಲ್ಲಿರುವ ಭಾರತದ ರಾಯಭಾರಿ ಪ್ರಣಯ್ ವರ್ಮಾ ಅವರನ್ನು ಹತ್ತು ದಿನಗಳ ಅವಧಿಯಲ್ಲಿ ಎರಡನೇ ಬಾರಿ ಕರೆಸಿಕೊಂಡಿದೆ. ಆದರೆ ರಾಯಭಾರಿ ವರ್ಮಾ ಅವರನ್ನು ಏಕೆ ಕರೆಯಿಸಲಾಯಿತೆಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈ ಹಿಂದೆ ಡಿಸೆಂಬರ್ ೧೪ರಂದು ಅವರನ್ನು ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯ ಕರೆಯಿಸಿಕೊಂಡಿತ್ತು. ವೀಸಾ ಕೇಂದ್ರ ಕ್ಲೋಸ್: ಕಳೆದ ಕೆಲವು ದಿನಗಳಿಂದ ಎರಡೂ ದೇಶಗಳ ರಾಜತಾಂತ್ರಿಕ ಬಿಕ್ಕಟ್ಟು ಬಿಗಡಾಯಿಸಿದೆ.

ಇತ್ತೀಚೆಗೆ ಭಾರತ ಭದ್ರತಾ ಕಾರಣಕ್ಕೋಸ್ಕರ ಬಾಂಗ್ಲಾದಲ್ಲಿರುವ ಹಲವಾರು ವೀಸಾ ಕೇಂದ್ರಗಳನ್ನು ಮುಚ್ಚಿದೆ. ಇದಕ್ಕೆ ಪ್ರತಿಯಾಗಿ ಬಾಂಗ್ಲಾವೂ ಮೂರು ವೀಸಾ ಕೇಂದ್ರಗಳನ್ನು ಮುಚ್ಚಿದೆ. ರಾಜಶಾಹಿ, ಖುಲ್ನಾ ಹಾಗೂ ಚಿತ್ತಗಾಂಗ್‌ನಲ್ಲಿರುವ ಬಾAಗ್ಲಾ ವೀಸಾ ಕೇಂದ್ರಗಳು ಈಗ ಮುಚ್ಚಿವೆ. ಇದೇ ಸಮಯದಲ್ಲಿ ಭಾರತದ ಸಿಲಿಗುರಿ ಹಾಗೂ ಅಗರ್ತಲಾದಲ್ಲಿರುವ ಬಾಂಗ್ಲಾ ವೀಸಾ ಕೇಂದ್ರಗಳನ್ನು ಮುಚ್ಚಿರುವ ಮಾಹಿತಿ ಇದೆ.

RELATED ARTICLES

LEAVE A REPLY

Please enter your comment!
Please enter your name here

Most Popular