ಟೋಕಿಯೊ : ಜಪಾನ್‌ನ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ಮುಂಜಾನೆ ಸಂಭವಿಸಿದ 8.7 ತೀವ್ರತೆಯ ಭೂಕಂಪ ಸಂಭವಿಸಿದ ಬೆನ್ನಲ್ಲೇ, ರಷ್ಯಾದ ಕುರಿಲ್ ದ್ವೀಪಗಳು ಮತ್ತು ಜಪಾನ್‌ನ ದೊಡ್ಡ ಉತ್ತರ ದ್ವೀಪ ಹೊಕ್ಕಾಯ್ ದೊಡ ಕರಾವಳಿ ಪ್ರದೇಶಗಳಿಗೆ ಸುನಾಮಿ ಅಪ್ಪಳಿಸಿದೆ. ಹಲವೆಡೆ ಸುನಾಮಿ ಎಚ್ಚರಿಕೆ ಸೈರನ್‌ಗಳು ಮೊಳಗಿದ್ದು, ಜನರಿಗೆ ಎತ್ತರದ ಪ್ರದೇಶಗಳಿಗೆ ಸ್ಥಳಾಂತರ ಗೊಳ್ಳುವಂತೆ ತಿಳಿಸಲಾಗಿದೆ. ಹೊಕ್ಕೆöÊಡೊದ ಪೂರ್ವ ಕರಾವಳಿಯಲ್ಲಿರುವ ನೆಮುರೊದಲ್ಲಿ ಸುಮಾರು 30 ಸೆಂಟಿಮೀಟರ್ ಎತ್ತರ ಮೊದಲ ಸುನಾಮಿ ಅಲೆಗಳು ಅಪ್ಪಳಿಸಿವೆ ಎಂದು ಹವಾಮಾನ ಸಂಸ್ಥೆ ತಿಳಿಸಿದೆ.
ಸ್ಥಳೀಯ ಗವರ್ನರ್ ವ್ಯಾಲೆರಿ ಲಿಮರೆಂಕೊ ಪ್ರಕಾರ, ಪೆಸಿಫಿಕ್‌ನಲ್ಲಿರುವ ರಷ್ಯಾದ ಕುರಿಲ್ ದ್ವೀಪಗಳ ಸೆವೆರೊ-ಕುರಿಲ್ಸ್÷್ಕ ಕರಾವಳಿ ಪ್ರದೇಶಕ್ಕೆ ಮೊದಲ ಸುನಾಮಿ ಅಲೆ ಅಪ್ಪಳಿಸಿದೆ. ನಿವಾಸಿಗಳು ಸುರಕ್ಷಿತ ಮತ್ತು ಪುನರಾವರ್ತಿತ ಅಲೆಯ ಬೆದರಿಕೆ ಅಂತ್ಯಗೊಳ್ಳುವವರೆಗೆ ಜನರು ಎತ್ತರದ ಪ್ರದೇಶದಲ್ಲಿ ಕುಳಿತು ಜೀವ ರಕ್ಷಣೆಗೆ ಮುಂದಾಗಿದ್ದಾರೆ.
ಹವಾಯಿ, ಚಿಲಿ, ಜಪಾನ್ ಮತ್ತು ಸೊಲೊಮನ್ ದ್ವೀಪಗಳ ಕೆಲವು ಕರಾವಳಿ ಪ್ರದೇಶಗಳಲ್ಲಿ ಉಬ್ಬರವಿಳಿತದ ಮಟ್ಟಕ್ಕಿಂತ ೧ ರಿಂದ ೩ ಮೀಟರ್ ಅಲೆಗಳು ತಿಳಿದಿರುವ ಸಾಧ್ಯತೆಯಿದೆ ಎಂದು ಪೆಸಿಫಿಕ್ ಸುನಾಮಿ ಕೇಂದ್ರ ಎಚ್ಚರಿಕೆ ನೀಡಿದೆ. 8.7 ತೀವ್ರತೆಯ ಭೂಕಂಪ ರಷ್ಯಾದ ಪೂರ್ವದ ಭಾಗದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ಬುಧವಾರ ಮುಂಜಾನೆ 8.7 ತೀವ್ರತೆಯ ಭೂಕಂಪ ಸಂಭವಿಸಿದ ಬೆನ್ನಲ್ಲೇ ಕಮ್ಚಟ್ಕಾ ದ್ವೀಪದಲ್ಲಿ ಭೂಕಂಪದ ಕೇAದ್ರಬಿAದುವಿಗೆ ಸಮೀಪವಿರುವ ರಷ್ಯಾದ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ.
ಅಮೆರಿಕಾ ಭೂಗರ್ಭ ಶಾಸ್ತç ಇಲಾಖೆಯ ಪ್ರಕಾರ ಭೂಕಂಪ 19.3 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಜಪಾನ್‌ನ ಉತ್ತರದ ತುದಿಯಲ್ಲಿರುವ ಹೊಕ್ಕೆöÊಡೊದಿಂದ ಸುಮಾರು 250 ಕಿಲೋಮೀಟರ್ (ದೂರದಲ್ಲಿ ಭೂಕಂಪ ಸಂಭವಿಸಿದೆ ಎAದು ತಿಳಿಸಿದೆ. ಮನೆಯಲ್ಲಿರುವ ವಸ್ತುಗಳು ನೆಲಕ್ಕುರುಳಿ ಬಿದ್ದಿವೆ. ಜೊತೆಗೆ, ಬೀದಿಯಲ್ಲಿ ನಿಲ್ಲಿಸಿದ ಕಾರುಗಳು ಮತ್ತು ಕಟ್ಟಡಗಳ ಮೇಲಿನ ಬಾಲ್ಕನಿಗಳು ಸಹ ಅಲುಗಾಡಿವೆ ಎಂದು ತಿಳಿಸಲಾಗಿದೆ.
ಹವಾಯಿ ದ್ವೀಪಗಳ ಕರಾವಳಿಯಲ್ಲಿ ಹಾನಿಯನ್ನುಂಟು ಮಾಡಬಹುದು. ಜೀವ ಮತ್ತು ಆಸ್ತಿಯ ರಕ್ಷಣೆಗೆ ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಎಚ್ಚರಿಕೆ ತಿಳಿಸಿದೆ. ಕಮ್ಚಟ್ಕಾದಲ್ಲಿ ವಿದ್ಯುತ್ ಕಡಿತ ಮತ್ತು ಮೊಬೈಲ್ ಪೋನ್ ಸೇವೆಗಳಲ್ಲಿ ವ್ಯತ್ಯಯ ಸಂಭವಿಸಿದೆ. ಸಖಾಲಿನ್ ದ್ವೀಪದಲ್ಲಿರುವ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ತುರ್ತು ಸೇವೆಗಳು ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಸ್ಥಳೀಯ ರಷ್ಯಾದ ಅಧಿಕಾರಿಯೊಬ್ಬರು ಹೇಳಿದ್ದಾರೆ.