ಟೆಹ್ರಾನ್ : ಕಾಶ್ಮೀರದ ವಿವಾದ, ಭಯೋತ್ಪಾದನೆ ವಿಷಯ, ಸಿಂಧೂ ನೀರು ಹಂಚಿಕೆ ಮತ್ತು ವ್ಯಾಪಾರ ಸೇರಿದಂತೆ ಭಾರತ- ಪಾಕಿಸ್ತಾನದ ನಡುವೆ ಬಾಕಿ ಇರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಭಾರತದೊಂದಿಗೆ ಶಾಂತಿ ಮಾತುಕತೆಗೆ ಸಿದ್ದ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಭಾರತ, ಸಿಂಧೂ ನದಿ ನೀರು ಒಪ್ಪಂದ ಸ್ಥಗಿತ, ವ್ಯಾಪಾರ ವಹಿವಾಟಿಗೆ ನಿರ್ಬಂಧ ಹಾಕುವ ಜೊತೆಗೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ೯ ಭಯೋತ್ಪಾದಕ ನೆಲೆಗಳು ಮತ್ತು ತರಬೇತಿ ಕೇಂದ್ರಗಳನ್ನು ಆಪರೇಷನ್ ಸಿಂಧೂರ್ ಮೂಲಕ ಧ್ವಂಸ ಮಾಡಿದೆ. ಇದರಿಂದ ವಿಚಲಿತರಾಗಿರುವ ಪಾಕಿಸ್ತಾನ ಅನ್ಯಮಾರ್ಗವಿಲ್ಲದೆ ಭಾರತದೊಂದಿಗೆ ಶಾAತಿ ಮಾತುಕತೆಯ ಪ್ರಸ್ತಾಪ ಮುಂದಿಟ್ಟಿದೆ.
ಆಪರೇಷನ್ ಸಿಂಧೂರ್ ನಂತರ ತೀವ್ರಗೊಂಡ ಗಡಿಯಾಚೆಗಿನ ಗುಂಡಿನ ದಾಳಿ ನಿಲ್ಲಿಸಲು ಭಾರತ ಮತ್ತು ಪಾಕಿಸ್ತಾನ ಒಪ್ಪಿಕೊಂಡ ವಾರಗಳ ನಂತರ ಪಾಕಿಸ್ತಾನದ ಪ್ರಧಾನಿ ಷಹಬಾದ್ ಷರೀಫ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ನಾಲ್ಕು ರಾಷ್ಟçಗಳ ಪ್ರವಾಸದ ಎರಡನೇ ಹಂತದ ಸಂದರ್ಭದಲ್ಲಿ ಇರಾನ್ನ ಟೆಹ್ರಾನ್ನಲ್ಲಿ ಅಲ್ಲಿನ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಜAಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನ ಪ್ರಧಾನಿ, ಇರಾನ್ನಲ್ಲಿ ಭಾರತದೊಂದಿಗೆ ಎಲ್ಲಾ ಸಮಸ್ಯೆಗಳನ್ನು ಶಾಂತಿ ಮಾತುಕತೆಯ ಮೂಲಕ ಬಗೆ ಹರಿಸಿಕೊಳ್ಳಲು ಪಾಕಿಸ್ತಾನ ಮುಕ್ತ ಮನಸ್ಸು ಹೊಂದಿದೆ ಎಂದು ತಿಳಿಸಿದ್ದಾರೆ.
ಭಾರತ ಯುದ್ಧದ ಮಾರ್ಗವನ್ನು ಆರಿಸಿಕೊಂಡರೆ ಪಾಕಿಸ್ತಾನ ಅದೇ ದಾಟಿಯಲ್ಲಿ ಪ್ರತಿಕ್ರಿಯಿಸುತ್ತದೆ ಎಂದು ಎಚ್ಚರಿಸಿದ್ದಾರೆ, ಆದರೆ ನಾವು ಶಾಂತಿ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಯಸುವುದಾಗಿ ತಿಳಿಸಿದ್ದಾರೆ.
ಭಾರತ ಆಕ್ರಮಣ ಬಯಸಿದರೆ ನಾವೂ ಆಕ್ರಮಣದ ಮೂಲಕ ಉತ್ತರ ನೀಡುತ್ತೇವೆ, ಒಂದು ವೇಳೆ ಶಾಂತಿ ಮಾರ್ಗ ಆಯ್ಕೆ ಮಾಡಿಕೊಂಡರೆ ನಾವೂ ಶಾಂತಿ ಬಯಸುತ್ತೇವೆ . ಈ ವಿಷಯದಲಿ ಗಂಭೀರವಾಗಿ ಮತ್ತು ಪ್ರಾಮಾಣಿಕತೆ ಪ್ರದರ್ಶಿಸುತ್ತೇವೆ ಎಂದಿದ್ದಾರೆ. “ಕಾಶ್ಮೀರ ಸಮಸ್ಯೆ ಮತ್ತು ನೀರಿನ ಸಮಸ್ಯೆ ಸೇರಿದಂತೆ ಎಲ್ಲಾ ವಿವಾದಗಳನ್ನು ಮಾತುಕತೆಗಳ ಮೂಲಕ ಪರಿಹರಿಸಲು ನಾವು ಬಯಸುತ್ತೇವೆ ಮತ್ತು ವ್ಯಾಪಾರ ಮತ್ತು ಭಯೋತ್ಪಾದನೆ ನಿಗ್ರಹದ ಕುರಿತು ನಮ್ಮ ನೆರೆಹೊರೆಯವರೊಂದಿಗೆ ಮಾತನಾಡಲು ಸಹ ಸಿದ್ಧರಿದ್ದೇವೆ” ಎಂದು ಅವರು ಹೇಳಿದ್ದಾರೆ.
ನೀರು, ರಕ್ತ ಒಟ್ಟಿಗೆ ಹರಿಯಲ್ಲ: ಸ್ಪಷ್ಟನೆ
“ಭಯೋತ್ಪಾದನೆ ಮತ್ತು ಮಾತುಕತೆಗಳು ಒಂದೇ ಸಮಯದಲ್ಲಿ ನಡೆಯಲು ಸಾಧ್ಯವಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ನಡೆಯಲು ಸಾಧ್ಯವಿಲ್ಲ. ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ. ಭಾರತ ಮತ್ತುಪಾಕಿಸ್ತಾನದ ನಡುವೆ ಮಾತುಕತೆ ನಡೆದರೆ, ಅದು ಭಯೋತ್ಪಾದನೆ ಮತ್ತು ಪಿಒಕೆ ಬಗ್ಗೆ ಮಾತ್ರ ಎಂದು ಈಗಾಗಲೇ ಅಂತರರಾಷ್ಟಿçÃಯ ಸಮುದಾಯಕ್ಕೆ ಕಡ್ಡಿ ಮುರಿದಂತೆ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ಧಾರೆ. ಕಾಶ್ಮೀರ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಸ್ತಾಪಕ್ಕೆ ಸ್ಪಷ್ಟ ಪ್ರತಿಕ್ರಿಯೆಯಾಗಿ, ಎರಡೂ ದೇಶಗಳ ನಡುವಿನ ಯಾವುದೇ ಮಾತುಕತೆ ಯಾವುದೇ ಮೂರನೇ ವ್ಯಕ್ತಿಯ ಒಳಗೊಳ್ಳುವಿಕೆ ಇಲ್ಲದೆ ದ್ವಿಪಕ್ಷೀಯ ವಿಷಯವಾಗಿ ಉಳಿಯಬೇಕು
ಎಂದು ಭಾರತ ಸ್ಪಷ್ಟಪಡಿಸಿದೆ.


