ಟೆಲ್ ಅವೀವಾ : ಗಾಜಾ ಪಟ್ಟಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳುವ ತನಕ ವಿರಮಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಜ್ಞೆ ಮಾಡಿದ್ದಾರೆ.
ಇಸ್ರೇಲ್ ಮತ್ತು ಗಾಜಾ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆ ಗಾಜಾ ಪಟ್ಟಿಯನ್ನು ಸಂಪೂರ್ಣ ವಶಕ್ಕೆ ಪಡೆಯುವುದು ನಮ್ಮ ಉದ್ದೇಶ ಈ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ಧಾರೆ. ಹಮಾಸ್ ಬಂಡುಕೋರರ ತಮ್ಮ ವಶದಲ್ಲಿರಿಸಿಕೊಂಡಿರುವ ಇಸ್ರೇಲ್ ಒತ್ತೆಯಾಳುಗಳನ್ನು ಬಿಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ತೀವ್ರವಾಗಿರಲಿದೆ. ಗಾಜಾವನ್ನು ವಶಕ್ಕೆ ಪಡೆಯುವ ತನಕ ಸುಮ್ಮನೆ ಇರುವುದಿಲ್ಲ ಎಂದು ಹೇಳಿದ್ದಾರೆ.
ಗಾಜಾ ಮೇಲೆ ಇಸ್ರೇಲ್ ಸಂಪೂರ್ಣ ಸೇನಾ ಹಿಡಿತ ಸಾಧಿಸಲಿದೆ, ಜೊತೆಗೆ ಪ್ಯಾಲೆಸ್ಟೀನಿಯನ್ ನಾಗರಿಕರು ಮತ್ತು ಇಸ್ರೇಲ್ ಒತ್ತೆಯಾಳುಗಳಿಗೆ ತೊಂದರೆ ಉಂಟು ಮಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ ಇಸ್ರೇಲ್ ನಲ್ಲಿರುವ ಇಂಗ್ಲೆಂಡ್ ರಾಯಬಾರಿ ಪ್ರತಿಕ್ರಿಯಿಸಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಹ್ಯಾಹು ಅವರ ನಿಧಾರ ಭವಿಷ್ಯದಲ್ಲಿ ಪರಿಣಾಮ ಬೀರಬಹುದಾಗಿದೆ ಜೊತೆಗೆ ಹಾನಿ ಉಂಟು ಮಾಡಲಿದೆ. ಈ ರೀತಿಯ ನಿರ್ಧಾರ ಸರಿಯಲ್ಲ ಎಂದಿದ್ದಾರೆ.
ಅಮೆರಿಕದ ರಾಯಭಾರಿ ಮೈಕ್ ಹಕಬೀ ಅವರು ಗಾಜಾವನ್ನು ಸ್ವಾಧೀನಪಡಿಸಿಕೊಳ್ಳಬೇಕೆ ಅಥವಾ ಬಿಡಬೇಕೇ ಎನ್ನುವುದು ಇಸ್ರೇಲ್‌ಗೆ ಬಿಟ್ಟ ವಿಷಯ, ಈ ವಿಷಯದಲ್ಲಿ ಅಮೇರಿಕಾ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದಿದ್ಧಾರೆ. ಕದನ ವಿರಾಮ ಮಾತುಕತೆ ಮುರಿದ ನಂತರ ಹಮಾಸ್ ಅನ್ನು ನಾಶಮಾಡಲು ಮತ್ತು ಗುಂಪಿನಿAದ ಇನ್ನೂ ಬಂಧಿಸಲ್ಪಟ್ಟಿರುವ ಒತ್ತೆಯಾಳುಗಳನ್ನು ಮುಕ್ತಗೊಳಿಸಲು ಏಕೈಕ ಮಾರ್ಗವೆಂದರೆ ಗಾಜಾವನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಎದುರು ನೋಡುತ್ತಿದ್ದಾರೆ ಎಂದು ಇಸ್ರೇಲಿ ಮಾಧ್ಯಮಗಳು ಹೇಳಿವೆ. 2023ರ ಅಕ್ಟೋಬರ್ 7 ರಿಂದ ಇಸ್ರೇಲ್ ಮತ್ತು ಗಾಜಾ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿ ಲಕ್ಷಾಂತರ ಮಂದಿ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ, ಇನ್ನೂ ಹಲವು ಮಂದಿ ಹಸಿವಿನಿAದ ಬಳಲುತ್ತಿದ್ದಾರೆ.