Thursday, July 23, 2026
Homeಕ್ರೈಂಚಿತ್ರದುರ್ಗ : ನನ್ನ ಪತಿ ಹತ್ಯೆಯಾಗಿದೆ, ನಾನು ಗರ್ಭಿಣಿಯಾಗಿದ್ದೇನೆ ನಂಗೆ ಹುಟ್ಟೋ ಮಗು ಅಪ್ಪ ಎಲ್ಲಿ...

ಚಿತ್ರದುರ್ಗ : ನನ್ನ ಪತಿ ಹತ್ಯೆಯಾಗಿದೆ, ನಾನು ಗರ್ಭಿಣಿಯಾಗಿದ್ದೇನೆ ನಂಗೆ ಹುಟ್ಟೋ ಮಗು ಅಪ್ಪ ಎಲ್ಲಿ ಅಂದ್ರೆ ಏನು ಹೇಳೋದು? ಹತ್ಯೆಯಾದ ರೇಣುಕಾಸ್ವಾಮಿ ಹೆಂಡ್ತಿ ಕಣ್ಣೀರು.!

ಚಿತ್ರದುರ್ಗ : ನಾವಿಬ್ಬರು ಮದುವೆಯಾಗಿ ಒಂದು ವರ್ಷ ಆಗಿದೆ, ಅಂದು ಮದ್ಯಾಹ್ನ ಫೋನ್ ಮಾಡಿದ್ರು, ನಮ್ಮತ್ತೆಗೆ ತಿಳಿಸಿದ್ರು ಊಟಕ್ಕೆ ಬರ್ತಿನಿ ಎಂದು ಹೇಳಿದ್ದರು ನಾನು ಅವರ ಬರುವಿಕೆಗೆ ಕಾಯುತಿದ್ದೆ ನಾನು ತಾಯಿ ಆಗುತ್ತಿದ್ದೇನೆ ಹೀಗೆ ಆದರೆ ಏನು ಮಾಡಲಿ. ನನ್ನ ಮತ್ತು ನನ್ನ ಮುಂದಿನ ಜೀವನ ಹೇಗೆ ಮಾಡೋದು..? ನೀವೇ ನ್ಯಾಯ ಕೊಡಿಸಿ ಸ್ವಾಮೀ ಎಂದು ನಟ ದರ್ಶನ್ ಗ್ಯಾಂಗ್‌ನಿಂದ ಹತ್ಯೆಯಾದ ಚಿತ್ರದುರ್ಗದ ರೇಣುಕಾಸ್ವಾಮಿಯ ಪತ್ನಿ ಸಹನಾ ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತಿಕ್ರಿಯಿಸಿದ ರೇಣುಕಾಸ್ವಾಮಿ ಪತ್ನಿ ಸಹನಾ ನನ್ನ ಪತಿ ಹತ್ಯೆಯಾಗಿದೆ, ನಾನು ಗರ್ಭಿಣಿ ಇದ್ದೇನೆ ನ್ಯಾಯ ಕೊಡಿಸಿ. ನನ್ನ ಗಂಡನಿಗೆ ಹೀಗೆ ಆಗಬಾರದಿತ್ತು. ಅವರು ಇಲ್ಲಿಂದ ಹೋಗುವಾಗ ಏನೂ ಹೇಳಿ ಹೋಗಿಲ್ಲ,ನನ್ನ ಪತಿ ದರ್ಶನ್ ಅಭಿಮಾನಿ ಆಗಿರಲಿಲ್ಲ, ದರ್ಶನ ಮೇಲೆ ಆರೋಪ ಬಂದಿರೋದಕ್ಕೆ ನ್ಯಾಯ ಕೊಡಿಸಲು ಜನ ಇದಾರೆ. ನಾನು ಮುಂದೆ ಜೀವನ ಮಾಡೋದು ಹೇಗೆ? ಮುಂದೆ ಈ ಮಗುವಿಗೆ ಯಾರು ಬರ್ತಾರೆ? ನಮಗೆ ನ್ಯಾಯ ಬೇಕು ಎಂದು ಮೃತ ರೇಣುಕಾಸ್ವಾಮಿ ಅವರ ಪತ್ನಿ ಸಹನಾ ಮಾಧ್ಯಮಗಳ ಮುಂದೆ ಮನವಿ ಮಾಡಿಕೊಂಡಿದ್ದಾರೆ.

ರೇಣುಕಾಸ್ವಾಮಿ ಪತ್ನಿ ಭೇಟಿ ಮಾಡಿದ ಭಾವನಾ ಬೆಳಗೆರೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಅವರ ಪತ್ನಿ ನೋಡಿ ನನ್ನ ಕಣ್ಣಲ್ಲೇ ನೀರು ಬಂತು. ಅವರ ಪತ್ನಿ ಸಂಪೂರ್ಣವಾಗಿ ಬ್ಲಾಂಕ್ ಆಗಿದ್ದಾರೆ. ತುಂಬಾ ಎಂಗ್ ಇದ್ದಾರೆ, ಅದರಲಲ್ಲಿಯೂ ಐದು ತಿಂಗಳ ಗರ್ಭಿಣಿ ಇದ್ದಾರೆ. ಅವರ ಹೆಂಡತಿ ತುಂಬಾ ಮುಗ್ಧರು ತುಂಬಾ ನೊಂದು ಕೊಂಡಿದ್ದಾರೆ. ಏನಾಗುತ್ತಿದೆ ಎಂಬುದು ಅವರಿಗೆ ಇನ್ನು ಗೊತ್ತಾಗಿಲ್ಲ. ಪವಿತ್ರ ದರ್ಶನ ಅವರು ಅರೆಸ್ಟ್ ಆಗಿದ್ದಾರೆ ಎಂಬುದು ಗೊತ್ತಾಗಿದೆ. ಅವರ ಮನೆ ಪರಿಸ್ಥಿತಿ ನೋಡಿ ತುಂಬಾ ಬೇಜಾರಾಯ್ತು ಎಂದು ಹೇಳಿದ್ದಾರೆ.

ಚಿತ್ರದುರ್ಗದ ನಿವಾಸಕ್ಕೆ ರೇಣುಕಾಸ್ವಾಮಿ ಮೃತದೇಹ ಅಂಬುಲೆನ್ಸ್ ನಲ್ಲಿ ರವಾನಿಸಿದ್ದು VRS ಬಡಾವಣೆಯ ನಿವಾದ ಬಳಿ ರೇಣುಕಾಸ್ವಾಮಿ ಮೃತದೇಹ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು,ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಸಂಬಂಧಿಗಳು ಕಿಕ್ಕಿರಿದು ಕಾಯುತಿದ್ದು ಪಾರ್ಥಿವ ಶರೀರ ಬರುತ್ತಿದ್ದಂತೆ ಪತ್ನಿ ಸಹನಾ ಆಕ್ರಂದನ ಮುಗಿಲು ಮುಟ್ಟಿದೆ. ಬಳಿಕ ಪಾರ್ಥೀವ ಶರೀರಕ್ಕೆ ಹಾರ ಹಾಕಿ ಪೂಜೆ ಸಲ್ಲಿಸಿ ಅಂತಮ ದರ್ಶನ ಪಡೆದರು.ವೀರಶೈವ ಲಿಂಗಾಯತ ವಿಧಿ ವಿಧಾನದ ಮೂಲಕ ಪೂಜೆ ಸಲ್ಲಿಸಿದ್ದು ಚಿತ್ರದುರ್ಗದ ದ್ವಾರುಕ ಬಡಾವಣೆ ಜೋಗಿಮಟ್ಟಿ ರಸ್ತೆ ಬಳಿಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲಾಯಿತು .

RELATED ARTICLES

LEAVE A REPLY

Please enter your comment!
Please enter your name here

Most Popular