ಚಿಕ್ಕಬಳ್ಳಾಪುರ : ಕೆರೆ ಕಟ್ಟೆಗೆ ಕಾರು ಡಿಕ್ಕಿ ಹೊಡೆದು ರಭಸಕ್ಕೆ ಯುವ ಪತ್ರಕರ್ತ ಸ್ಥಳದಲ್ಲಿ ಸಾವನಪ್ಪಿದ ಘಟನೆ ಗುಡಬಂಡೆ ದಿಂದ ಬಾಗೇಪಲ್ಲಿಗೆ ತಿರುಳುತ್ತಿದ್ದ ವೇಳೆ ಮಾಚಹಳ್ಳಿ ಕೆರೆ ಬಳಿ ನಡೆದಿದೆ.
ಮೃತರನ್ನು ಯುವ ಪತ್ರಕರ್ತ ಜಿ .ಎಸ್ ಭರತ್ ಎಂದು ತಿಳಿದಿದೆ.
ಬೆಂಗಳೂರಿನಲ್ಲಿ ವಾಸವಿದ್ದ ಗುಡಿಬಳ್ಳಿ ಪಟ್ಟಣ ಮೂಲದ ಜಿ ಎಸ್ ಭರತ್, ಇತ್ತೀಚಿಗೆ ಬೆಳಗಾವಿ ಅಧಿವೇಶನದಲ್ಲಿ ಕ್ರಿಯಾಶೀಲ ಪತ್ರಕರ್ತ ಎಂದು ಹೆಸರು ಪಡೆದಿದ್ದರು.ಕಾರು ನಿಯಂತ್ರಣ ತಪ್ಪಿದ ಪರಿಣಾಮ ಮಾಚಹಳ್ಳಿ ಕೆರೆಕಟ್ಟೆಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಘಟನೆಯ ವೇಳೆ ಕಾರಿನಲ್ಲಿ ಹೇರ್ ಬ್ಯಾಗ್ ಓಪನ್ ಆದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ. ಇನ್ನು ಕಾರು ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರು ಸ್ಥಳದಲ್ಲಿ ನುಚ್ಚು-ಗುಜ್ಜು ಆಗಿದ್ದು ಕಾರಿನಲ್ಲಿದ್ದ ಭರತ್ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.
ಈ ಪ್ರಕರಣ ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು ಪ್ರಕರಣದ ತನಿಖೆ ನಡಿಯುತ್ತಿದೆ.