ಚಿಕ್ಕಬಳ್ಳಾಪುರ ; ಗೌರಿಬಿದನೂರು ತಾಲ್ಲೂಕಿನ ಚಿಕ್ಕಹೊಸಹಳ್ಳಿ ಗ್ರಾಮದಲ್ಲಿ ಕುಡಿದ ಅಮಲಿನಲ್ಲಿ ಮಗ ತನ್ನ ತಾಯಿಯನ್ನು ಕೊಲೆ ಮಾಡಿದ ಭೀಕರ ಘಟನೆ ನಡೆದಿದೆ.ಈ ಘಟನೆ ಮಂಗಳವಾರ ರಾತ್ರಿ 11 ಗಂಟೆಯ ಸುಮಾರಿಗೆ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನೂ ಪ್ರತಿನಿತ್ಯ ತಾಯಿ ಮಗ ಕುಡಿದು ಗಲಾಟೆ ಮಾಡಿಕೊಳ್ಳುತ್ತಿದ್ದು ತಾಯಿಯ ಅಕ್ರಮ ಸಂಬಂಧ ವಿಚಾರವಾಗಿ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ.
ಮೃತ ಮಹಿಳೆರಾಮಾಂಜಿನಮ್ಮ (55) ಎಂಬವರು, ತಮ್ಮ 27 ವರ್ಷದ ಮಗ
ಚಂದ್ರಶೇಖರ್‌ನಿಂದ ಸಾವನ್ನಪ್ಪಿದ್ದಾರೆ. ಚಂದ್ರಶೇಖರ್ ಕುಡಿತದ ಚಟಕ್ಕೆ ದಾಸನಾಗಿದ್ದನ್ನು. ಇನ್ನೂ ಕಳೆದ ರಾತ್ರಿ ಗಂಡ ಕಳೆದುಕೊಂಡಿದ್ದ ತಾಯಿಯ ಅಕ್ರಮ ವಿಚಾರಕ್ಕೆ ಪ್ರತಿ ದಿನ ತಾಯಿ-ಮಗ ನಡುವೆ ಗಲಾಟೆ ನಡೆಯುತ್ತಿತ್ತು. ಘಟನೆ ನಡೆದ ರಾತ್ರಿ, ಚಂದ್ರಶೇಖರ್ ಕುಡಿದ ಅಮಲಿನಲ್ಲಿ ತಾಯಿಗೆ ಹೊಡೆಯುವುದಾಗಿ ಬೆದರಿಸಿ, ಇಬ್ಬರ ನಡುವೆ ಜಗಳ ಶುರುವಾಗಿದೆ.ಇದೇ ವೇಳೆ ಮಗ ಪಕ್ಕದಲ್ಲಿದ್ದ ಕಲ್ಲಿನಿಂದ ತಲೆಗೆ ಬಾರಿಸಿದ್ದಾನೆ. ತಲೆಗೆ ಬಿದ್ದ ಗಂಭೀರ ಪೆಟ್ಟಿನಿಂದ ತಾಯಿ ಸಳದಲಿಯೇ ಮತಪಟ್ಟಿದ್ದಾರೆ.
ಚಂದ್ರಶೇಖರ್ ಅವರಿಗೆ ಎರಡು ಮಕ್ಕಳು ಇದ್ದು, ಇವರ ಕುಡಿತದ ಚಟಕ್ಕೆ ಬೇಸತ್ತು, ಅವರ ಪತ್ನಿ ಗಂಡನನ್ನು ಬಿಟ್ಟು ಹೋಗಿದ್ದಾಳೆ. ತಾಯಿ ಮತ್ತು ಮಗನ ನಡುವಿನ ಗಲಾಟೆಗೆ ಅಕ್ರಮ ಸಂಬಂಧದ ವಿಚಾರ ಕಾರಣವಾಗಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಎಸ್ ಪಿ ಕುಶಾಲ್ ಚೌಕ್ಸೆ, ಗೊರಿಬಿದನೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.


