Thursday, July 23, 2026
Homeರಾಜ್ಯಗಂಗಾವತಿ : ಬಸವೇಶ್ವರರ ಅಶ್ವರೂಢ ಕಂಚಿನ ಪುತ್ಥಳಿಯ ಭವ್ಯ ಮೆರವಣಿಗೆ.

ಗಂಗಾವತಿ : ಬಸವೇಶ್ವರರ ಅಶ್ವರೂಢ ಕಂಚಿನ ಪುತ್ಥಳಿಯ ಭವ್ಯ ಮೆರವಣಿಗೆ.

ಗಂಗಾವತಿ : ನಗರದ ನೆಹರೂ ಉದ್ಯಾನವನದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಹತ್ತು ಅಡಿ ಎತ್ತರದ ಹಾಗೂ ಲಂಡನ್ ದೇಶದ ಥೇಮ್ಸ್ ನದಿ ದಂಡೆಯ ಮೇಲಿರುವ ಅಶ್ವರೂಢ ಬಸವೇಶ್ವರ ಮಾದರಿ ಪುತ್ಥಳಿಯನ್ನು ನಗರದಲ್ಲಿ ಶುಕ್ರವಾರ ಭವ್ಯ ಮೆರವಣಿಗೆ ಮೂಲಕ ತರಲಾಯಿತು.

ಸಿಬಿಎಸ್ ವೃತ್ತದಿಂದ ಆರಂಭವಾದ ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು. ಸಾಂಸ್ಕೃತಿಕ ಲೋಕದ ವಾತಾವರಣ ನಿಮರ್ಾಣವಾಗಿತ್ತು. ನಗರದ ಪ್ರಮುಖರಸ್ತೆ, ವೃತ್ತಗಳಲ್ಲಿ ತಳೀರು ತೋರಣ ಹಾಕಿ ಸಿಂಗಾರ ಮಾಡಲಾಗಿತ್ತು.

ಬಸವೇಶ್ವರ ಪುತ್ಥಳಿ ಮೆರವಣಿಗೆಯಲ್ಲಿ ನಾಡಿನ ಹೆಸರಾಂತ ಕವಿಗಳು, ಸಾಹಿತಿಗಳು, 12ನೇ ಶತಮಾನದ ಸಾಮಾಜ ಸುಧಾರಕರು, ಬಸವಣ್ಣನ ಸಮಕಾಲಿನ ಶರಣರು, ವಚನಕಾರರು, ನಾಡಿನ ಶಿಲ್ಪಕಲೆ ಬಿಂಬಿಸುವ ನೂರಾರು ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಯಿತು.

ಮುಖ್ಯವಾಗಿ ವೀರಶೈವ ಲಿಂಗಾಯತ ಸಮಾಜದ ಮಹಿಳಾ ಘಟಕ ಹಾಗೂ ಕದಳಿ ಮಹಿಳಾ ಘಟಕದ ಸದಸ್ಯೆಯರು 108ಕ್ಕೂ ಹೆಚ್ಚು ವಚನಕಾರರ ಗ್ರಂಥಗಳನ್ನು ತಲೆ ಮೇಲಿಸಿರಿಕೊಂಡು ಸಿಬಿಎಸ್ ವೃತ್ತದಿಂದ ಗಾಂಧಿ ವೃತ್ತದ ಮಾರ್ಗವಾಗಿ ಕೃಷ್ಣ ದೇವರಾಯ ವೃತ್ತದವರೆಗೂ ಮೆರವಣಿಗೆ ಮಾಡಿದರು.

ನಗರದ ವೃತ್ತಗಳಿಗೆ ವಿದ್ಯುತ್ ದೀಪದ ಅಲಂಕಾರ ಮಾಡಲಾಗಿತ್ತು. ಅಲ್ಲದೇ ಬಹುತೇಕ ವೃತ್ತಗಳಲ್ಲಿ ಆಕರ್ಷಕ ರಂಗೋಲಿ ಬಿಡಿಸಲಾಗಿತ್ತು. ರಸ್ತೆ ವಿಭಜಕಗಳಿಗೆ ಬಾಳೆಗಿಡಗಳನ್ನು ಕಟ್ಟಿ ಇಡೀ ನಗರದಲ್ಲಿ ಹಬ್ಬದ ವಾತಾವರಣ ನಿಮರ್ಾಣವಾಗುವಂತೆ ಮಾಡಲಾಗಿತ್ತು.

ಮೆರವಣಿಗೆಯ ಸಂದರ್ಭದಲ್ಲಿ ಬಾಯಾರಿಕೆ ನೀಗಿಸುವ ಉದ್ದೇಶಕ್ಕೆ ಜೈನ ಸಮಾಜದಿಂದ ಪಾನಕ, ಬ್ರಾಹ್ಮಣ ಸಮಾಜದಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ನ್ಯಾಯಾಲಯದ ಆವರಣದ ಮುಂದಿರುವ ಕೊಟ್ಟೂರು ಬಸವೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ ಐದು ಸಾವಿರ ಜನರಿಗೆ ಭೋಜದ ವ್ಯವಸ್ಥೆ ಮಾಡಲಾಗಿತ್ತು.

ಮಾಜಿಶಾಸಕರಾದ ಪರಣ್ಣ ಮುನವಳ್ಳಿ, ಜಿ. ವೀರಪ್ಪ, ಇತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular