ಗಂಗಾವತಿ : ನೀರಾವರಿ ಪ್ರದೇಶಗಳಾದ ಗಂಗಾವತಿ, ಕಾರಟಗಿ ತಾಲ್ಲೂಕಿನಲ್ಲಿ ಬೆಳೆದಿದ್ದ ಅಪಾರ ಪ್ರಮಾಣದ ಭತ್ತದ ಬೆಳೆ ಅಕಾಲಿಕ ಮಳೆಯಿಂದಾಗಿ ಹಾನಿಗೀಡಾಗಿದ್ದು, ಕೂಡಲೆ ರಾಜ್ಯ ಸಕರ್ಾರ ನೂರು ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ಸಂಸದ ಕರಡಿ ಸಂಗಣ್ಣ ಒತ್ತಾಯಿಸಿದ್ದಾರೆ.
ಶುಕ್ರವಾರ ಗಂಗಾವತಿ ಮತ್ತು ಕನಕಗಿರಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಸಂಚರಿಸಿ ಮಳೆ-ಗಾಳಿಗೆ ಹಾನಿಗೀಡಾದ ಭತ್ತದ ಬೆಳೆಯ ಹೊಲ-ಗದ್ದೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ರೈತರೊಂದಿಗೆ ಚಚರ್ಿಸಿ ಹಾನಿಯ ಪ್ರಮಾಣ ತಿಳಿದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ, ಕೇವಲ ಹತ್ತು ದಿನಗಳು ಬಿಟ್ಟಿದರೆ ಭತ್ತದ ಬೆಳೆ ಕಟಾವು ಮಾಡಲಾಗುತ್ತಿತ್ತು. ಸಂಫೂರ್ಣ ಬೆಳೆದು ನಿಂತಿದ್ದ ಭತ್ತ ಮಳೆ-ಗಾಳಿಗೆ ಹಾನಿಯಾಗಿದೆ. ಶೇ.90ರಷ್ಟು ಹಾನಿಯಾಗಿದ್ದು ಬೆಳೆ ಸಂಪೂರ್ಣ ನಾಶವಾಗಿದೆ.
ಹೀಗಾಗಿ ಕೂಡಲೆ ರಾಜ್ಯ ಸಕರ್ಾರ ರೈತರ ನೆರವಿಗೆ ಧಾವಿಸಬೇಕು, ತಕ್ಷಣ ನೂರು ಕೋಟಿ ರೂಪಾಯಿ ಪರಿಹಾರ ಒದಗಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸ್ಥಳಕ್ಕೆ ಭೇಟಿ ನೀಡಿ ಸಕರ್ಾರಕ್ಕೆ ವರದಿ ನೀಡಿ ತಕ್ಷಣ ಪರಿಹಾರ ಬಿಡುಗಡೆಗೆ ಯತ್ನಿಸಬೇಕು ಎಂದು ಒತ್ತಾಯಿಸಿದರು.
ಸಧ್ಯಕ್ಕೆ ಕೃಷಿ ಮತ್ತು ಕಂದಾಯ ಇಲಾಖೆ ನಡೆಸಿದ ಜಂಟಿ ಸಮೀಕ್ಷೆಯ ಪ್ರಾಥಮಿಕ ವರದಿ ಪ್ರಕಾರ 3543 ಹೆಕ್ಟೇರು ಪ್ರದೇಶದಲ್ಲಿನ ಭತ್ತ ಹಾನಿಯಾಆಗಿದೆ ಎಂಬ ಮಾಹಿತಿ ಲಭಿಸಿದೆ. ಇನ್ನು ಸಮೀಕ್ಷೆ ನಡೆಯುತ್ತಿದ್ದು ಜಿಪಿಎಸ್ ನಡೆಯುತ್ತಿದೆ. ಬಳಿಕ ನಿಖರ ಮಾಹಿತಿ ಸಿಗಲಿದೆ ಎಂದರು.
ಬಂಪರ್ ಬೆಳೆ ಬಂದಿತ್ತು. ಆದರೆ ಮಳೆಯಿಂದಾಗಿ ಕೈಗೆ ಬಂದ ತುತ್ತು, ಬಾಯಿಗೆ ಬಾರದ ಸ್ಥಿತಿ ನಿಮರ್ಾಣವಾಗಿದೆ. ಪ್ರಕೃತಿ ವಿರುದ್ಧ ನಾವೇನು ಮಾಡಲಾಗದು. ಹೀಗಾಗಿ ರೈತರು ತಾಳ್ಮೆ ವಹಿಸಬೇಕು ಎಂದು ಸಂಸದ ಕರಡಿ ಸಂಗಣ್ಣ ಮನವಿ ಮಾಡಿದರು.
ಪ್ರಕೃತಿ ವಿಕೋಪದಡಿ ಒಣಭೂಮಿಯಲ್ಲಿನ ಬೆಳೆಗೆ ರೂ, 12,500, ನೀರಾವರಿ 18 ಸಾವಿರ ತೋಟಗಾರಿಕೆ ಬೆಳೆಯಾಗಿದ್ದರೆ ಪ್ರತಿ ಹೆಕ್ಟೇರಿಗೆ ತಲಾ 25 ಸಾವಿರ ರೂಪಾಯಿ ಪರಿಹಾರ ಧನ ಸಿಗಲಿದೆ ಎಂದರು. ಒಂದು ಕಡೆ ಅಧಿಕಾರಿಗಳು ಸಮೀಕ್ಷೆ ಮಾಡಲಿ. ಮತ್ತೊಂದು ಕಡೆ ನಮ್ಮ ಪಕ್ಷದ ಪ್ರಮುಖರು ಸಮೀಕ್ಷೆ ಮಾಡಲಿದ್ದಾರೆ ಎಂದರು.


