Sunday, January 25, 2026
Flats for sale
Homeರಾಶಿ ಭವಿಷ್ಯಕೋಲಾರ ; ರಾಜ್ಯದಲ್ಲಿ ಯುಗಾದಿ ನಂತರ‌ ಒಳ್ಳೆ ಮಳೆ-ಬೆಳೆಯಾಗುವ ಲಕ್ಷಣಗಳಿದ್ದು,ಮತಾದಂತೆ‌ ಹೆಚ್ಚಾಗಿ ಧಾರ್ಮಿಕ ಮುಖಂಡನ ಸಾವಾಗಲಿದೆ...

ಕೋಲಾರ ; ರಾಜ್ಯದಲ್ಲಿ ಯುಗಾದಿ ನಂತರ‌ ಒಳ್ಳೆ ಮಳೆ-ಬೆಳೆಯಾಗುವ ಲಕ್ಷಣಗಳಿದ್ದು,ಮತಾದಂತೆ‌ ಹೆಚ್ಚಾಗಿ ಧಾರ್ಮಿಕ ಮುಖಂಡನ ಸಾವಾಗಲಿದೆ : ಕೋಡಿ ಮಠದ ಸ್ವಾಮೀಜಿಯಾ ಸ್ಫೋಟಕ ಭವಿಷ್ಯ.

ಕೋಲಾರ ; ತಟ್ ಅಂತ ಹೇಳಿ ಎಂಬ ಮಾತು ನೆನಪಾಗುವಷ್ಟರಲ್ಲಿ ಕೊಡಿ ಮಠದ ಸ್ವಾಮಿಗಳು ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ಯುಗಾದಿ ಕಳೆದ ನಂತರ‌ ರಾಜ್ಯದಲ್ಲಿ ಒಳ್ಳೆ ಬೆಳೆ ಮತ್ತು ಮಳೆಯಾಗುವ ಲಕ್ಷಣಗಳಿವೆ ಎಂದು ಸದ್ಯ ಮಳೆ-ಬೆಳೆ ಇಲ್ಲದೇ ಕಂಗಾಲಾಗಿರುವ ರೈತರಿಗೆ ಒಂದು ಸಮಾಧಾನಕರ ಭವಿಷ್ಯವೊಂದನ್ನು ಹೇಳಿದ್ದಾರೆ. ಅಲ್ಲದೇ ಬಾಂಬ್ ಸ್ಫೋಟ, ಭೂಕಂಪ ಆಗುತ್ತೆ ಮತಾದಂತೆ‌ ಹೆಚ್ಚಾಗುತ್ತದೆ, ಧಾರ್ಮಿಕ ಮುಖಂಡನ ಸಾವು ಸಹ ಆಗಲಿದೆ ಎಂದು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ.

ಕೋಲಾರದ ಜಿಲ್ಲೆ‌ ಮಾಲೂರು ಪಟ್ಟಣದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಕೋಡಿ ಮಠದ ಡಾ.ಶಿವನಂದ‌ ಶಿವಯೋಗಿ ಸ್ವಾಮೀಜಿ, ಜಾಗತಿಕ ಮಟ್ಟದಲ್ಲಿ ತೊಂದರೆ ಇದೆ. ಬೆಂಕಿ ಹಾವಳಿ,ನೀರಿನ ಹಾವಳಿ, ಯುದ್ದ‌ ಆಗುತ್ತೆ. ಅನೇಕ‌ ಸಾವು ನೋವುಗಳು ಆಗುತ್ತೆ. ಮತಾದಂತೆ‌ ಹೆಚ್ಚಾಗುತ್ತದೆ ಎಂದು ಹೇಳಿದರು.ಯುಗಾದಿ ಕಳೆದ ನಂತರ‌ ರಾಜ್ಯದಲ್ಲಿ ಒಳ್ಳೆ ಬೆಳೆ ಮತ್ತು ಮಳೆಯಾಗುವ ಲಕ್ಷಣಗಳಿವೆ ಎಂದು ಭವಿಷ್ಯ ನುಡಿದರು. ಇನ್ನು ಇದೇ ವೇಳೆ ಗ್ಯಾರೆಂಟ್ ಗಳಿಂದ‌ ಸರ್ಕಾರ ನಡೆಯುತ್ತಿದ್ದೀಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು ಈ ಬಗ್ಗೆ ಯುಗಾದಿ ಕಳೆದ ನಂತರ ಹೇಳುವೆ, ಇನ್ನ ಸಾಕಷ್ಟು ಸಮಯವಿದೆ ಎಂದರು.

2024ರ ಹೊಸ ವರ್ಷದ ಆರಂಭದಲ್ಲಿ ಭವಿಷ್ಯ ನುಡಿದಿದ್ದ ಕೋಡಿಶ್ರೀ, ಜಗತ್ತಿನ ದೊಡ್ಡ ಸಂತರು ಕೊಲೆಯಾಗುತ್ತಾರೆ, ಜಗತ್ತಿನಲ್ಲಿ ಒಂದೆರಡು ಪ್ರಧಾನಿಗಳಿಗೆ ಸಾವಾಗುವ ಲಕ್ಷಣ ಅಸ್ಥಿರತೆ, ಯುದ್ಧ ಭೀತಿ. ಅಣು ಬಾಂಬ್ ಸ್ಫೋಟವಾಗುವ ಸಾಧ್ಯತೆಗಳಿವೆ. ಜಗತ್ತಿಗೆ ವಿನಾಶ ಕಾದಿದೆ. ರೋಗ, ಸುನಾಮಿ ಸಂಭವಿಸಲಿದೆ. ಮತೀಯ ಸಮಸ್ಯೆಯಿಂದ ಜನರು ದುಃಖ ಅನುಭವಿಸುತ್ತಾರೆ. ಎಂದು ಹೇಳಿದ್ದರು.ಈ ಬಗ್ಗೆ ದೈವ ನಂಬುವುದೊಂದೆ ಪರಿಹಾರ. ದೈವ ಮೊರೆ ಹೋಗ್ಬೇಕು ಎಂದು ಹೇಳಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular