Thursday, March 12, 2026
Flats for sale
Homeರಾಜ್ಯಕೊಪ್ಪಳ : ಭೂಮಿಯಿಂದ ರಾಕೆಟ್ ಮೂಲಕ ಚಂದ್ರನಿಗೆ ರಾಖಿ ರವಾನೆ.

ಕೊಪ್ಪಳ : ಭೂಮಿಯಿಂದ ರಾಕೆಟ್ ಮೂಲಕ ಚಂದ್ರನಿಗೆ ರಾಖಿ ರವಾನೆ.

ಕೊಪ್ಪಳ : ಇತ್ತೀಚೆಗಷ್ಟೆ ಚಂದ್ರಯಾನ-3 ಯೋಜನೆ ಕೈಗೊಂಡಿದ್ದನ್ನು ಸ್ವಾಗತಿಸಿ ಕಾರಟಗಿ ತಾಲೂಕಿನ ರವಿನಗರದ ರೆಡ್ಡಿ ವೀರಣ್ಣ ಸಂಜೀವಪ್ಪ ಶಾಲೆಯ ಮಕ್ಕಳು, ರಕ್ಷಾ ಬಂಧನ ಹಬ್ಬದ ಅಂಗವಾಗಿ ಭೂಮಿ ಮತ್ತು ಚಂದ್ರನ ಮಧ್ಯೆ ಬಾಂಧವ್ಯ ಬೆಸೆಯುವ ಯತ್ನ ಮಾಡಿದರು.

ಇಸ್ರೋ ವಿಜ್ಞಾನಿಗಳ ಸಾಧನೆ ಮತ್ತು ರಕ್ಷಾ ಬಂಧನದ ಮಹತ್ವ ಸಾರುವ ಉದ್ದೇಶದ ಹಿನ್ನೆಲೆಯಲ್ಲಿ ಶಾಲೆಯ ನೂರಾರು ಮಕ್ಕಳು ಇಸ್ರೋ ವಿಜ್ಞಾನಿಗಳ ಮೂಲಕ, ಭೂಮಿಯಿಂದ ರಾಕೆಟ್ಗೆ ರಾಖಿ ಕಟ್ಟಿ ಅದನ್ನು ಚಂದ್ರನಿಗೆ ತಲುಪಿಸುವ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.

ಕೆಲ ವಿದ್ಯಾರ್ಥಿಗಳು ರಾಕೆಟ್ ಮಾದರಿಯಲ್ಲಿ ನಿಂತರೆ, ರಾಖಿ ಮಾದರಿಯಲ್ಲಿ ಇನ್ನಷ್ಟು ಮಕ್ಕಳು, ಇಸ್ರೋ ಇಂಗ್ಲೀಷ್ ಅಲ್ಪಾಬೆಟಿಕ್ ಅಕ್ಷರದಲ್ಲಿ ಕೆಲ ಮಕ್ಕಳು ಸಾಲುಗಟ್ಟಿ ನಿಂತು ಗಮನ ಸೆಳೆದರು. ರಾಕೆಟ್, ರಾಖಿ ಆಕೃತಿಗಳ ರಚನಾ ಮಾದರಿಯಲ್ಲಿ ವಿನ್ಯಾಸಗೊಂಡ ಮಕ್ಕಳು ಜನರ ಗಮನ ಸೆಳೆದರು.

ಭೂಮಿ ಮತ್ತು ಚಂದ್ರ ಒಂದೇ ಸೌರಕುಟುಂಬದ ಗ್ರಹಳೆಂದು ಗುರುತಿಸಲಾಗಿದ್ದು ಅವುಗಳ ಮಧ್ಯೆ ಇರುವ ಬಾಂಧ್ಯವನ್ನು ರೂಪಿಸುವುದಕ್ಕಾಗಿ ಈ ಮಾದರಿಯನ್ನು ಮಕ್ಕಳಿಂದ ರಚನೆ ಮಾಡಿ ಅತ್ತ ಹಬ್ಬದ ಮಹತ್ವ ಸಾರುವುದು ಮತ್ತು ವಿಜ್ಞಾನಿಗಳಿಗೆ ಗೌರವ ಸಲ್ಲಿಸಲಾಗಿದೆ ಎಂದು ಗುರುಕುಲ ಮುಖ್ಯಸ್ಥೆ ಶ್ರೀದೇವಿ ಕೊಲ್ಲಾ ಇದೇ ಸಂದರ್ಭದಲ್ಲಿ ವಿವರಿಸಿದರು

RELATED ARTICLES

LEAVE A REPLY

Please enter your comment!
Please enter your name here

Most Popular