ಕುವೈಟ್ : ಕುವೈಟ್ ನಲ್ಲಿ ಪ್ರತಿಯೊಂದು ಮದುವೆಗೂ ಮುನ್ನ ವೈದ್ಯಕೀಯ ಪರೀಕ್ಷೆ ಕಡ್ಡಾಯ. ಈ ಕಾನೂನು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಎಂದು ಕುವೈತ್ ಆರೋಗ್ಯ ಸಚಿವ ಡಾ. ಅಲ್‌ಅಜರ್ ಅಲ್-ಸೌದ್ ತಿಳಿಸಿದ್ದಾರೆ.
ಹೊಸ ನಿಯಮಗಳು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ನಂತರ ಕಾನೂನು ಜಾರಿಗೆ ಬರಲಿದೆ.2008 ರ ಕಾಯಿದೆ ಸಂಖ್ಯೆ 31 ರ ಅಡಿಯಲ್ಲಿ ಪರಿಸ್ಕ್ರಿತ ನಿಯಮಗಳ ಪ್ರಕಾರ, ಮದುವೆಯಾಗಲು ಇಚ್ಛಿಸುವವ ಎರಡೂ ಕಡೆಯವರು ವೈದ್ಯಕೀಯ ಪರೀಕ್ಷಾ ಪ್ರಮಾಣಪತ್ರವನ್ನು ಹೊಂದಿರಬೇಕು. ಈ ಕಾನೂನು ಕುವೈತಿಗಳು ಮತ್ತು ವಲಸಿಗರಿಗೆ ಸಮಾನವಾಗಿ ಅನ್ವಯಿಸುತ್ತದೆ.
ಕಾನೂನು ಪ್ರಕಾರ ವಧುವರರಿಬ್ಬರೂ ಸ್ಥಳೀಯರಾಗಿರಬೇಕೆಂದು ಕಡ್ಡಾಯವಿಲ್ಲ, ಮತ್ತು ಒಬ್ಬರು ಸ್ಥಳೀಯರಾಗಿದ್ದರೂ ಅಥವಾ ಇಬ್ಬರೂ ವಲಸಿಗರಾಗಿದ್ದರೂ ಅದು ಅನ್ವಯಿಸುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ವೈದ್ಯಕೀಯ ಪರೀಕ್ಷಾ ಕಾರ್ಯವಿಧಾನಗಳನ್ನು ಮತ್ತಷ್ಟು ಸುಗಮಗೊಳಿಸಲು ಡಿಜಿಟಲ್ ಅಪ್ಲಿಕೇಶನ್‌ಗಳನ್ನು ಸೇರಿಸಲಾಗುವುದು ಎಂದು ಆರೋಗ್ಯ ಸಚಿವಾಲಯ ಘೋಷಿಸಿದೆ.
ಆರೋಗ್ಯ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸುವುದು, ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವುದು ಮತ್ತು ಆನುವಂಶಿಕ ಕಾಯಿಲೆಗಳು ಮತ್ತು ಸಾಂಕ್ರಾಮಿಕ ರೋಗಗಳ ಪ್ರಮಾಣವನ್ನು ಕಡಿಮೆ ಮಾಡುವ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.