Friday, March 13, 2026
Flats for sale
Homeಕ್ರೈಂಕಲಬುರಗಿ : ಸಿನಿಮೀಯ ರೀತಿಯಲ್ಲಿ ಬೈಕ್ ನಲ್ಲಿ ಚೇಸ್ ಮಾಡಿ ಬಸ್​ ಅಡ್ಡಗಟ್ಟಿ ಅಪ್ರಾಪ್ತೆಯ ಕತ್ತು...

ಕಲಬುರಗಿ : ಸಿನಿಮೀಯ ರೀತಿಯಲ್ಲಿ ಬೈಕ್ ನಲ್ಲಿ ಚೇಸ್ ಮಾಡಿ ಬಸ್​ ಅಡ್ಡಗಟ್ಟಿ ಅಪ್ರಾಪ್ತೆಯ ಕತ್ತು ಕೊಯ್ದ ಬಾಲಕರು!

ಕಲಬುರಗಿ : ಯುವಕರು‌ ಸಿನಿಮೀಯ ರೀತಿಯಲ್ಲಿ ಬೈಕ್ ನಲ್ಲಿ ಚೇಸ್ ಮಾಡಿ ಅಡ್ಡಗಟ್ಟಿ ಬಸ್‌ನಲ್ಲಿ ತೆರಳುತ್ತಿದ್ದ ಅಪ್ರಾಪ್ತೆಯ ಕತ್ತು ಕೊಯ್ದ ಘಟನೆ ಕಲಬುರಗಿ ಜಿಲ್ಲೆಯ ಅಟ್ಟೂರ ಕ್ರಾಸ್ ಬಳಿ ನಡೆದಿದೆ.

ಗಾಯಗೊಂಡ ಬಾಲಕಿಯನ್ನು ಅಂಬಿಕಾ ಕಾರಬಾರಿ ಎಂದು ತಿಳಿದುಬಂದಿದೆ.ಬೆಳಮಗಿ ಗ್ರಾಮದಿಂದ ವಿಕೆ ಸಲಗರದ ಗ್ರಾಮಕ್ಕೆ ಅಪ್ರಾಪ್ತೆ ಬಸ್ ನಲ್ಲಿ ತೆರಳುವಾಗ ಈ ದಾಳಿ ಮಾಡಿದ್ದಾರೆ. ಅಪ್ರಾಪ್ತ ಬಾಲಕಿಯ ಕತ್ತು ಸೀಳಿರುವುದರಿಂದ ಆಕೆಯನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಹಾಡಹಗಲೇ ಸಾರ್ವಜನಿಕ ಸ್ಥಳದಲ್ಲಿ ಬಾಲಕಿ ಮೇಲೆ ದಾಳಿ ಮಾಡಿರುವುದು ಪೋಷಕರಲ್ಲಿ ಆತಂಕವ ಹೆಚ್ಚಿಸಿದೆ.

ಆರೋಪಿಗಳು ಅಪ್ರಾಪ್ತ ಬಾಲಕರಾದ ಚನ್ನವೀರ ಮತ್ತು ಆತನ ಸ್ನೇಹಿತ ಎಂದು ತಿಳಿದುಬಂದಿದೆ. ಅದೃಷ್ಟವಶಾತ್‌ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದುಈ ಕುರಿತು ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular