Thursday, March 12, 2026
Flats for sale
Homeವಿದೇಶಕಜಾನ್ : 5 ವರ್ಷಗಳ ನಂತರ ಉಭಯ ದೇಶಗಳ ನಾಯಕರು ಮೋದಿ-ಜಿನ್‌ಪಿಂಗ್ ಮಾತುಕತೆ..!

ಕಜಾನ್ : 5 ವರ್ಷಗಳ ನಂತರ ಉಭಯ ದೇಶಗಳ ನಾಯಕರು ಮೋದಿ-ಜಿನ್‌ಪಿಂಗ್ ಮಾತುಕತೆ..!

ಕಜಾನ್ : ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಬ್ರಿಕ್ಸ್ ಸಭೆಯ ಸಂದರ್ಭದಲ್ಲಿ ಬುಧವಾರ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಈ ನೆರೆದೇಶಗಳ ನಾಯಕರ ನಡುವೆ ಐದು ವರ್ಷಗಳ ನಂತರ ಮಾತುಕತೆ ನಡೆದಿದೆ. ಅವರಿಬ್ಬರೂ ೨೦೧೯ರಲ್ಲಿ ತಮಿಳುನಾಡಿನ ಮಾಮಲ್ಲಪುರಂನಲ್ಲಿ ಚರ್ಚಿಸಿದ್ದೇ ಅಂತಿಮ. ನಂತರ ಹಲವು ಪ್ರಮುಖ ಸಮ್ಮೇಳನಗಳಲ್ಲಿ ಇಬ್ಬರೂ ಭೇಟಿಯಾಗಿದ್ದರೂ, ಕೇವಲ ಕುಶಲೋಪರಿಗಷ್ಟೇ ಅವರ ಮಾತು ಸೀಮಿತವಾಗಿತ್ತು.

2020 ರಲ್ಲಿ ಗಡಿಯಲ್ಲಿ ಬಿಕ್ಕಟ್ಟು ಉಲ್ಬಣಗೊಂಡ ನಂತರ ಮೊದಲ ಬಾರಿ ಸೇರಿರುವ ಉಭಯ ದೇಶಗಳ ನಾಯಕರು, ಈಗ ಎಲ್‌ಎಸಿ ಗಡಿಯಲ್ಲಿ ಗಸ್ತು ವ್ಯವಸ್ಥೆಗೆ ಆಗಿರುವ ಒಪ್ಪಂದವನ್ನು ಸ್ವಾಗತಿಸಿದ್ದಾರೆ. ಗಸ್ತುವ್ಯವಸ್ಥೆಯ ಒಪ್ಪಂದ ರಾಜತಾಂತ್ರಿಕ ಮತ್ತು ಮಿಲಿಟರಿ ನಾಯಕರ ಹಲವು ಸುತ್ತಿನ ಮಾತುಕತೆ ನಂತರ ಹೊರಹೊಮ್ಮಿದೆ.

ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದಂತೆ ಚರ್ಚಿಸಲು ಅಜಿತ್ ದೋವಲ್ ಮತ್ತು ವಾಂಗ್‌ಯಿ ಅವರಿಗೆ ಈ ಸಂದರ್ಭದಲ್ಲಿ ನಿರ್ದೇಶಿಸಲಾಗಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಮಿಸ್ರಿ ತಿಳಿಸಿದ್ದಾರೆ.

ಬೆಂಬಲ ಇಲ್ಲ: ಇದಕ್ಕೂ ಮೊದಲು ಶೃಂಗಸಭೆಯ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಮೋದಿ,
ರಾಜತಾಂತ್ರಿಕತೆ ಮತ್ತು ಮಾತುಕತೆಗೆ ಭಾರತದ ಬೆಂಬಲವೇ ಹೊರತು ಯುದ್ಧಕ್ಕಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular