Monday, October 20, 2025
Flats for sale
Homeವಿದೇಶಓಸ್ಲೋ ; ಹೋರಾಟಗಾರ್ತಿ ಮರಿಯಾಗೆ ಶಾಂತಿ ಪ್ರಶಸ್ತಿ, ನೊಬೆಲ್‌ಗೆ ಅಂಗಲಾಚಿದ್ದ ಟ್ರಂಪ್‌ಗೆ ಮುಖಭಂಗ, ಕೊನೆಗೂ ನಿರಾಶೆ..!

ಓಸ್ಲೋ ; ಹೋರಾಟಗಾರ್ತಿ ಮರಿಯಾಗೆ ಶಾಂತಿ ಪ್ರಶಸ್ತಿ, ನೊಬೆಲ್‌ಗೆ ಅಂಗಲಾಚಿದ್ದ ಟ್ರಂಪ್‌ಗೆ ಮುಖಭಂಗ, ಕೊನೆಗೂ ನಿರಾಶೆ..!

ಓಸ್ಲೋ (ನಾರ್ವೆ ರಾಜಧಾನಿ) : ಭಾರತ-ಪಾಕ್ ಸಮರವನ್ನೂ ಒಳಗೊಂಡು ಒಟ್ಟು 8 ಯುದ್ಧ ನಿಲ್ಲಿಸಿರುವ ನಾನು ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹ ಎಂದು ನೂರೆಂಟು ಬಾರಿ ಹೇಳಿಕೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕೊನೆಗೂ ನಿರಾಶೆಯಾಗಿದೆ.

2025 ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ವೆನೆಜುವೆಲಾ ವಿರೋಧ ಪಕ್ಷದ ನಾಯಕಿ ಮರಿಯಾ ಕೊರಿನಾ ಮಚಾಡೋ ಅವರಿಗೆ ನೀಡಲಾಗಿದೆ. ಮಚಾಡೋ ಅವರು ತಮ್ಮ ದೇಶದಲ್ಲಿ ಪ್ರಜಾತಾಂತ್ರಿಕ ಹಕ್ಕುಗಳ ಸ್ಥಾಪನೆ, ನಾಗರಿಕ ಹಕ್ಕುಗಳ ಪರ ಹೋರಾಟ ಮತ್ತು ದೀರ್ಘಕಾಲ ಶಾಂತಿಯುತ ರಾಜಕೀಯ ಪರಿವರ್ತನೆಗಾಗಿ ನಡೆಸಿದ ಹೋರಾಟ ಹಾಗೂ ಅಂತಾರಾಷ್ಟಿçÃಯ ಭ್ರಾತೃತ್ವ ಭಾವನೆ ಮೂಡಿಸಲು ಕೈಗೊಂಡ ಕ್ರಮಗಳನ್ನು ಪರಿಗಣಿಸಿ ಈ ಪ್ರಶಸ್ತಿ ಫೋಷಿಸಲಾಗಿದೆ.

ಮಚಾಡೋ ಯಾರು?
ವೆನೆಜುಲ ಪ್ರಜಾತಂತ್ರಹೋರಾಟಗಾರ್ತಿ ರಾಷ್ಟಿçÃಯ ಸಭೆಯ ಸದಸ್ಯೆಯಾಗಿದ್ದರು ಮದುರೊ ಸರ್ಕಾರದ ವಿರುದ್ಧ ಬಹುಕಾಲದಿಂದ ಹೋರಾಟ ನಡೆಸುತ್ತಿದ್ದಾರೆ.ಸದ್ಯ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ದ್ದಾರೆ, ರಹಸ್ಯ ಸ್ಥಳದಲ್ಲಿ ವಾಸವಿದ್ದಾರೆ.ಇವರ ಸಹವರ್ತಿಗಳ ಬಂಧಿಸಲಾಗಿದೆ

ನಾರ್ವೆಯ ನೊಬೆಲ್ ಸಮಿತಿಯು ಶುಕ್ರವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ `ಮರಿಯಾಕೊರಿನಾ ಮಚಾಡೋ ಅವರು ವೆನೆಜುವೆಲಾದ ಜನರ ಪ್ರಜಾತಾಂತ್ರಿಕ ಹಕ್ಕುಗಳು ಮತ್ತು ಶಾಂತಿಗಾಗಿ ಹೋರಾಡಿದ ಧೈರ್ಯಶಾಲಿ ನಾಯಕಿ. ಅವರು ಶಾಂತಿಯುತ ಮಾರ್ಗಗಳ ಮೂಲಕ ಜನರ ಸ್ವಾತಂತ್ರ‍್ಯ ಹಾಗೂ ನ್ಯಾಯಕ್ಕಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ನೊಬೆಲ್ ಸಮಿತಿ ಅಧ್ಯಕ್ಷ ಜೋರ್ಗನ್ ವಾಂಟೆ ಫ್ರೆಂಡಾನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2025 ರ ಶಾಂತಿ ನೊಬೆಲ್ ಪ್ರಶಸ್ತಿಗೆ ಒಟ್ಟು 338 ನಾಮ ನಿರ್ದೇಶನಗಳು ಸಲ್ಲಿಸಲ್ಪಟ್ಟಿದ್ದವು. ಈ ಪೈಕಿ 94 ಸಂಸ್ಥೆಗಳು ಸೇರಿವೆ. ಉಳಿದಂತೆ 244ವೈಯಕ್ತಿಕ ಅರ್ಜಿಗಳಿದ್ದವು. ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ನೊಬೆಲ್ ಪ್ರಶಸ್ತಿ ಕೈ ತಪ್ಪಿರುವುದನ್ನು ತೀವ್ರವಾಗಿ ಟೀಕಿಸಿರುವ ವೈಟ್ ಹೌಸ್, ಶಾಂತಿಗಿAತ ಅವರಿಗೆ ರಾಜಕೀಯವೇ ಮುಖ್ಯವಾಗಿದೆ. ಹಾಗಾಗಿ ಟ್ರಂಪ್ ಹೆಸರನ್ನು ಕೈಬಿಟ್ಟಿದ್ದಾರೆ. ಆದರೂ ನಮ್ಮ ಅಧ್ಯಕ್ಷ ಟ್ರಂಪ್ ಶಾಂತಿ ಸಂಧಾನ ಮಾಡುತ್ತಲೇ ಇರುತ್ತಾರೆ, ಜನರ ಜೀವ ಉಳಿಸುತ್ತಲೇ ಇರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular