ಬೆಂಗಳೂರು:2024 ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಐಪಿಎಲ್) ಮಿನಿ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಐಪಿಎಲ್ ಫ್ರಾಂಚೈಸಿಗಳು ಆಟಗಾರರರನ್ನು ಉಳಿಸಿಕೊಳ್ಳುವ ಹಾಗೂ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ ಸಿದ್ಧಪಡಿಸಿ ಬಿಸಿಸಿಐಗೆ ಸಲ್ಲಿಸಿವೆ.
ಗುಜರಾತ್ ಟೈಟನ್ಸ್ ತಂಡ ಅಲ್ಜಾರಿ ಜೋಸೆಫ್, ದಸುನ್ ಶನಕ ಸೇರಿದಂತೆ ಒಟ್ಟು ಒಂಬತ್ತು ಆಟಗಾರರನ್ನು ಬಿಡುಗಡೆ ಮಾಡಿದೆ. ಆದರೆ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಳ್ಳುತ್ತಾರೆಂದು ಹೇಳಲಾಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಉಳಿಸಿಕೊಂಡಿದೆ.
ಆರ್‌ಸಿಬಿ ತಂಡ ವನಿಂದು ಹಸರಂಗ ಮತ್ತು ಜೋಶ್ ಹೇಜಲ್‌ವುಡ್ ಸೇರಿದಂತೆ ೧೧ ಆಟಗಾರರನ್ನು ತಂಡದಿAದ ಕೈಬಿಟ್ಟಿದೆ. ಫಾಫ್ಡು ಪ್ಲೆಸಿಸ್ ನಾಯಕನಾಗಿ ಮುಂದುವರಿಯಲಿದ್ದು,ವಿರಾಟ್ ಕೊಹ್ಲಿ ಅವರನ್ನು ಉಳಿಸಿಕೊಂಡಿದೆ.
ಧೋನಿ ಆಡಲಿದ್ದು, ನಾಯಕ ಚೆನ್ನೆöÊ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಕರ್ಷಣೆಯಾಗಲಿದ್ದಾರೆ.
ಫ್ರಾಂಚೈಸಿಗಳು ಉಳಿಸಿಕೊಂಡ ಹಾಗೂ ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಲು ಭಾನುವಾರ (ನ 26) ಕೊನೆಯ ದಿನವಾಗಿತ್ತು. ರಾಯಲ್ ಚಾಲೆಂಜರ್ಸ್ ಬೆAಗಳೂರು ತಂಡ ಸೇರಿದಂತೆ ಎಲ್ಲ ಹತ್ತು ತಂಡಗಳು ಬಿಸಿಸಿಐಗೆ ಪಟ್ಟಿ ನೀಡಿವೆ.
ಮುಂಬೈ ಇಂಡಿಯನ್ಸ್: ಜೋಪ್ರಾ ಆರ್ಚರ್, ಟ್ರಿಸ್ಟಾನ್ ಸ್ಟಬ್ಸ್ ಸೇರಿದಂತೆ ಒಟ್ಟು ಹನ್ನೊಂದು ಆಟಗಾರರನ್ನು ಬಿಡುಗಡೆ ಮಾಡಿದ್ದು, ತನ್ನ ನಾಯಕ ರೋಹಿತ್ ಶರ್ಮಾ ಅವರನ್ನು ಉಳಿಸಿಕೊಂಡಿದೆ.
ಕೋಲ್ಕತ್ತಾ ನೈಟ್ ರೈಡರ್ಸ್: ಶಕೀಬ್ ಅಲ್ ಹಸನ್, ಲಿಟ್ಟನ್ ದಾಸ್, ಶಾರ್ದೂಲ್ ಠಾಕೂರ್, ಲಾಕಿ ಫರ್ಗುಸನ್, ಟಿಮ್ ಸೌಥಿ ಸೇರಿದಂತೆ ಒಟ್ಟು ಹನ್ನೊಂದು ಆಟಗಾರರನ್ನು ಬಿಡುಗಡೆ ಮಾಡಿದೆ.
ಚೆನ್ನೈ ಸೂಪರ್ ಕಿಂಗ್ಸ್: ಅಂಬಟಿ ರಾಯುಡು, ಕೈಲ್ ಜೇಮಿಸನ್,ಬೆನ್ ಸ್ಟೋಕ್ಸ್ ಸೇರಿದಂತೆ ಒಟ್ಟು ಎಂಟು ಆಟಗಾರರನ್ನು ಬಿಡುಗಡೆ ಮಾಡಿದೆ.
ಪಂಜಾಬ್ ಕಿಂಗ್ಸ್: ಭಾನುಕಾ ರಾಜಪಕ್ಸೆ, ಶಾರುಖ್ ಖಾನ್ ಸೇರಿದಂತೆ ಒಟ್ಟು ಐದು ಆಟಗಾರರನ್ನು ಬಿಡುಗಡೆ ಮಾಡಿದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ, ರಿಲೀ ರೊಸ್ಸೌ, ರೋವ್‌ಮನ್ ಪೊವೆಲ್, ಮನೀಶ್ ಪಾಂಡೆ, ಫಿಲ್ ಸಾಲ್ಟ್, ಮುಸ್ತಾಫಿಜುರ್ ರೆಹಮಾನ್, ಸರ್ಫರಾಜ್ ಖಾನ್ ಸೇರಿದಂತೆ ಹನ್ನೊಂದು ಆಟಗಾರರನ್ನು ಕೈಬಿಟ್ಟಿದೆ.