Saturday, July 25, 2026
Homeಜಿಲ್ಲೆಉಳ್ಳಾಲ: ಅಕ್ರಮ ಮರಳು ದಾಸ್ತಾನು, ಸಾಗಾಟ ಪತ್ತೆ.

ಉಳ್ಳಾಲ: ಅಕ್ರಮ ಮರಳು ದಾಸ್ತಾನು, ಸಾಗಾಟ ಪತ್ತೆ.

ಉಳ್ಳಾಲ :  ಅಕ್ರಮ ಮರಳು ದಾಸ್ತಾನು ಹಾಗೂ ಅಕ್ರಮ ಮರಳು ಸಾಗಾಟದ ಎರಡು ಪ್ರಕರಣಗಳನ್ನು ಉಳ್ಳಾಲ ಪೊಲೀಸರು ಪತ್ತೆ ಹಚ್ಚಿದ್ದಾರೆ. ಸುಳಿವಿನ ಮೇರೆಗೆ ಆಗಸ್ಟ್ 24 ಗುರುವಾರ ಬೆಳ್ಳಂಬೆಳಗ್ಗೆ ಪೆರ್ಮನ್ನೂರು ಗ್ರಾಮದ ಕಲ್ಲಾಪು ಎಂಬಲ್ಲಿನ ಸ್ಥಳದಲ್ಲಿ ದಾಳಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಅಕ್ರಮವಾಗಿ ಮರಳು ಸಾಗಿಸಲು ಬಳಸುತ್ತಿದ್ದ ಪಿಕ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಕೋಟೆಪುರದ ನೇತ್ರಾವತಿ ನದಿ ದಡದಲ್ಲಿ ಸಂಗ್ರಹಿಸಿಟ್ಟಿದ್ದ 12 ಲಾರಿ ಲೋಡ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ.

ಅಗತ್ಯ ಕ್ರಮ ಕೈಗೊಳ್ಳಲು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ವರದಿ ಸಲ್ಲಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular