ಉಡುಪಿ : ಕಾಂತಾರ ಚಿತ್ರದ ನಟ, ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಸಾವನಪ್ಪಿದ್ದು ತಿಳಿದ ವಿಚಾರ ಆದರೆ ರಾಕೇಶ್ ಪೂಜಾರಿ ಮನೆಗೆ ಭೇಟಿ ನೀಡದ ಹಿನ್ನೆಲೆ ರಿಷಬ್ ಶೆಟ್ಟಿ ವಿರುದ್ಧ ಸಾಮಾಜಿಕಜಾಲತಾಣದಲ್ಲಿ ಹಲವರು ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ.





ಕಾಂತಾರ ಚಾಪ್ಟರ್ 1 ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದ ರಾಕೇಶ್ ಪೂಜಾರಿ ತನ್ನ ಚಿತ್ರತಂಡದ ಕಲಾವಿದನ ಅಂತಿಮ ದರ್ಶನ ಪಡೆಯಲು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಭೇಟಿ ನೀಡದ ಹಿನ್ನೆಲೆ ರಾಕೇಶ್ ಅಗಲಿ ಎರಡು ದಿನ ಕಳೆದರೂ ಈ ಹಿನ್ನಲೆ ಸಾಮಾಜಿಕ ಜಾಲತಾಣಗಳಲ್ಲಿ ರಿಷಬ್ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. “ಕಲಾವಿದನಿಗಿಂತ ಕಮರ್ಶಿಯಲ್ ಹೆಚ್ಚಾಯ್ತಾ” ಎಂಬ ಟ್ಯಾಗ್ ಲೈನ್ ವೈರಲ್ ಆಗಿದ್ದು ಸದ್ಯ ಉಡುಪಿಯ ಬೈಂದೂರಿನಲ್ಲಿ ಕಾಂತಾರ ಚಾಪ್ಟರ್ 1 ಚಿತ್ರೀಕರಣ ನಡೆಯುತ್ತಿದೆಂದು ಮಾಹಿತಿ ದೊರೆತಿದೆ.
ರಾಕೇಶ್ ನ ಉಡುಪಿಯ ಹೂಡೆ ನಿವಾಸಕ್ಕೆ ಒಮ್ಮೆಯೂ ಭೇಟಿ ನೀಡದ ಹಿನ್ನಲೆ ಸಹ ಕಲಾವಿದನ ಜೀವಕ್ಕೆ ಇಷ್ಟೇನಾ ಬೆಲೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆಯಲು ಬೆಂಗಳೂರಿನಿಂದ ಸೆಲೆಬ್ರಿಟಿಗಳು ಓಡೋಡಿ ಬಂದಿದ್ದು ರಕ್ಷಿತಾ ಪ್ರೇಮ್, ಯೋಗರಾಜ್ ಭಟ್, ಮಾಸ್ಟರ್ ಆನಂದ್, ಅನುಶ್ರೀ ಸೇರಿದಂತೆ ಅನೇಕರ ಆಗಮಿಸಿದ್ದರು ಆದರೆ ಉಡುಪಿಯ ಬೈಂದೂರು ಸಮೀಪವಿದ್ದರೂ ಆಗಮಿಸದ ಹಿನ್ನೆಲೆ ರಿಷಬ್ ಶೆಟ್ಟಿ ವಿರುದ್ಧ 500 ಕಿಮಿ ದೂರದಿಂದ ಬಂದವರ ನಡುವೆ 30 ಕಿಮಿ ದೂರದಲ್ಲಿದ್ದು ಬರಲು ಪುರಸೊತ್ತು ಇಲ್ಲವೇ ಎಂದು ಪ್ರಶ್ನಿಸಿ ಸಮಾಜಿಕ ಜಾಲತಾಣದಲ್ಲಿ ರಿಷಭ್ ಶೆಟ್ಟಿ ವಿರುದ್ಧ ಅಕ್ರೋಶ ಹೊರಹಾಕಿದ್ದಾರೆ.