Friday, March 13, 2026
Flats for sale
Homeವಿದೇಶಉಡುಪಿ : ಬಿಸಿಲ ತಾಪಕ್ಕೆ ದುಬೈನಲ್ಲಿ ಕುಂದಾಪುರದ ಯುವಕ ಸಾವು…!

ಉಡುಪಿ : ಬಿಸಿಲ ತಾಪಕ್ಕೆ ದುಬೈನಲ್ಲಿ ಕುಂದಾಪುರದ ಯುವಕ ಸಾವು…!

ಉಡುಪಿ : ದುಬೈನಲ್ಲಿ ಬಿಸಿಲಿನ ಝಳ ತಾಳಲಾರದೆ ಕುಂದಾಪುರದ ವಿಠಲವಾಡಿ ನಿವಾಸಿ ಯುವಕ ಶಾನ್‌ ಡಿಸೋಜಾ (19 ವರ್ಷ) ಮೃತ ಪಟ್ಟ ಘಟನೆ ವರದಿಯಾಗಿದೆ.ಶಾನ್ ಡಿಸೋಜಾ ಅವರು ಮೂಲತಃ ಮೂಡುಬಿದಿರೆಯ ಹೊಸಬೆಟ್ಟು ನಿವಾಸಿಗಳಾದ ಇಲಿಯಾಸ್ ಸಿರಿಲ್ ಡಿಸೋಜ ಮತ್ತು ಪ್ರಮೀಳಾ ಡಿಸೋಜಾ ದಂಪತಿಯ ಪುತ್ರ.

ಖಾಸಗಿ ಕಂಪೆನಿಯಲ್ಲಿ ಮ್ಯಾನೆಜರ್‌ ಆಗಿದ್ದ ಶಾನ್, ಅಲ್ಲಿಯೇ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದರು. ಬಿಸಿಲಿನ ತಾಪ ಮೂರ್ಚೆ ಹೋಗಿ ಆರ್‌ಎಕೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ರವಿವಾರ ಮೃತರಾಗಿದ್ದಾರೆ. ದುಬೈನಿಂದ ಸುಮಾರು 115 ಕಿ.ಮೀ ದೂರದಲ್ಲಿರುವ ರಾಸ್ ಅಲ್ ಖೈಮಾದ ಆಸ್ಪತ್ರೆಯಲ್ಲಿ ಶಾನ್ ಅವರನ್ನು ದಾಖಲಿಸಿದ್ದರು. ದುರದೃಷ್ಟವಶಾತ್ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಕೊನೆಯುಸಿರೆಳೆದಿದ್ದಾರೆ. ಇವರು ತಂದೆ-ತಾಯಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular