Wednesday, December 4, 2024
Flats for sale
Homeವಿದೇಶಅಗರ್ತಲಾ : ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಉದ್ಯೋಗ ಮೀಸಲಾತಿ ಹಿಂಸಾಚಾರ : 105 ಮಂದಿ ಸಾವು, ಕರ್ಫ್ಯೂ...

ಅಗರ್ತಲಾ : ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಉದ್ಯೋಗ ಮೀಸಲಾತಿ ಹಿಂಸಾಚಾರ : 105 ಮಂದಿ ಸಾವು, ಕರ್ಫ್ಯೂ ಜಾರಿ.

ಅಗರ್ತಲಾ : ವಾರದ ಹಿಂದೆ ಆರಂಭಗೊಂಡಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಗುರುವಾರದವರೆಗೆ ದೇಶದ ವಿವಿಧೆಡೆ 75 ಮಂದಿ ಮೃತಪಟ್ಟಿದ್ದರು. ಶುಕ್ರವಾರ ಢಾಕಾದ ಮೂರು ಆಸ್ಪತ್ರೆಗಳಲ್ಲಿ 24 ಮಂದಿ ಹಾಗೂ ರಂಗ್‌ಪುರದಲ್ಲಿ ಆರು ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಒಟ್ಟು ಸಾವುನೋವುಗಳ ಸಂಖ್ಯೆಯನ್ನು ಕನಿಷ್ಠ 105 ಕ್ಕೆ ಏರಿದ್ದು ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ ಸುಮಾರು 2,500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ರಾಜಧಾನಿಯ ಢಾಕಾ ವಿಶ್ವವಿದ್ಯಾಲಯದಲ್ಲಿ ಸೋಮವಾರ ಮೊದಲು ಹಿಂಸಾಚಾರ ಭುಗಿಲೆದ್ದಿತು ಮತ್ತು ಶೀಘ್ರದಲ್ಲೇ ಇತರ ನಗರಗಳಿಗೆ ಹರಡಿದೆ. ಮಂಗಳವಾರ ಆರು ಮಂದಿ ಸಾವನ್ನಪ್ಪಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಕೆಲವೆಡೆ ಇಂಟರ್ನೆಟ್‌ ಹಾಗೂ ಮೊಬೈಲ್‌ ಸೇವೆ ಕಡಿತಗೊಳಿಸಲಾಗಿದ್ದು ಪ್ರತಿಭಟನಕಾರರ ಮೇಲೆ ಪೊಲೀಸರು, ಭದ್ರತಾ ಪಡೆಗಳು ಗುಂಡಿನ ದಾಳಿ, ಅಶ್ರುವಾಯು ಪ್ರಯೋಗಿಸಿದ್ದಾರೆ. ಕಳೆದೊಂದು ವಾರದಲ್ಲಿ ಸಂಘರ್ಷದಲ್ಲಿ ಮೃತಪಟ್ಟವರ ಸಂಖ್ಯೆ 105ಕ್ಕೆ ಏರಿಕೆಯಾಗಿದೆ. ಶುಕ್ರವಾರ ಬೆಳಿಗ್ಗೆ ರಾಜಧಾನಿ ಢಾಕಾದಲ್ಲಿ ಇಂಟರ್‌ನೆಟ್‌ ಸೇವೆ ಆರಂಭಗೊಂಡರೂ, ನಿಧಾನಗತಿಯಿಂದ ಸಾಮಾಜಿಕ ಜಾಲತಾಣ ಗಳಾದ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಪುಟಗಳು ತೆರೆಯುತ್ತಿರಲಿಲ್ಲ.

ಹೆಚ್ಚಿನ ಸಾವುಗಳು ಢಾಕಾದಲ್ಲಿ ವರದಿಯಾಗಿದೆ, ಅಲ್ಲಿ ಪ್ರತಿಭಟನಾಕಾರರು ಪೊಲೀಸರು ಮತ್ತು ಆಡಳಿತಾರೂಢ ಅವಾಮಿ ಲೀಗ್ ಪಕ್ಷದ ಕಾರ್ಯಕರ್ತರೊಂದಿಗೆ ಘರ್ಷಣೆ ನಡೆಸಿದರು. ಭದ್ರತಾ ಅಧಿಕಾರಿಗಳು ಮತ್ತು ಆಡಳಿತ ಪಕ್ಷದ ಕಾರ್ಯಕರ್ತರ ವಿರುದ್ಧ ಪ್ರತಿಭಟನಾಕಾರರನ್ನು ಎತ್ತಿಕಟ್ಟುವ ಇತ್ತೀಚಿನ ಘರ್ಷಣೆಯಲ್ಲಿ ಢಾಕಾದ ಉತ್ತರಾ ಪ್ರದೇಶದಲ್ಲಿ ಮಾತ್ರ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಢಾಕಾ ಮೂಲದ ಪತ್ರಿಕೆ ಪ್ರೋಥೋಮ್ ಅಲೋ ಹೇಳಿದೆ.

ಇದರೊಂದಿಗೆ ಕೆಲವು 24 ಗಂಟೆಗಳ ತುರ್ತು ಸಹಾಯವಾಣಿಯನ್ನೂ ಭಾರತ ಬಿಡುಗಡೆ ಮಾಡಿದೆ. “ಒಂದು ವೇಳೆ ಏನಾದರೂ ತುರ್ತಿದ್ದರೆ ಅಥವಾ ನೆರವಿನ ಅಗತ್ಯವಿದ್ದರೆ, ದಯವಿಟ್ಟು ನಮ್ಮ ಹೈಕಮಿಷನ್ ಕಚೇರಿಗಳನ್ನು ಸಂಪರ್ಕಿಸಿ”” ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular