ಹೊಸಪೇಟೆ : ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಐದು ವರ್ಷ ನಮ್ಮ ಸರ್ಕಾರವೇ ಇರಲಿದೆ. ನಾನೇ ಸಿಎಂ ಆಗಿ ಮುಂದುವರಿಯುವೆ. ಅನುಮಾನ ಬೇಡ ಎಂದು ಮುಖ್ಯಮAತ್ರಿ ಸಿದ್ದರಾಮಯ್ಯ ಖಚಿತ ಮಾತುಗಳಲ್ಲಿ ಹೇಳಿದ್ದಾರೆ.
ವಿಜಯನಗರ ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಸಂದರ್ಭದಲ್ಲಿ ಕೊಪ್ಪಳ ತಾಲೂಕಿನ ಬಸಾಪುರ ಎಂ.ಎಸ್.ಪಿ.ಎಲ್. ವಿಮಾನ ನಿಲ್ದಾಣದಲ್ಲಿ ಹಾಗೂ ಹೊಸಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ರಾಜ್ಯಕ್ಕೆ ಬಂದಿದ್ದು ಅಸಮಾಧಾನ ಶಮನಕ್ಕಲ್ಲ ಲೋಕಸಭಾ ಚುನಾವಣೆಯ ತಯಾರಿಗಾಗಿ ಎಂದು ಸ್ಪಷ್ಟಪಡಿಸಿದರು.
ಐದು ವರ್ಷದ ನಂತರ ಚುನಾವಣೆ ನಡೆದ ಮೇಲೆಯೂ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ನಮ್ಮ ಯಾವ ಶಾಸಕರೂ ಅಸಮಾಧಾನಗೊಂಡಿಲ್ಲ. ೬ ತಿಂಗಳಲ್ಲಿ ಸರ್ಕಾರ ಬೀಳುತ್ತದೆ ಎನ್ನುವ ಯತ್ನಾಳ್ಹ ಗಲುಗನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಇನ್ನೂ ೨-೩ ಡಿಸಿಎಂ ಹುದ್ದೆ ನಿರ್ಮಿಸಬೇಕೆಂಬ ಕೆಲವರ ಒತ್ತಡದ ಕುರಿತಂತೆ ಪ್ರತಿಕ್ರಿಯಿಸಿ, ಈ ವಿಚಾರ ತೀರ್ಮಾನ ಮಾಡೋದು ಹೈಕಮಾಂಡ್ಗೆ ಬಿಟ್ಟದ್ದು. ನಮ್ಮದು ನ್ಯಾಷನಲ್ ಪಾರ್ಟಿ, ಏನೇ ತೀರ್ಮಾನ ಆದ್ರು ಹೈಕಮಾಂಡ್ ಜೊತೆ ಚರ್ಚೆ ಮಾಡಿನೇ ತೆಗೆದುಕೊಳ್ಳುವುದು ಎಂದರು.
ಕೇAದ್ರದ ಮಲತಾಯಿ ಧೋರಣೆ: ಬರ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರಿಸುತ್ತಿದೆ. ಸಚಿವ ಸಂಪುಟದ ನಾಲ್ವರು ಸಚಿವರು ದೆಹಲಿಗೆ ಹೋದರೂ ಪ್ರಧಾನಿ ಮತ್ತು ಸಂಬAಧಿಸಿದ ಸಚಿವರು ಭೇಟಿಗೆ ಸಮಯ ನೀಡುತ್ತಿಲ್ಲ. ಬಿಜೆಪಿ ಬರ ಅಧ್ಯಯನ ಬಿಟ್ಟು, ಕೇಂದ್ರ ಸರ್ಕಾರದಿಂದ ಬರ ಪರಿಹಾರ ಕೊಡಿಸುವ ಕೆಲಸ ಮಾಡಬೇಕು. ರಾಜ್ಯದಲ್ಲಿ ೨೫ ಸಂಸದರಿದ್ದು, ಏನು ಮಾಡುತ್ತಿದ್ದಾರೆ? ಬಿಜೆಪಿ ಸಂಸದರು ಅನುದಾನ ಬಿಡುಗಡೆ ಮಾಡಿಸಿಕೊಂಡು ಬರಲಿ ಎಂದು ವಾಗ್ದಾಳಿ ನಡೆಸಿದರು.
ಕಾನೂನುಬದ್ಧ ಗಣಿಗಾರಿಕೆಗೆ ಅವಕಾಶ: ರಾಜ್ಯದಲ್ಲಿ ಕಾನೂನುಬದ್ಧ ಗಣಿಗಾರಿಕೆ ನಡೆಸಲು ಸರ್ಕಾರ ಸಹಕಾರ ನೀಡಲಿದೆ. ಅರಣ್ಯ ಇರಲಿ, ಕಂದಾಯ ಜಮೀನು ಇರಲಿ, ಕಾನೂನುಬದ್ಧವಾಗಿ ಲೈಸೆನ್ಸ್ ಪಡೆದಿದ್ದರೆ, ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.


