ಹಾಸನ : ಚಿಕ್ಕಮಗಳೂರಿನಿಂದ ಸುಬ್ರಮಣ್ಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ರಸ್ತೆ ಬದಿ ಕಾರು ನಿಲ್ಲಿಸುತ್ತಿದ್ದಂತೆ ಕಾರಿಗೆ ದಿಢೀರ್ ಬೆಂಕಿ ಕಾಣಿಸಿಕೊಂಡ ಘಟನೆ ಹಾಸನ ಜಿಲ್ಲೆಯಾ ಬೇಲೂರು ತಾಲ್ಲೂಕಿನ, ಕಡೆಗರ್ಜೆ ಗ್ರಾಮದ ಬಳಿ ನಡೆದಿದೆ.
ಡಾ.ಶೇಷಾದ್ರಿ ಅವರಿಗೆ ಸೇರಿದ ಕಾರು ಇದಾಗಿದ್ದು ಜೊತೆಯಲ್ಲಿ ಅವರ ಪತ್ನಿ ಇದ್ದರೆಂದು ತಿಳಿದುಬಂದಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಶಂಕೆ ವ್ಯಕ್ತವಾಗಿದ್ದು ಕಡೆಗರ್ಜೆ ಬಳಿ ಕಾರು ನಿಲ್ಲಿಸಿ ದಂಪತಿ ಕೆಳಗಿಳಿದು ಪ್ರಾಣ ಉಳಿಸಿಕೊಂಡಿದ್ದಾರೆ .ಕೆಲವೇ ಕ್ಷಣಗಳಲ್ಲಿ ಇಡೀ ಕಾರಿಗೆ ಬೆಂಕಿ ವ್ಯಾಪಿಸಿದ್ದು ಹೊಸ ಕಿಯಾ ಕಾರು ಸಂಪೂರ್ಣ ಸುಟ್ಟುಹೋಗಿದೆ.ನೋಡ ನೋಡುತ್ತಲೇ ಕಾರುಧಗದಗಿಸಿ ಹೊತ್ತಿ ಉರಿಡಿದ್ದು ಮುಂಜಾನೆಯಾಗಿದ್ದರಿಂದ ಸ್ಥಳೀಯರು ಸಹಾಯಕ್ಕೆ ಬಾರದೆ ದಂಪತಿ ಕಂಗಾಲಾಗಿದ್ದಾರೆ. ಅದೃಷ್ಟವಶಾತ್ ಕಾರಿನಲ್ಲಿದ್ದ ದಂಪತಿ ಪ್ರಾಣಾಪಾಯದಿಂದ ಪಾರಗಿದ್ದು ಕೆಲಕಾಲ ಅಸಹಾಯಕರಾಗಿ ಸ್ಥಳದಲ್ಲೇ ನಿಂತುಬಳಿಕ ಪೊಲೀಸ್ ಠಾಣೆಗೆ ತೆರಳಿದ್ದಾರೆಂದು ಮಾಹಿತಿ ದೊರೆತಿದೆ.
ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.