Saturday, November 23, 2024
Flats for sale
Homeರಾಜ್ಯಹಾವೇರಿ : ಶಿಗ್ಗಾಂವಿ ಪುರಸಭೆಯಿಂದ ಕುಡಿಯುವ ನೀರಿನ ಬದಲು ಕಬ್ಬಿನ ಹಾಲಿನ ಬಣ್ಣದ ಕೊಳಕು ನೀರು...

ಹಾವೇರಿ : ಶಿಗ್ಗಾಂವಿ ಪುರಸಭೆಯಿಂದ ಕುಡಿಯುವ ನೀರಿನ ಬದಲು ಕಬ್ಬಿನ ಹಾಲಿನ ಬಣ್ಣದ ಕೊಳಕು ನೀರು ವಿತರಣೆ..!

ಹಾವೇರಿ : ಶಿಗ್ಗಾಂವಿ ಪುರಸಭೆಯಿಂದ ನಗರದ ಕೆಲವು ವಾರ್ಡುಗಳಲ್ಲಿ ಕೆಲವು ವಾರಗಳಿಂದ ಕುಡಿಯುವ ನೀರಿನ ಬದಲು ಕಬ್ಬಿನ ಹಾಲು ಸರಬರಾಜು ಮಾಡುತ್ತಿದ್ದಾರೆಯೇ ಎಂದು ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.

ಅದೇನು ಎಂದು ವಿಚಾರಿಸಿದಾಗ ಕಬ್ಬಿನ ಹಾಲು ಹೊಲುವಂತ ಕೊಳಕು ನೀರನ್ನು ಬಿಡಲಾಗುತ್ತಿದೆ ಸಾರ್ ನಮ್ಮ ವಾರ್ಡಿ ನಲ್ಲಿ ಕೊಳಕು ನೀರು ಬರುತ್ತಿದೆ ಎಂದು ಪುರಸಭೆ ಅಧಿಕಾರಿಗಳನ್ನು ಕೇಳಿದರೆ ಅವರಿಂದ ಬರುವ ಉತ್ತರ ಒಂದೇ ಭೇಟಿ ನೀಡುತ್ತೆವೆ ಎಂದು ಅಬ್ಬೇಪಾರಿ ಮಾತು ಬರುತ್ತಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ, ಅಲ್ಲ ಪುರಸಭೆಯಿಂದ ಕುಡಿಯುವ ನೀರು ಸರಬರಾಜು ಮಾಡಲು ಕೋಟಿ ಕೋಟಿ ಹಣ ಖರ್ಚಾಗುತ್ತಿದೆ ಆದರೆ ಅಧಿಕಾರಿಗಳು ಮಾತ್ರ ಕೊಳಕು ನೀರು ಕುಡಿಸುತ್ತಿದ್ದಾರೆ ಆ ಹಣ ಎಲ್ಲಿ ಹೋಗುತ್ತಿದೆ ಎಂದು ಸಹ ಜನಸಾಮನ್ಯರು ಮಾತನಾಡಿಕೊಳ್ಳುತ್ತಿದ್ದಾರೆ.

ಮೊನ್ನೆ ಸಾರ್ವಜನಿಕರೊಬ್ಬರು ಮುಖ್ಯಾಧಿಕಾರಿಗಳಿಗೆ ಕೊಳಕು ನೀರು ಬರುತ್ತಿದೆ ಎಂದು ಕರೆ ಮಾಡಿದರೆ ಅದನ್ನೆ ಕುಡಿರಿ ಏನು ಆಗುವದಿಲ್ಲ ಎಂದು ಹೇಳಿದ್ದಾರಂತೆ ಯಪ್ಪ ಎಲ್ಲಿಗೆ ಬಂದು ಪರಿಸ್ಥಿತಿ ಅಂತ ಸಾರ್ವಜನಿಕರ ಆರೋಗ್ಯದ ಜೋತೆ ಈ ಅಧಿಕಾರಿಗಳು ಆಟವಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಡಿಸಿಯವರಿಗೆ ಎರಡು ದಿನಗಳಿಗೊಮಮ್ಮೆ ನೀಡು ಬಿಡುತ್ತೆವೆ ಎಂದು ಪತ್ರ ಬರೆದವರು ಯಾಕೆ ವಾರಕ್ಕೊಮ್ಮೆ ನೀರು ಬಿಡುತ್ತಿದ್ದಾರೆ ಎಂದು ಸಾರ್ವಜನಿಕರು ಮಾಡುತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular