ಹಾವೇರಿ : ಕದ್ದ ಮನೆಯಲ್ಲೆ ಚಹಾ ಮಾಡಿಕೊಂಡು ಕುಡಿದು ಉಂಡು ಹೋದ ಘಟನೆ ಹಾವೇರಿ ಹೊರವಲಯದ ನಾಗೇಂದ್ರನಮಟ್ಟಿಯಲ್ಲಿ ನಡೆದಿದೆ.ಕಳ್ಳರು ಮನೆಯಲ್ಲಿದ್ದ ವಸ್ತುಗಳನ್ನು ಕಳ್ಳತನ ಮಾಡಿದ್ದು ಅಲ್ಲದೆ ಕದ್ದ ಮನೆಯಲ್ಲೆ ಚಹಾ ಮಾಡಿಕೊಂಡು ಕುಡಿದು ಹೋಗಿದ್ದಾರೆ.
ಕಳ್ಳರ ಗ್ಯಾಂಗ್ ಒಂದೆ ರಾತ್ರಿ 7 ಮನೆ ಕಳವು ಮಾಡಿದ್ದು ಹಣ,ಚಿನ್ನಾಭರಣ ದೋಚಿ ಹೊರಬಂದಿದ್ದಾರೆ. ನಾಗರಾಜ್, ಪಾತೀಮಾ, ನೂರಜಾನ್, ಸಲ್ಮಾ, ಬಸವರಾಜ್, ಹಾಗೂ ಬಿರೇಶ್ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ್ದೂ ಕೂಲಿ ಕಾರ್ಮಿಕರ ಮನೆಯನ್ನೆ ಕಳ್ಳರು ಟಾರ್ಗೆಟ್ ಮಾಡಿದ್ದಾರೆ.
ಕೆಲಸ ಮಾಡಿ ಬೇಗ ಮಲಗುತ್ತಾರೆ ಎಂದು ಯೋಚಿಸಿ ಕಳ್ಳತನದ ಉಪಾಯ ಕಳ್ಳರಿಗೆ ಹೊಳೆದಿದ್ದು ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿ ಸರಣಿ ಕಳ್ಳತನ ನಡೆಸಿದ್ದಾರೆ.ಒಟ್ಟು ಏಳಕ್ಕೂ ಅಧಿಕ ಮನೆಗಳಲ್ಲಿ ಕಳ್ಳರು ಕರಾಮತ್ತು ನಡೆಸಿದ್ದು ಹಣ,ಆಭರಣ ಹಾಗೂ ಬೆಲೆ ಬಾಳುವ ವಸ್ತು ಕಳಕೊಂಡು ಕುಟುಂಬಸ್ಥರು ದುಃಖದಲ್ಲಿ ತಲೆಕೆಡಿಸಿಕೊಂಡಿದ್ದಾರೆ. ಖದೀಮರು. 7-8 ಲಕ್ಷ ಮೌಲ್ಯದ ವಸ್ತುಗಳು ಕದ್ದಿದ್ದು ಸಿಸಿ ಕ್ಯಾಮರಾ ಹಾಕುವಂತೆ ಪೊಲೀಸರು ಆಗ್ರಹಿಸಿದ್ದಾರೆ.
ಇದೀಗ ಕಳ್ಳರ ಪತ್ತೆಗಾಗಿ ಪೋಲಿಸರಿಂದ ಶೋದಕಾರ್ಯ ನಡೆಯುತ್ತಿದ್ದು ಹಾವೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


