Monday, November 3, 2025
Flats for sale
Homeರಾಜ್ಯಸಕಲೇಶಪುರ : ಬಿಸಿಲೆ ಘಾಟ್ ನಲ್ಲಿ ವಣಗೂರಿನಿಂದ ಕುಕ್ಕೆ ಸುಬ್ರಮಣ್ಯಕ್ಕೆ ಮದುವೆಗೆ ಹೊರಟಿದ್ದ ವ್ಯಾನ್ ಪಲ್ಟಿ,ನಾಲ್ವರಿಗೆ...

ಸಕಲೇಶಪುರ : ಬಿಸಿಲೆ ಘಾಟ್ ನಲ್ಲಿ ವಣಗೂರಿನಿಂದ ಕುಕ್ಕೆ ಸುಬ್ರಮಣ್ಯಕ್ಕೆ ಮದುವೆಗೆ ಹೊರಟಿದ್ದ ವ್ಯಾನ್ ಪಲ್ಟಿ,ನಾಲ್ವರಿಗೆ ಗಂಭೀರ ಗಾಯ…!

ಸಕಲೇಶಪುರ : ವಣಗೂರಿನಿಂದ ಕುಕ್ಕೆ ಸುಬ್ರಮಣ್ಯಕ್ಕೆ ಮದುವೆಗೆ ಹೊರಟಿದ್ದ 30 ಜನರಿದ್ದ ವ್ಯಾನ್ ಬಿಸಿಲೆ ಘಾಟ್ ಡಬಲ್ ಟರ್ನ್ ನಲ್ಲಿ 20 ಅಡಿ ಎತ್ತರದಿಂದ ಮಗುಚಿ ಬಿದಿದ್ದು 4 ಜನರಿಗೆ ಗಂಭೀರ ಗಾಯವಾಗಿರುವ ಘಟನೆ ತಾಲ್ಲೂಕಿನ ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಡೆದಿದೆ.

ವಣಗೂರು ಕುಣಿಕೆರೆ ಬಸವೇಗೌಡರ ಮಗ ಯೋಗೇಶ್ ಅವರ ಮದುವೆ ಇಂದು ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಲಗುಂದ ಹುಡುಗಿಯೊಂದಿಗೆ ನಿಶ್ಚಯವಾಗಿತ್ತು. ಇಂದು ಬೆಳಗ್ಗೆ ಮದುವೆ ಇದ್ದ ಕಾರಣ ಗಂಡಿನ ಕಡೆಯವರು ಮಿನಿ ಬಸ್ (KA12B 2579)ನಲ್ಲಿ 30 ಜನರು ಹೊರಟಿದ್ದರು.

ಬಿಸಿಲೆ ಘಾಟ್ ಡಬಲ್ ಟರ್ನಲ್ಲಿ ರಸ್ತೆಯ ಪಕ್ಕದಲ್ಲಿ ತೆಗೆದ ಚರಂಡಿ ಹಾಗೂ ಚಾಲಕನ ನಿಯಂತ್ರಣ ತಪ್ಪಿದ ಬಸ್ 30 ಅಡಿ ಆಳಕ್ಕೆ ಮಗುಚಿ ಬಿದ್ದಿದೆ. ನಾಲ್ಕು ಜನರ ಸ್ಥಿತಿ ಗಂಭೀರವಾಗಿದೆ,ಉಳಿದವರು ಸಣ್ಣಪುಟ್ಟ ಗಾಯಗಳಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು, ನಲ್ಯಾಣಿ ಹಾಗೂ ಸಕಲೇಶಪುರಕ್ಕೆ ಆಂಬುಲೆನ್ಸ್ ಮೂಲಕ ಕಳುಹಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular